
ನಿನ್ನೆ ( ಮೇ 20 ) ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎರಡು ಪಂದ್ಯಗಳು ಜರುಗಿದವು. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾದವು ಹಾಗೂ ಎರಡನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾದವು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 77 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಆಕ್ರಮಿಸಿಕೊಂಡು ಪ್ಲೇಆಫ್ ತಲುಪಿದರೆ, ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 1 ರನ್‌ನ ರೋಚಕ ಗೆಲುವು ಸಾಧಿಸಿದ ಲಕ್ನೋ ಸೂಪರ್ ಜೈಂಟ್ಸ್ ಸಹ ಮೂರನೇ ಸ್ಥಾನ ಪಡೆದುಕೊಂಡು ಪ್ಲೇಆಫ್ ತಲುಪಿದೆ.
ಇನ್ನು ಪ್ಲೇಆಫ್ ಪ್ರವೇಶಕ್ಕೆ ಕೇವಲ ಒಂದು ತಂಡಕ್ಕೆ ಮಾತ್ರ ಅವಕಾಶವಿದ್ದು, ಅಂಕಪಟ್ಟಿಯಲ್ಲಿ 14 ಅಂಕಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ತಮ್ಮ ಕೊನೆಯ ಪಂದ್ಯದಲ್ಲಿ ಗೆದ್ದು ಹೆಚ್ಚಿನ ನೆಟ್ ರನ್ ರೇಟ್ ಜತೆಗೆ 16 ಅಂಕಗಳನ್ನು ಪಡೆದುಕೊಂಡು ಪ್ಲೇಆಫ್ ಪ್ರವೇಶಿಸುವ ಯೋಜನೆಯಲ್ಲಿವೆ.
ಇಂದು ( ಮೇ 21 ) ಮುಂಬೈನ ವಾಂಖೆಡೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಬಹುದು ಎಂಬ ಕುತೂಹಲ ಹಾಗೂ ಚರ್ಚೆಗಳು ಆರಂಭವಾಗಿವೆ.
ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋತದ್ದೇ ಆದರೆ ಪ್ಲೇಆಫ್ ಸುತ್ತಿಗೆ ಅವಕಾಶ ಪಡೆದುಕೊಳ್ಳುವುದನ್ನು ಕೈತಪ್ಪಿಸಿಕೊಳ್ಳಲಿದ್ದು, ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಒಂದೆಡೆ ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಬಹುದು ಎಂಬ ಚರ್ಚೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಫ್ಯಾಂಟಸಿ ಕ್ರಿಕೆಟ್ ಪ್ರಿಯರು ಡ್ರೀಮ್ ಟೀಮ್ ರಚಿಸಿ ಯಾವ ಆಟಗಾರರು ಉತ್ತಮ ಪ್ರದರ್ಶನ ನೀಡಬಹುದು ಎಂಬುದನ್ನು ಆರಿಸುತ್ತಿದ್ದಾರೆ.
ಹೀಗೆ ಡ್ರೀಮ್ ಟೀಮ್ ರಚಿಸುತ್ತಿರುವ ಕ್ರಿಕೆಟ್ ಪ್ರಿಯರು ಈ ಕೆಳಕಂಡಂತೆ ಡ್ರೀಮ್ ಟೀಮ್ ರಚಿಸಿದರೆ ಉತ್ತಮ ಅಂಕ ಗಳಿಸಬಹುದು.
ಡ್ರೀಮ್ ಟೀಮ್ 1:
ವಿಕೆಟ್ ಕೀಪರ್ಸ್ - ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್
ಬ್ಯಾಟ್ಸ್‌ಮನ್‌ಗಳು - ಸೂರ್ಯಕುಮಾರ್ ಯಾದವ್ (ನಾಯಕ), ರೋಹಿತ್ ಶರ್ಮಾ, ರಾಹುಲ್ ತ್ರಿಪಾಠಿ, ಅಭಿಷೇಕ್ ಶರ್ಮಾ
ಆಲ್ ರೌಂಡರ್‌ಗಳು - ಕ್ಯಾಮೆರಾನ್ ಗ್ರೀನ್ (ಉಪನಾಯಕ), ಐಡೆನ್ ಮಾರ್ಕ್ರಾಮ್
ಬೌಲರ್‌ಗಳು - ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್‌ಡಾರ್ಫ್, ಭುವನೇಶ್ವರ್ ಕುಮಾರ್
ಡ್ರೀಮ್ ಟೀಮ್ 2:
ವಿಕೆಟ್ ಕೀಪರ್ಸ್ - ಇಶಾನ್ ಕಿಶನ್ (ನಾಯಕ), ಹೆನ್ರಿಚ್ ಕ್ಲಾಸೆನ್
ಬ್ಯಾಟ್ಸ್‌ಮನ್‌ಗಳು - ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ, ಅಭಿಷೇಕ್ ಶರ್ಮಾ
ಆಲ್ ರೌಂಡರ್‌ಗಳು - ಕ್ಯಾಮರೂನ್ ಗ್ರೀನ್, ಐಡೆನ್ ಮಾರ್ಕ್ರಾಮ್ (ಉಪನಾಯಕ)
ಬೌಲರ್‌ಗಳು - ಪಿಯೂಷ್ ಚಾವ್ಲಾ, ಟಿ ನಟರಾಜನ್, ಭುವನೇಶ್ವರ್ ಕುಮಾರ್, ಆಕಾಶ್ ಮಧ್ವಲ್
ಸಂಭಾವ್ಯ ಆಡುವ ಬಳಗಗಳು:
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್(ವಿಕೆಟ್ ಕೀಪರ್), ಹ್ಯಾರಿ ಬ್ರೂಕ್, ಗ್ಲೆನ್ ಫಿಲಿಪ್ಸ್, ಅಬ್ದುಲ್ ಸಮದ್, ನಿತೀಶ್ ಕುಮಾರ್ ರೆಡ್ಡಿ, ಮಯಾಂಕ್ ದಾಗರ್, ಭುವನೇಶ್ವರ್ ಕುಮಾರ್, ಕಾರ್ತಿಕ್ ತ್ಯಾಗಿ, ಟಿ ನಟರಾಜನ್
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಕ್ಯಾಮೆರಾನ್ ಗ್ರೀನ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ಆಕಾಶ್ ಮಧ್ವಲ್, ವಿಷ್ಣು ವಿನೋದ್