For Quick Alerts
ALLOW NOTIFICATIONS  
For Daily Alerts
 

IPL 2023: 'ನಿಮ್ಮಂಥವರಿಂದಲೇ ಸಮಸ್ಯೆಗಳಾಗುತ್ತಿದೆ': ಟ್ವಿಟ್ಟರ್‌ನಲ್ಲಿ ಸಿಡಿದೆದ್ದ MI ವೇಗಿ ಜೋಫ್ರ ಆರ್ಚರ್!

ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲರ್ ಜೋಫ್ರ ಆರ್ಚರ್ ಮೊಣಕೈ ಗಾಯಕ್ಕೆ ತುತ್ತಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಬ್ರಿಟಿಷ್ ಮಾಧ್ಯಮವೊಂದನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ವರದಿಯನ್ನು ಪ್ರಕಟಿಸಿದ್ದು ಜೋಫ್ರಾ ಆರ್ಚರ್ ಐಪಿಎಲ್ ಟೂರ್ನಿಯನ್ನು ಮಧ್ಯದಲ್ಲಿಯೇ ತೊರೆದಿದ್ದು ಬೆಲ್ಜಿಯಂಗೆ ಹೆಚ್ಚಿನ ಚಿಕಿತ್ಸೆಗಾಗಿ ತೆರಳಿದ್ದಾರೆ ಎಂಬ ಸುದ್ದಿಯನ್ನು ಕೂಡ ಪ್ರಕಟಿಸಿತ್ತು. ಈ ವಿಚಾರವಾಗಿ ವೇಗಿ ಜೋಫ್ರ ಆರ್ಚರ್ ಟ್ವಿಟ್ಟರ್‌ನಲ್ಲಿ ಆಕ್ರೋಶದಿಂದ ಟ್ವೀಟ್ ಮಾಡಿದ್ದಾರೆ.

ಜೋಫ್ರಾ ಆರ್ಚರ್ ಆಗಾಗ ಗಾಯದ ಸಮಸ್ಯೆಗಳಿಗೆ ತುತ್ತಾಗಿರುವ ಸಂದರ್ಭದಲ್ಲಿ ಮಾಧ್ಯಮಗಳ ಈ ವರದಿ ಜೋಫ್ರಾ ಆರ್ಚರ್‌ಗೆ ಕಿರಿಕಿರಿಯುಂಟು ಮಾಡಿರುವುದು ಅವರ ಟ್ವೀಟ್‌ನಿಂದ ಸ್ಪಷ್ಟವಾಗಿದೆ. 2022ರ ಆವೃತ್ತಿಗೂ ಮುನ್ನ ನಡೆದ ಮೆಗಾ ಆಕ್ಷನ್‌ನಲ್ಲಿ 8 ಕೋಟಿಗೆ ಜೋಫ್ರಾ ಆರ್ಚರ್ ಅವರನ್ನು ಖರೀದಿಸಿದ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಕಳೆದ ಆವೃತ್ತಿಯಲ್ಲಿ ಆರ್ಚರ್ ಒಂದೂ ಪಂದ್ಯವನ್ನು ಆಡಿರಲಿಲ್ಲ. ಈ ಬಾರಿಯ ಆವೃತ್ತಿಯಲ್ಲಿ ಅವರು ಎರಡು ಪಂದ್ಯಗಳಲ್ಲಿ ಮಾತ್ರವೇ ಆಡಲಿಳಿದಿದ್ದಾರೆ.

IPL 2023: Mumbai Indians pacer Jofra Archer tweeted angrily in reaction to reports of an elbow injury

ಮಾಧ್ಯಮ ವರದಿ ಮಾಡಿರುವ ಪ್ರಕಾರ ಮೊಣಕೈಗೆ ಸಣ್ಣ ಪ್ರಮಾಣದ ಗಾಯದ ಹಿನ್ನೆಲೆಯಲ್ಲಿ ಜೋಫ್ರ ಆರ್ಚರ್ ಬೆಲ್ಜಿಯಂಗೆ ತೆರಳಿ ಚಿಕಿತ್ಸೆ ಪಡೆದ ಬಳಿಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಈ ವರದಿಯನ್ನು ಜೋಫ್ರಾ ಆರ್ಚರ್ ಕಟು ಶಬ್ದಗಳಲ್ಲಿ ನಿರಾಕರಿಸಿದ್ದು ಅಸಮಾಧಾನ ಹೊರಹಾಕಿದ್ದಾರೆ.

"ನಿಜಾಂಶ ಗೊತ್ತಿಲ್ಲದೆ ನನ್ನನ್ನು ಸಂಪರ್ಕಿಸದೆಯೇ ವರದಿಯನ್ನು ಪ್ರಕಟಿಸಿರುವುದು ವಿಪರ್ಯಾಸ. ಈ ರೀತಿಯಾದ ಸುದ್ದುಯನ್ನು ಪ್ರಕಟಿಸಿದ ನಿಮಗೆ ನಾಚಿಕೆಯಾಗಬೇಕು. ಆಟಗಾರನಾಗಿ ಸಾಕಷ್ಟು ಆತಂಕದಲ್ಲಿದ್ದು ಸವಾಲುಗಳನ್ನು ಎದುರಿಸುತ್ತಿದ್ದೇನೆ. ಆದರೆ ಅದನ್ನು ನೀವು ನಿಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದೀರಿ. ನಿಮ್ಮಂಥವರಿಂದಲೇ ಸಮಸ್ಯೆಗಳು ಉಂಟಾಗುತ್ತಿರುವುದು" ಎಂದು ಟ್ವಿಟ್‌ನಲ್ಲಿ ಕಿಡಿಕಾರಿದ್ದಾರೆ ಜೋಫ್ರಾ ಆರ್ಚರ್.

ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಜೋಫ್ರಾ ಆರ್ಚರ್ ಉತ್ತಮ ಲಯದಲ್ಲಿ ಕಂಡಿದ್ದರು. ಆ ಪಂದ್ಯದಲ್ಲಿ 150. ಕಿ.ಮೀ ವೇಗದಲ್ಲಿಯೂ ಚೆಂಡುಗಳನ್ನು ಅವರು ಎಸೆದಿದ್ದರು. ಮುಂಬೈ ಇಂಡಿಯನ್ಸ್ ತಂಡ ಏಪ್ರಿಲ್ 30ರಂದು ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಸಿಲಿದ್ದು ಈ ಪಂದ್ಯದಲ್ಲಿ ಆಡುವ ಬಳಗದಲ್ಲಿ ಜೋಫ್ರಾ ಆರ್ಚರ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಜೋಫ್ರಾ ಆರ್ಚರ್ ಕಳೆದ ಒಂದೆರಡು ವರ್ಷಗಳಲ್ಲಿ ಕೆಲ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆಗಾಗ ಕಾಣಿಸಿಕೊಳ್ಳುವ ಮೊಣಕೈ ಗಾಯಕ್ಕೆ ಶಸ್ಸತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಬೆನ್ನು ನೋವಿಗೂ ಶಸ್ಸತ್ರಚಿಕಿತ್ಸೆಗೆ ಒಳಗಾಗಿದ್ದರು. ಇನ್ನು ಮೀನಿನ ಟ್ಯಾಂಕ್‌ ಶುಚಿಗೊಳಿಸುವ ಸಂದರ್ಭದಲ್ಲಿ ಗಂಭೀರ ಗಾಯಕ್ಕೆ ತುತ್ತಾದ ಅವರು ಕ್ರಿಕೆಟ್ ಮೈದಾನಕ್ಕಿಳಿಯುವುದು ಮತ್ತಷ್ಟು ವಿಳಂಬವಾಯಿತು. ಹೀಗಾಗಿ ಜೋಫ್ರಾ ಆರ್ಚರ್ 2021 ಮತ್ತು 2022ರ ಟಿ20 ವಿಶ್ವಕಪ್, ಆಶಸ್, ಮತ್ತು 2022ರ ಐಪಿಎಲ್ ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿಯುವಂತಾಗಿತ್ತು.

ಸಂಕಷ್ಟದಲ್ಲಿ ಮುಂಬೈ ಇಂಡಿಯನ್ಸ್
ಇನ್ನು ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿಯೂ ಮಿಂಚಲು ವಿಫಲವಾಗಿದೆ. ಟೂರ್ನಿಯ ಆರಂಭದಲ್ಲಿ ಎರಡು ಪಂದ್ಯ ಸೋಲು ಕಂಡಿದ್ದ ಎಂಎಸ್ ನಂತರ ಮೂರು ಪಂದ್ಯಗಳಲ್ಲಿ ಗೆದ್ದು ಮಿಂಚಿತ್ತು. ಬಳಿಕ ಸತತ ಎರಡು ಪಂದ್ಯಗಳನ್ನು ಸೋತಿರುವ ರೋಹಿತ್ ಶರ್ಮಾ ಪಡೆ ಸಂಕಷ್ಟದಲ್ಲಿದೆ. ಈಗ ಗೆಲುವಿನ ಲಯಕ್ಕೆ ಮರಳಲು ಮುಂಬೈ ಇಂಡಿಯನ್ಸ ಹರಸಾಹಸ ಪಡುತ್ತಿದೆ.

Story first published: Wednesday, April 26, 2023, 17:19 [IST]
Other articles published on Apr 26, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+