Salman Khan: ಕೊಹ್ಲಿ ಅಲ್ಲ, ರೋಹಿತ್ ಅಲ್ಲ; ತಮ್ಮ ನೆಚ್ಚಿನ ಕ್ರಿಕೆಟಿಗನ ಹೆಸರನ್ನು ಬಹಿರಂಗಪಡಿಸಿದ ಸಲ್ಮಾನ್ ಖಾನ್
ಬಾಲಿವುಡ್‌ನ ಪ್ರಸಿದ್ಧ ನಟರಲ್ಲಿ ಒಬ್ಬರಾದ ಸಲ್ಮಾನ್ ಖಾನ್ ಅವರಿ ಭಾರತ ಸೇರಿದಂತೆ ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಆದರೆ, ಅಂತಹ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಯಾವ ಭಾರತೀಯ ಕ್ರಿಕೆಟಿಗನ ಅಭಿಮಾನಿಯಾಗಿದ್ದಾರೆ ಎಂಬುದು ಬಹುಶಃ ನಿಮಗೆ ತಿಳಿದಿರಲಿಕ್ಕಿಲ್ಲ, ಅದಕ್ಕೆ ಉತ್ತರ ಇಲ್ಲಿದೆ.
ಗುರುವಾರದಂದು ಟ್ವಿಟ್ಟರ್‌ನಲ್ಲಿ ಸ್ಟಾರ್ ಸ್ಪೋರ್ಟ್ಸ್ ಹಂಚಿಕೊಂಡಿರುವ ವೀಡಿಯೊದಲ್ಲಿ, ಸೂಪರ್‌ಸ್ಟಾರ್ ನಟ ಸಲ್ಮಾನ್ ಖಾನ್ ಅವರು ತಮ್ಮ ನೆಚ್ಚಿನ ಕ್ರಿಕೆಟಿಗನ ಹೆಸರನ್ನು ಬಹಿರಂಗಪಡಿಸುವುದನ್ನು ನೋಡಬಹುದು.

ಈ ವೀಡಿಯೊವೊಂದರಲ್ಲಿ ಸಲ್ಮಾನ್ ಖಾನ್ ಮಕ್ಕಳಿಗೆ ಒಂದು ಕಥೆಯನ್ನು ವಿವರಿಸುತ್ತಾರೆ. "ಉತ್ತರದಿಂದ ಒಬ್ಬ ವ್ಯಕ್ತಿ ಬಂದು ಚೆನ್ನೈ ತಂಡದ ನಾಯಕನಾಗಿ ದಕ್ಷಿಣಕ್ಕೆ ಬಂದರು" ಎಂದು ಹೇಳಿದಾಗ, ಮಕ್ಕಳಲ್ಲಿ ಒಬ್ಬರು 'ಎಂಎಸ್ ಧೋನಿ' ಎಂದು ಉತ್ತರಿಸುತ್ತಾರೆ. ಆಗ ಸಲ್ಮಾನ್ ಖಾನ್ ಸರಿ ಎಂದು ಹೇಳಿ, "ಎಂಎಸ್ ಧೋನಿ ನನ್ನ ನೆಚ್ಚಿನ ಕ್ರಿಕೆಟಿಗ" ಎಂದು ಬಹಿರಂಗಪಡಿಸುತ್ತಾರೆ.
ನಂತರ, "ಒಬ್ಬ ವ್ಯಕ್ತಿ ಕಷ್ಟಪಟ್ಟು ಅಭ್ಯಾಸ ಮಾಡುತ್ತಾನೆ ಮತ್ತು ಆತನ ಗುರಿ ಕೇವಲ ಕ್ರಿಕೆಟ್ ಆಗಿದೆ. ನಂತರ ಭಾರತ ತಂಡದ ನಾಯಕನಾಗುತ್ತಾನೆ, ಫಿಟ್ಟೆಸ್ಟ್ ಕ್ರಿಕೆಟರ್ ಯಾರು," ಎಂದು ಕೇಳಿದಾಗ ಮಕ್ಕಳಿಂದ ಬಂದ ಒಂದೇ ಉತ್ತರ 'ವಿರಾಟ್ ಕೊಹ್ಲಿ' ಆಗಿತ್ತು.
ಆರ್‌ಸಿಬಿ ತಂಡದ ವಿರಾಟ್ ಕೊಹ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡು ಅರ್ಧಶತಕ ಸೇರಿದಂತೆ 164 ರನ್ ಬಾರಿಸಿದ್ದಾರೆ. ಆರ್‌ಸಿಬಿ ತಂಡ ಆಡಿದ ಮೂರು ಪಂದ್ಯಗಳಲ್ಲಿ 2 ಸೋಲು ಮತ್ತು 1 ಗೆಲುವಿನೊಂದಿಗೆ 2023ರ ಐಪಿಎಲ್ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಇನ್ನು ಬುಧವಾರ ನಡೆದ ಪಂದ್ಯದಲ್ಲಿ ಎಂಎಸ್ ಧೋನಿ ಅವರು ಕೊನೆಯ ಓವರ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿದ ಹೊರತಾಗಿಯೂ, ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ತವರಿನಲ್ಲಿ ಸಿಎಸ್‌ಕೆ ತಂಡ 3 ರನ್‌ಗಳ ಅಂತರದಿಂದ ಸೋಲಬೇಕಾಯಿತು.
ಎಂಎಸ್ ಧೋನಿ ಗಾಯದ ಬಗ್ಗೆ ಮಾತನಾಡಿದ ಸಿಎಸ್‌ಕೆ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್, ಧೋನಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದರು. ಗಾಯದ ನಡುವೆಯೂ ತಂಡಕ್ಕಾಗಿ ಕೆಲವು ಅದ್ಭುತ ಶಾಟ್‌ಗಳನ್ನು ಆಡಿ ಗೆಲ್ಲಿಸಿದ್ದಾರೆ ಎಂದರು.

"ಎಂಎಸ್ ಧೋನಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ. ಇದನ್ನು ಅವರು ನಡೆಯುವಾಗ ಮತ್ತು ಓಡುವಾಗ ನೋಡಬಹುದು. ಇದು ಆತನ ನೈಜ ಆಟಕ್ಕೆ ಸ್ವಲ್ಪ ಅಡ್ಡಿಯಾಗುತ್ತದೆ. ಧೋನಿ ಫಿಟ್ನೆಸ್ ಯಾವಾಗಲೂ ತುಂಬಾ ವೃತ್ತಿಪರವಾಗಿದೆ. ಪಂದ್ಯಾವಳಿ ಪ್ರಾರಂಭವಾಗುವ ಒಂದು ತಿಂಗಳ ಮೊದಲೇ ಅಭ್ಯಾಸ ಆರಂಭಿಸುತ್ತಾರೆ. ಅವರೊಬ್ಬ ಶ್ರೇಷ್ಠ ಆಟಗಾರ. ಆತನ ಮೇಲೆ ನಮಗೆ ಯಾವತ್ತೂ ಸಂದೇಹವಿಲ್ಲ," ಎಂದು ಸ್ಟೀಫನ್ ಫ್ಲೆಮಿಂಗ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮುಂದಿನ ಎರಡು ವಾರಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೂರು ಪಂದ್ಯಗಳನ್ನು ಆಡಲಿದೆ. ಮುಂದಿನ ಏಪ್ರಿಲ್ 17ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಕ್ಕಾಗಿ ಬೆಂಗಳೂರಿಗೆ ಪ್ರಯಾಣಿಸಲಿದೆ. ನಂತರ ಏಪ್ರಿಲ್ 21ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮತ್ತು ಏಪ್ರಿಲ್ 23ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯವನ್ನು ಆಡಲಿದೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯದಲ್ಲಿ ಶನಿವಾರ, ಏಪ್ರಿಲ್ 15ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತವರಿನಲ್ಲಿ ಎದುರಿಸಲಿದೆ. ನಂತರ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications