ಶುಬ್ಮಬ್ ಗಿಲ್ ಅಲ್ಲ, ಕೊಹ್ಲಿಯೂ ಅಲ್ಲ: ಈ ಐಪಿಎಲ್ ಆವೃತ್ತಿಯಲ್ಲಿ ಎಬಿ ಡಿವಿಲಿಯರ್ಸ್ ನೆಚ್ಚಿನ ಆಟಗಾರ ಯಾರು ಗೊತ್ತಾ!?
ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿ ಪಡೆದುಕೊಂಡಿದ್ದರೂ ಐಪಿಎಲ್‌ನಲ್ಲಿ ಕಾಮೆಂಟೇಟರ್ ಆಗಿ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ಟೂರ್ನಿಯನ್ನು ಸಂಪೂರ್ಣವಾಗಿ ಹತ್ತಿರದಿಂದ ಗಮನಿಸಿಕೊಂಡು ಬಂದಿರುವ ಎಬಿ ಡಿವಿಲಿಯರ್ಸ್ ಟೂರ್ನಿಯಲ್ಲಿ ಅನೇಕ ವಿಚಾರವಾಗಿ ಅದಾಗ ತಮ್ಮ ಅಭಿಪ್ರಾಯವನ್ನು ಅಭಿಮಾನಿಗಳ ಮುಂದೆ ವ್ಯಕ್ತಪಡಿಸಿದ್ದಾರೆ. ಇದೀಗ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ವೈಯಕ್ತಿಕವಾಗಿ ತಮಗೆ ಇಷ್ಟವಾದ ಕ್ರಿಕೆಟ್ ಆಟಗಾರ ಯಾರು ಎಂಬುದನ್ನು ಹೇಳಿದ್ದಾರೆ ಎಬಿಡಿ.
ಅಚ್ಚರಿಯೆಂದರೆ ಎಬಿ ಡಿವಿಲಿಯರ್ಸ್ ಹೆಸರಿಸಿರುವುದು ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿ ಆರೆಂಜ್ ಕ್ಯಾಪ್ ಧರಿಸಿರುವ ಶುಬ್ಮನ್ ಗಿಲ್ ಬಗ್ಗೆಯಾಗಲಿ ಅಥವಾ ಈ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಆಪ್ತ ಸ್ನೇಹಿತ ವಿರಾಟ್ ಕೊಹ್ಲಿ ಬಗ್ಗೆಯಾಗಲಿ ಅಲ್ಲ. ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಬಗ್ಗೆ.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇಆಫ್ ಹಂತಕ್ಕೆ ಪ್ರವೇಶಿಸಲು ವಿಫಲವಾಗಿದ್ದರು ಕೂಡ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಪ್ರದರ್ಶನ ಕ್ರಿಕೆಟ್ ಪ್ರೇಮಿಗಳ ಹುಬ್ಬೇರುವಂತೆ ಮಾಡಿದೆ. ಯುವ ಆಟಗಾರ ಆರ್‌ಆರ್ ತಂಡದ ಪರವಾಗಿ ಅತ್ಯಂತ ಹೆಚ್ಚು ರನ್‌ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಆಡಿದ 14 ಪಂದ್ಯದಲ್ಲಿ ಜೈಸ್ವಾಲ್ 48.08ರ ಸರಾಸರಿಯಲ್ಲಿ 625 ರನ್‌ಗಳನ್ನು ಕಲೆಹಾಕಿದ್ದು 163.62ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.
ಜಿಯೋ ಸಿನಿಮಾದಲ್ಲಿ ಮಾತನಾಡಿದ ಎಬಿ ಡಿವಿಲಿಯರ್ಸ್, ಈ ಬಾರಿಯ ಐಪಿಎಲ್‌ನಲ್ಲಿ ನನ್ನ ನೆಚ್ಚಿನ ಆಟಗಾರ ಯಶಸ್ವಿ ಜೈಸ್ವಾಲ್ ಎಂದಿದ್ದು ಸಾಕಷ್ಟು ಮೆಚ್ಚುಗೆಯ ಮಾತುಗಳನ್ನು ಕೂಡ ಆಡಿದ್ದಾರೆ. "ಖಂಡಿತವಾಗಿಯೂ ಈ ಬಾರಿ ನನ್ನ ನೆಚ್ಚಿನ ಆಟಗಾರ ಯಶಸ್ವಿ ಜೈಸ್ವಾಲ್. ಆತ ಯುವ ಆಟಗಾರನಾಗಿದ್ದು ಆತನಲ್ಲಿ ಎಲಾ ಮಾದರಿಯ ಹೊಡೆಗಳು ಕೂಡ ಇವೆ. ಆಡುವಾಗ ಆತ ಶಾಂತ ಮತ್ತು ಸ್ಥಿರವಾದ ಮಾನಸಿಕ ಸ್ಥಿತಿಯನ್ನು ಹೊಂದಿದ್ದು ಬೌಲರ್‌ಗಳ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ ಅಲ್ಲದೆ ಯಾವಾಗಲೂ ಅವರು ಕಂಟ್ರೋಲ್‌ನಲ್ಲಿರುವಂತೆ ಕಾಣಿಸುತ್ತಾರೆ" ಎಂದಿದ್ದಾರೆ ಎಬಿ ಡಿವಿಲಿಯರ್ಸ್.
ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಐದನೇ ಸ್ಥಾನಿಯಾಗಿ ಟೂರ್ನಿಯನ್ನು ಅಂತ್ಯಗೊಳಿಸಿದೆ. ಟೂರ್ನಿಯ ಆರಂಭದಲ್ಲಿ ಅದ್ಭುತ ಪ್ರದರ್ಶನ ನೀಡಿ ಅಬ್ಬರಿಸಿದ್ದ ಸಂಜು ಸ್ಯಾಮ್ಸನ್ ನೇತೃತ್ವದ ತಂಡ ನಿರ್ಣಾಯಕ ಹಂತದಲ್ಲಿ ಗೆಲುವಿನ ಲಯವನ್ನು ಕಳೆದುಕೊಂಡಿತು. ಹೀಗಾಗಿ ಪ್ಲೇಆಫ್‌ಗೆ ಪ್ರವೇಶಿಸುವ ಅವಕಾಶವನ್ನು ಕೊನೆಯ ಕ್ಷಣದಲ್ಲಿ ಕಳೆದುಕೊಳ್ಳಬೇಕಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications