Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಐಪಿಎಲ್‌ನಲ್ಲಿ ಹೊಸ ನಿಯಮ: ವೈಡ್, ನೋಬಾಲ್ ತೀರ್ಪುಗಳಿಗೂ ಸಲ್ಲಿಸಬಹುದು ಮೇಲ್ಮನವಿ

IPL 2023: Players Can Take Reviews For Wides And No-Ball In Indian Premier League 2023

ಇಂಡಿಯನ್ ಪ್ರೀಮಿಯರ್ ಲೀಗ್ 2023ರಲ್ಲಿ ಹೊಸ ನಿಯಮವೊಂದು ಜಾರಿಗೆ ಬರುತ್ತಿದೆ. ಆಟಗಾರರು ಈಗ ವೈಡ್ ಮತ್ತು ನೋಬಾಲ್ ತೀರ್ಪಿನ ವಿರುದ್ಧ ಕೂಡ ಮೂರನೇ ಅಂಪೈರ್ ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಸದ್ಯ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಈ ನಿಯಮವನ್ನು ಅಳವಡಿಸಲಾಗಿದೆ. ಮುಂಬೈ ತಂಡದ ನಾಯಕ ಹರ್ಮನ್‌ಪ್ರೀತ್ ಕೌರ್ ಮೊದಲ ಬಾರಿಗೆ ವೈಡ್ ನಿಯಮದ ವಿರುದ್ಧ ಮೇಲ್ಮನವಿ ಸಲ್ಲಿಸಿ ಯಶಸ್ವಿಯಾಗಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಯಶಸ್ವಿಯಾಗಿ ಜಾರಿ ಮಾಡಿದ ಬಳಿಕ ಐಪಿಎಲ್‌ನಲ್ಲೂ ಈ ನಿಯಮ ಅಳವಡಿಸಲಾಗುತ್ತಿದೆ.

ಈ ನಿಯಮವನ್ನು ಮೊದಲ ಬಾರಿಗೆ ಜಾರಿ ಮಾಡಿದ ಕೀರ್ತಿ ಕೂಡ ಮಹಿಳಾ ಪ್ರೀಮಿಯರ್ ಲೀಗ್‌ಗೆ ಸಲ್ಲುತ್ತದೆ. "ಬ್ಯಾಟರ್ ಔಟ್ ಆಗಿದ್ದಾರ ಇಲ್ಲವಾ ಎನ್ನುವುದನ್ನು ಕುರಿತು ಆನ್‌ಫೀಲ್ಡ್ ಅಂಪೈರ್‌ಗಳು ತೆಗೆದುಕೊಂಡ ಯಾವುದೇ ನಿರ್ಧಾರವನ್ನು ಪರಿಶೀಲನೆ ಮಾಡಲು ಆಟಗಾರನಿಗೆ ವಿನಂತಿ ಮಾಡಲು ಅವಕಾಶ ನೀಡಲಾಗಿದೆ" ಎಂದು ಇಎಸ್‌ಪಿಎನ್ ವರದಿ ಮಾಡಿದೆ.

"ವೈಡ್ ಅಥವಾ ನೋ-ಬಾಲ್‌ಗೆ ಸಂಬಂಧಿಸಿದಂತೆ ಆನ್‌-ಫೀಲ್ಡ್ ಅಂಪೈರ್‌ಗಳು ತೆಗೆದುಕೊಂಡ ಯಾವುದೇ ನಿರ್ಧಾರವನ್ನು ಪರಿಶೀಲನೆ ಮಾಡಲು ಆಟಗಾರನಿಗೆ ಅವಕಾಶ ನೀಡಬೇಕು" ಎಂದು ಹೊಸ ನಿಯಮ ತಿಳಿಸುತ್ತದೆ.

ಮೊದಲ ಬಾರಿ ಮನವಿ ಮಾಡಿದ ಹರ್ಮನ್‌ಪ್ರೀತ್ ಕೌರ್

ಮೊದಲ ಬಾರಿ ಮನವಿ ಮಾಡಿದ ಹರ್ಮನ್‌ಪ್ರೀತ್ ಕೌರ್

ಔಟಾದ ಬಗ್ಗೆ ಮಾತ್ರವಲ್ಲದೆ ನೋ ಬಾಲ್ ಮತ್ತು ವೈಡ್ ತೀರ್ಮಾನವನ್ನು ಪರಿಶೀಲನೆ ಮಾಡಬಹುದಾಗಿದೆ. ಬ್ಯಾಟರ್ ಗಳು ಮತ್ತು ಫೀಲ್ಡರ್ ಗಳು ಇಬ್ಬರಿಗೂ ಅವಕಾಶ ಇರುತ್ತದೆ. ಆದರೆ ಲೆಗ್‌-ಬೈ ಬಗ್ಗೆ ಡಿಆರ್ ಎಸ್ ತೆಗೆದುಕೊಳ್ಳಲು ಅನುಮತಿ ಇರುವುದಿಲ್ಲ.

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಈಗಾಗಲೇ ಆಟಗಾರರು ಇದನ್ನು ಬಳಸಿಕೊಂಡಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಪಂದ್ಯದಲ್ಲೇ ಹರ್ಮನ್‌ಪ್ರೀತ್ ಕೌರ್ ಈ ನಿಯಮ ಬಳಸಿದರು. ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆನ್-ಫೀಲ್ಡ್ ಅಂಪೈರ್ ಮುಂಬೈ ಸ್ಪಿನ್ನರ್ ಸೈಕಾ ಇಶಾಕ್ ಅವರ ಎಸೆತವನ್ನು ಲೆಗ್ ಸೈಡ್‌ನಲ್ಲಿ ವೈಡ್ ಡೌನ್ ಎಂದು ತೀರ್ಪು ನೀಡಿದರು. ಅಂಪೈರ್ ನ ನಿರ್ಧಾರವನ್ನು ಪರಿಶೀಲನೆಗೆ ಮುಂಬೈ ನಾಯಕಿ ಮನವಿ ಮಾಡಿದರು, ಪರಿಶೀಲನೆಯಲ್ಲಿ ಚೆಂಡು ಬ್ಯಾಟರ್ ಗ್ಲೌಸ್‌ಗೆ ತಾಗಿದ್ದು ಕಂಡುಬಂದ ಬಳಿಕ ವೈಡ್‌ಬಾಲ್ ನಿರ್ಧಾರವನ್ನು ವಾಪಸ್ ಪಡೆದರು.

ಯುಪಿ ವಾರಿಯರ್ಸ್‌ಗೆ ವರದಾನವಾದ ನಿಯಮ

ಯುಪಿ ವಾರಿಯರ್ಸ್‌ಗೆ ವರದಾನವಾದ ನಿಯಮ

ಭಾನುವಾರ ನಡೆದ ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ನಡುವಿನ ಪಂದ್ಯದಲ್ಲಿ ಕೂಡ ಈ ನಿಯಮವನ್ನು ಬಳಸಿಕೊಂಡರು. ರೋಚಕವಾಗಿದ್ದ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಯುಪಿ ವಾರಿಯರ್ಸ್ ಗೆಲುವಿಗೆ 19 ರನ್ ಬೇಕಿತ್ತು. ಮೊದಲ ಮೂರು ಎಸೆತದಲ್ಲಿ ಯುಪಿ ವಾರಿಯರ್ಸ್ 13 ರನ್ ಗಳಿಸಿತು.

4ನೇ ಎಸೆತ ಬ್ಯಾಟರ್ ನಿಂದ ದೂರವಿದ್ದರೂ ಅಂಪೈರ್ ವೈಡ್ ಎಂದು ತೀರ್ಪು ನೀಡಲಿಲ್ಲ. ಯುಪಿ ವಾರಿಯರ್ಸ್ ಬ್ಯಾಟರ್ ಗ್ರೇಸ್ ಹ್ಯಾರಿಸ್ ಡಿಆರ್ ಎಸ್ ಮನವಿ ಮಾಡಿದರು, ಪರಿಶೀಲನೆ ಬಳಿಕ ಅದನ್ನು ವೈಡ್ ಎಂದು ಘೋಷಿಸಲಾಯಿತು. ಇದು ಪಂದ್ಯದ ಫಲಿತಾಂಶವನ್ನೇ ಬದಲಾಯಿಸಿತು. ಯುಪಿ ವಾರಿಯರ್ಸ್ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.

ಪಂದ್ಯದ ಫಲಿತಾಂಶವನ್ನೇ ಬದಲಿಸುವ ನೋಬಾಲ್

ಪಂದ್ಯದ ಫಲಿತಾಂಶವನ್ನೇ ಬದಲಿಸುವ ನೋಬಾಲ್

ಈ ಮೊದಲು ನೋಬಾಲ್ ವಿವಾದಾತ್ಮಕ ತೀರ್ಪಿನಿಂದಾಗಿ ಹಲವು ಪಂದ್ಯಗಳ ಫಲಿತಾಂಶಗಲೇ ಬದಲಾದ ಉದಾಹರಣೆಗಳಿವೆ. 2019ರಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ನೋಬಾಲ್‌ ತೀರ್ಪಿನ ಬಗ್ಗೆ ವಿವಾದ ಉಂಟಾಗಿತ್ತು.

2022ರ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಕೂಡ ವಿವಾದ ಉಂಟಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಮತ್ತು ರಾಜಸ್ಥಾನ ರಾಯಲ್ಸ್‌ನ ಜೋಸ್ ಬಟ್ಲರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಒಬೆಡ್ ಮೆಕಾಯ್ ಫುಲ್‌ಟಾಸ್ ಎಸೆತವನ್ನು ನೋಬಾಲ್ ನೀಡದ್ದಕ್ಕೆ ಪಂತ್ ಅಸಮಾಧಾನ ವ್ಯಕ್ತಪಡಿಸಿದ್ದರು.

Story first published: Monday, March 6, 2023, 12:35 [IST]
Other articles published on Mar 6, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+