Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಗವಾಸ್ಕರ್ ಶರ್ಟ್ ಮೇಲೆ ಸಹಿ, ಫ್ಯಾನ್ಸ್‌ಗೆ ಸೆಲ್ಫಿ ಜತೆ ಧನ್ಯವಾದ ತಿಳಿಸಿದ ಧೋನಿ; ನಿವೃತ್ತಿ ಪಕ್ಕಾ?

IPL 2023: MS Dhoni hints about his retirement after the match against Kolkata Knight Riders

ನಿನ್ನೆ ( ಮೇ 14 ) ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 60 ಹಾಗೂ 61ನೇ ಪಂದ್ಯಗಳು ಜರುಗಿದವು. ಮೊದಲು ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಯ ಗಳಿಸಿದರೆ, ನಂತರ ರಾತ್ರಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾದವು.

ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೊಲ್ಕತ್ತಾ ನೈಟ್ ರೈಡರ್ಸ್ ಸೋಲುಣಿಸಿತು. ತವರಿನಲ್ಲಿಯೇ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 144 ರನ್ ಕಲೆಹಾಕಿ ಎದುರಾಳಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಗೆಲ್ಲಲು 145 ರನ್‌ಗಳ ಸಾಧಾರಣ ಗುರಿಯನ್ನು ನೀಡಿತು.

ಈ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ 18.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 147 ರನ್ ಕಲೆಹಾಕಿತು. ಈ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ 6 ವಿಕೆಟ್‌ಗಳ ಗೆಲುವನ್ನು ದಾಖಲಿಸಿತು. ಇನ್ನು ಈ ಪಂದ್ಯ ಗೆದ್ದಿದ್ದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಆಫ್ ಪ್ರವೇಶ ಖಚಿತವಾಗುತ್ತಿತ್ತು. ಆದರೆ ಸೋತ ಕಾರಣ ಇದೀಗ ತನ್ನ ಕೊನೆಯ ಪಂದ್ಯದ ಫಲಿತಾಂಶದವರೆಗೂ ಸಹ ಕಾಯಬೇಕಿದೆ.

ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ಮುಖ್ಯವಾದ ಪಂದ್ಯದಲ್ಲಿಯೇ ಸೋಲನ್ನುಂಡಿದ್ದು ತವರು ನೆಲದಲ್ಲಿಯೇ ಮುಖಭಂಗಕ್ಕೊಳಗಾಗಿದೆ. ಇನ್ನು ಈ ಪಂದ್ಯ ಮುಕ್ತಾಯವಾದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ನಿವೃತ್ತಿಯ ಮುನ್ಸೂಚನೆ ನೀಡಿದ್ದಾರೆ ಎಂಬ ಅಭಿಪ್ರಾಯಗಳು ದೊಡ್ಡ ಮಟ್ಟದಲ್ಲಿ ಹರಿದಾಡಿವೆ.

ಹೌದು, ಇಷ್ಟು ದಿನಗಳ ಹಾಗೆ ಪಂದ್ಯ ಮುಕ್ತಾಯವಾದ ಬಳಿಕ ಧೋನಿ ನೇರವಾಗಿ ಪೆವಿಲಿಯನ್‌ಗೆ ಹೋಗಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರ ಜತೆ ಎಂಎ ಚಿದಂಬರಂನ ಮೈದಾನವನ್ನು ಒಂದು ಸುತ್ತು ಹಾಕಿ ನೆರೆದಿದ್ದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು. ಅಲ್ಲದೇ ಅಭಿಮಾನಿಗಳ ಜತೆ ಸೆಲ್ಫಿಯನ್ನು ತೆಗೆದುಕೊಂಡರು.

ಎಂಎಸ್ ಧೋನಿ ನಡೆದುಕೊಂಡ ರೀತಿಯನ್ನು ಕಂಡ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಇದೇ ಧೋನಿಯ ಕೊನೆಯ ಐಪಿಎಲ್ ಸೀಸನ್ ಇರಬಹುದಾ ಎಂಬ ಅನುಮಾನ ಮೂಡಿತು. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ 'ಥ್ಯಾಂಕ್ ಯೂ ಧೋನಿ' ಎಂಬ ಹ್ಯಾಷ್ ಟ್ಯಾಗ್ ಸಹ ಟ್ರೆಂಡ್ ಆಯಿತು.

ಇನ್ನು ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸಹ ತಮ್ಮ ಶರ್ಟ್ ಮೇಲೆ ಎಂಎಸ್ ಧೋನಿಯ ಆಟೋಗ್ರಾಫ್ ಹಾಕಿಸಿಕೊಂಡರು. ಹೀಗೆ ನಿನ್ನೆಯ ಪಂದ್ಯದ ಮೂಲಕ ನಡೆದ ಈ ಎಲ್ಲಾ ಚಟುವಟಿಕೆಗಳು ಬೀಳ್ಕೊಡುಗೆ ಸಮಾರಂಭದ ಹಾಗೆಯೇ ಇತ್ತು. ಹೀಗಾಗಿ ಎಂಎಸ್ ಧೋನಿ ಮುಂದಿನ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡುವುದಿಲ್ಲ ಎಂಬ ಅನುಮಾನ ಮೂಡಿದ್ದು, ನಿವೃತ್ತಿ ಘೋಷಿಸುವುದು ಪಕ್ಕಾನಾ ಎಂಬ ಪ್ರಶ್ನೆ ಎದ್ದಿದೆ.

ಸದ್ಯ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 13 ಪಂದ್ಯಗಳನ್ನಾಡಿ 7 ಪಂದ್ಯಗಳಲ್ಲಿ ಗೆದ್ದು 4 ಪಂದ್ಯಗಳಲ್ಲಿ ಸೋತು ಒಂದು ಪಂದ್ಯದಲ್ಲಿ ಫಲಿತಾಂಶ ಕಾಣದೇ ಇರುವ ಚೆನ್ನೈ ಸೂಪರ್ ಕಿಂಗ್ಸ್ 15 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಪ್ಲೇಆಫ್ ಪ್ರವೇಶಿಸಲು ಇನ್ನುಳಿದ ಒಂದು ಪಂದ್ಯವನ್ನು ಕಡ್ಡಾಯವಾಗಿ ಗೆಲ್ಲಲೇಬೇಕಿದೆ.

Story first published: Monday, May 15, 2023, 14:12 [IST]
Other articles published on May 15, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+