Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಡೇವಿಡ್ ವಿಲ್ಲಿ ಬದಲು ಆರ್‌ಸಿಬಿ ಸೇರಿದ ಹಳೆ ಆಟಗಾರ; ಬೇರೆ ಯಾರೂ ಸಿಗಲಿಲ್ವ ಎಂದ ಫ್ಯಾನ್ಸ್!

IPL 2023: Netizens angry on Royal Challengers Bangalore as they replace Kedar Jadhav for David Willey

ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿ ಮಧ್ಯ ಭಾರೀ ಘೋಷಣೆಯೊಂದನ್ನು ಮಾಡಿದೆ. ಗಾಯಗೊಂಡಿದ್ದ ಆಲ್‌ ರೌಂಡರ್ ಡೇವಿಡ್ ವಿಲ್ಲಿ ಟೂರ್ನಿಯಿಂದ ಹೊರಬಿದ್ದಿದ್ದು, ಇದೀಗ ಆತನ ಬದಲಾಗಿ ಕೇದಾರ್ ಜಾಧವ್ ಅನ್ನು ತಂಡಕ್ಕೆ ಕರೆತಂದಿದೆ.

ಮೂಲಗಳ ಪ್ರಕಾರ ಕೇದರ್ ಜಾಧವ್ ಅವರನ್ನು ಒಂದು ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿದೆ ಎನ್ನಲಾಗಿದೆ. ಇನ್ನು ಕೇದಾರ್ ಜಾಧವ್ ಎರಡನೇ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿದ್ದು, 2016ರಿಂದ 2017ರವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸದಸ್ಯನಾಗಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ವಿಷಯವನ್ನು ತಿಳಿಸಿ ಸಾಮಾಜಿಕ ಜಾಲತಾಣದ ತನ್ನ ಖಾತೆಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಡೇವಿಡ್ ವಿಲ್ಲಿ ಬದಲಾಗಿ ಕೇದರ್ ಜಾಧವ್ ತಂಡ ಸೇರಿದ್ದಾರೆ, ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸ್ವಾಗತ ಎಂದು ಬರೆದುಕೊಂಡಿದೆ.

ಈ ಟ್ವೀಟ್ ನೋಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಬೇಸರ ವ್ಯಕ್ತಪಸಿದ್ದು, ಬೇರೆ ಯಾವ ಆಟಗಾರನೂ ನಿಮಗೆ ದೊರಕಲಿಲ್ಲವೇ ಎಂದು ಕಿಡಿಕಾರಿದ್ದಾರೆ. ಈಗಾಗಲೇ ಮುಳುಗುವ ಪರಿಸ್ಥಿತಿಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಇಂತಹ ಆಟಗಾರರು ಬಹಳ ಬೇಗ ಮುಳುಗಿಸಿಬಿಡ್ತಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಇನ್ನು ಕೇದಾರ್ ಜಾಧವ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಜಿಯೋ ಸಿನಿಮಾಸ್‌ನಲ್ಲಿ ಮರಾಠಿ ಕಾಮೆಂಟರಿ ಮಾಡುತ್ತಿದ್ದರು. ಹೀಗೆ ಮರಾಠಿ ಐಪಿಎಲ್ ಕಾಮೆಂಟರಿ ಮಾಡುತ್ತಿದ್ದ ಕೇದಾರ್ ಜಾಧವ್ ಅವರನ್ನು ತಂಡಕ್ಕೆ ಆಟಗಾರನನ್ನಾಗಿ ಕರೆದುಕೊಂಡು ಬಂದಿರುವುದಕ್ಕೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಲ್ ಆಗಿದೆ.

ಕೇದಾರ್ ಜಾಧವ್ ಇಲ್ಲಿಯವರೆಗೂ ಒಟ್ಟು 93 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 1193 ರನ್ ಬಾರಿಸಿದ್ದಾರೆ. ಆದರೆ ಕೇದಾರ್ ಜಾಧವ್ ಒಮ್ಮೆಯೂ ಬೌಲಿಂಗ್ ಮಾಡಿಲ್ಲ. 2016 ಹಾಗೂ 2017ರ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಕೇದಾರ್ ಜಾಧವ್ ಆರ್‌ಸಿಬಿ ಪರ ಕಣಕ್ಕಿಳಿದಿದ್ದರು.

2016ರಲ್ಲಿ 4 ಪಂದ್ಯಗಳನ್ನಾಡಿದ್ದ ಕೇದಾರ್ ಜಾಧವ್ ಒಟ್ಟು 45 ರನ್‌ಗಳನ್ನು ಬಾರಿಸಿದ್ದರು ಹಾಗೂ ಅಜೇಯ 25 ಕೇದಾರ್ ಜಾಧವ್ ಗಳಿಸಿದ್ದ ಗರಿಷ್ಠ ರನ್. ಇನ್ನು 2017ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 13 ಪಂದ್ಯಗಳನ್ನಾಡಿದ್ದ ಜಾಧವ್ ಗರಿಷ್ಠ 69 ರನ್ ಸೇರಿದಂತೆ ಒಟ್ಟು 267 ರನ್ ಗಳಿಸಿದ್ದರು.

ಇನ್ನು 2021ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದಿದ್ದ ಕೇದಾರ್ ಜಾಧವ್ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದುಕೊಂಡಿರಲಿಲ್ಲ. 2021ರ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಪರ ಕಣಕ್ಕಿಳಿದಿದ್ದಾಗ 6 ಪಂದ್ಯಗಳನ್ನಾಡಿದ್ದ ಜಾಧವ್ 55 ರನ್ ಗಳಿಸಿದ್ದರು. 19 ಕೇದಾರ್ ಜಾಧವ್ ಗಳಿಸಿದ್ದ ಗರಿಷ್ಠ ರನ್.

Story first published: Monday, May 1, 2023, 17:37 [IST]
Other articles published on May 1, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+