Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಕೊನೆಗೂ ನಿವೃತ್ತಿ ಬಗ್ಗೆ ಮೌನ ಮುರಿದ ಧೋನಿ; ಕೊನೆ ಸೀಸನ್ ಎಂದಾಗ ಕೊಟ್ರು ಈ ಉತ್ತರ!

IPL 2023: MS Dhoni breaks silence and gives clarification about his IPL retirement

ಸದ್ಯ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಂದು ( ಮೇ 3 ) ಎರಡು ಪಂದ್ಯಗಳು ಜರುಗುತ್ತಿವೆ. ಮಧ್ಯಾಹ್ನದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದು, ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಡುತ್ತಿವೆ.

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಪಂದ್ಯದ ಟಾಸ್ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿ ನೀಡಿದ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೌದು, ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಈ ವೇಳೆ ಖ್ಯಾತ ಕಾಮೆಂಟೇಟರ್ ಡ್ಯಾನಿ ಮೊರಿಸನ್ ಎಂಎಸ್ ಧೋನಿ ಅವರ ಬಳಿ ಮಾತನಾಡುವಾಗ ರಿಟೈರ್‌ಮೆಂಟ್ ಬಗ್ಗೆ ಪ್ರಶ್ನೆಯನ್ನು ಹಾಕಿದರು. ಈ ಪ್ರಶ್ನೆಗೆ ಧೋನಿ ನಗುತ್ತಲೇ ಉತ್ತರ ನೀಡಿದ್ದು, ಇದು ಎಂ ಎಸ್ ಧೋನಿ ಅಭಿಮಾನಿಗಳಲ್ಲಿ ಸಂತಸ ತಂದಿದೆ.

ಡ್ಯಾನಿ ಮೊರಿಸನ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಿಮ್ಮ ಕೊನೆಯ ಟೂರ್ನಿಯಾಗಿದ್ದು, ಇದನ್ನು ನೀವು ಹೇಗೆ ಎಂಜಾಯ್ ಮಾಡುತ್ತಿದ್ದೀರಿ ಎಂದು ಪ್ರಶ್ನೆಯನ್ನು ಕೇಳಿದರು. ಡ್ಯಾನ್ ಮೊರಿಸನ್ ಕೇಳಿದ್ದ ಈ ಪ್ರಶ್ನೆ ಎಂ ಎಸ್ ಧೋನಿ ಅಭಿಮಾನಿಗಳ ಹಾಗೂ ಕ್ರಿಕೆಟ್ ಪ್ರೇಮಿಗಳ ಮನದಲ್ಲಿದ್ದ ಪ್ರಶ್ನೆಯಾಗಿತ್ತು.

ಈ ರೀತಿಯ ಪ್ರಶ್ನೆ ಎದುರಾಗುತ್ತಿದ್ದಂತೆ ಧೋನಿ ಬಾಯಿಂದ ಯಾವ ರೀತಿಯ ಉತ್ತರ ಬರಬಹುದು ಎಂದು ಎಲ್ಲರೂ ಕಾತರರಾಗಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಧೋನಿ "ಸರಿ.. ಈ ಬಾರಿಯ ಐಪಿಎಲ್ ಟೂರ್ನಿ ನನ್ನ ಕೊನೆಯ ಸೀಸನ್ ಎಂದು ನೀವು ತೀರ್ಮಾನಿಸಿದ್ದೀರ.." ಎಂದು ನಗುತ್ತಾ ಹೇಳಿದರು. ಧೋನಿ ಈ ರೀತಿಯ ಉತ್ತರ ನೀಡುತ್ತಿದ್ದಂತೆಯೇ ಮತ್ತೆ ಮಾತನಾಡಿದ ಡ್ಯಾನಿ ಮೊರಿಸನ್ "ಹಾಗಾದರೆ ನೀವು ಆಡಲು ಮತ್ತೆ ಬರುತ್ತೀರ.. ಧೋನಿ ಮುಂದಿನ ಸೀಸನ್ ಅನ್ನೂ ಸಹ ಆಡಲಿದ್ದಾರೆ" ಎಂದು ಹೇಳಿಕೆ ನೀಡಿದರು.

ಡ್ಯಾನಿ ಮೊರಿಸನ್ ಈ ಹೇಳಿಕೆ ನೀಡುವಾಗಲೂ ಎಂ ಎಸ್ ಧೋನಿ ನಗುಮೊಗದಿಂದ ನಿಂತುಕೊಂಡಿದ್ದರು. ಈ ಮೂಲಕ ಎಂ ಎಸ್ ಧೋನಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಕೊನೆಯ ಟೂರ್ನಿಯಲ್ಲ ಎಂಬುದನ್ನು ಖಚಿತಪಡಿಸಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಧೋನಿ ಅಭಿಮಾನಿಗಳು ಈ ಹೇಳಿಕೆಯ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

Story first published: Wednesday, May 3, 2023, 17:41 [IST]
Other articles published on May 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+