
ಮುಂಬೈ ಇಂಡಿಯನ್ಸ್ ತಂಡದ ನೂತನ ಹೆಡ್ ಕೋಚ್ ಮಾರ್ಕ್ ಬೌಷರ್ ಐಪಿಎಲ್‌ನಲ್ಲಿ ರೋಹಿತ್ ಶರ್ಮಾಗೆ ಮಾರ್ಗದರ್ಶನ ನೀಡುವುದೇ ಕುತೂಹಲಕಾರಿ ಅಂಶವಾಗಿರಲಿದೆ ಎಂದಿದ್ದಾರೆ. ರೋಹಿತ್ ಶರ್ಮಾ ಜೊತೆಗೆ ಕುಳಿತು ಚರ್ಚಿಸಿ ಮಾತುಕತೆ ನಡೆಸಲು ತಾನು ಉತ್ಸುಕನಾಗಿದ್ದೇನೆ ಎಂದಿದ್ದಾರೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ.
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿದ್ದ ಮಹೇಲ ಜಯವರ್ದನೆ ಗ್ಲೋಬಲ್ ಹೆಡ್ ಆಫ್ ಪರ್ಫಾರ್ಮೆನ್ಸ್ ಆಫ್ ಫ್ರಾಂಚೈಸಿ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಮುಖ್ಯ ಕೋಚ್ ಆಗಿ ಮಾರ್ಕ್ ಬೌಷರ್‌ಗೆ ಅವಕಾಶ ದೊರೆತಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಇಂಡಿಯಮ್ಸ್ ಫ್ರಾಂಚೈಸಿಯ ಅಧಿಕೃತ ವೆಬ್‌ಸೈಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ರೋಹಿತ್ ಶರ್ಮಾ ಜೊತೆಗೆ ಕರ್ತವ್ಯ ನಿರ್ವಹಿಸಲು ಉತ್ಸುಕನಾಗಿರುವುದಾಗಿ ಹೇಳಿಕೊಂಡಿದ್ದಾರೆ.
"ರೋಹಿತ್ ಶರ್ಮಾಗೆ ಕೋಚಿಣಗ್ ಮಾಡುವುದು ಸ್ವಲ್ಪ ಕುತೂಹಲಕಾರಿಯಾಗಿದೆ. ಈ ಹಿಂದೆ ನಾನು ರೋಹಿತ್ ಶರ್ಮಾ ವಿರುದ್ಧವಾಗಿ ಆಡಿದ್ದೇನೆ. ಆತನೋರ್ವ ಅದ್ಭುತವಾದ ಆಟಗಾರನಾಗಿದ್ದು ಅತ್ಯುತ್ತಮ ನಾಯಕ ಕೂಡ ಹೌದು. ಹಾಗಾಗಿ ಈ ಜವಾಬ್ಧಾರಿಗಾಗಿ ನಾನು ಉತ್ಸುಕನಾಗಿದ್ದೇನೆ. ಆತನ ಜೊತೆಯಾಗಿ ಕುಳಿತು ಚರ್ಚಿಸಲು ನಾನು ಕಾತರನಾಗಿದ್ದೇನೆ. ನಮ್ಮಿಬ್ಬರಲ್ಲಿ ಒಂದೆರಡು ಸಮಾನ ಅಂಶಗಳಿವೆ" ಎಂದಿದ್ದಾರೆ ಮುಂಬೈ ಇಂಡಿಯನ್ಸ್ ತಂಡದ ನೂತನ ಕೋಚ್ ಮಾರ್ಕ್ ಬೌಷರ್.
ಇನ್ನು ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಯಾವ ನಿರೀಕ್ಷೆಗಳಿದೆ ಎಂಬುದನ್ನು ಕೂಡ ಬೌಷರ್ ಹೇಳಿದ್ದಾರೆ. "ಖಮಡಿವಾಗಿಯೂ ನಿರೀಕ್ಷೆಗಳು ಇದೆ. ವಿಶ್ವ ಮಟ್ಟದಲ್ಲಿ ಅತ್ಯುತ್ತಮವಾದ ಕ್ರೀಡಾ ಫ್ರಾಂಚೈಸಿಗಳಲ್ಲಿ ಮುಂಬೈ ಇಂಡಿಯನ್ಸ್ ಕೂಡ ಒಂದಾಗಿದೆ. ಹೀಗಾಗಿ ಸಾಖಷ್ಟು ಜವಾಬ್ಧಾರಿಗಳು ಇದೆ. ನಾನು ಫಲಿತಾಂಶವನ್ನು ಆಧರಿಸಿಕೊಂಡು ಮುಂದುವರಿಯುತ್ತೇನೆ. ಇಲ್ಲಿ ನನ್ನಿಂದ ಹಾಗೂ ಆಟಗಾರರಿಂದ ಪ್ರದರ್ಶನಗಳು ಬರಬೇಕಾಗಿದೆ ಎಂದು ನನಗೆ ತಿಳಿದಿದೆ. ಈ ಸವಾಲು ಸ್ವೀಕರಿಸಲು ನಾನು ಸಿದ್ಧವಾಗಿದ್ದೇನೆ" ಎಂದಿದ್ದಾರೆ ಮಾರ್ಕ್ ಬೌಷರ್.