IPL 2023, PBKS vs LSG: ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ಕೆ: ಆಡುವ ಬಳಗ Live ಸ್ಕೋರ್
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ಟೂರ್ನಿಯ 38ನೇ ಪಂದ್ಯ ನಡೆಯುತ್ತಿದ್ದು ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಶಿಖರ್ ಧವನ್ ನೇತೃತ್ವದ ಪಂಜಾಬ್ ಕಿಂಗ್ಸ್ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಪಡೆದುಕೊಂಡಿದೆ.
ಇನ್ನು ಗಾಯದ ಕಾರಣದಿಂದಾಗಿ ಕಳೆದ ಕೆಲ ಪಂದ್ಯಗಳಿಮದ ಹೊರಗುಳಿದಿದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಆಡಲು ಸಮರ್ಥವಾಗಿರುವ ಕಾರಣ ಆಡುವ ಬಳಗದಲ್ಲಿ ಧವನ್ ಸೇರಿಕೊಂಡಿದ್ದು ತಂಡವನ್ನು ಮುನ್ನಡೆಸುವ ಹೊಣೆಗಾರಿಗೆ ವಹಿಸಿಕೊಂಡಿದ್ದಾರೆ. ಧವನ್ ಅಲಭ್ಯತೆಯಲ್ಲಿ ಸ್ಯಾಮ್ ಕರನ್ ಕಳೆದ ಕೆಲ ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು.

ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೊಸಿಯೇಶನ್ ಕ್ರೀಡಾಂಗಣ ಬ್ಯಾಟರ್‌ಗಳಿಗೆ ಉತ್ತಮ ನೆರವು ನೀಡುವ ಪಿಚ್ ಆಗಿದೆ. ಉತ್ತಮ ವೇಗ ಹಾಗೂ ಬೌನ್ಸ್ ದೊರೆಯುವ ಕಾರಣ ನೇರವಾಗಿ ಬ್ಯಾಟ್‌ಗೆ ಚೆಂಡು ಬರಲಿದ್ದು ದೊಡ್ಡ ಮೊತ್ತದ ರನ್ ಹರಿದು ಬರುವ ನಿರೀಕ್ಷೆಯಿದೆ. ಆದರೆ ಪಂದ್ಯದ ಆರಂಭದ ಕೆಲ ಕಾಲ ವೇಗುಗಳಿಗೂ ಕೂಡ ಇಲ್ಲಿ ನೆರವು ದೊರೆಯುವ ಕಾರಣ ವೇಗದ ಬೌಲರ್‌ಗಳಿಗೂ ಮಿಂಚುವ ಅವಕಾಶವಿದೆ.
ಹವಾಮಾನ ವರದಿ: ಇನ್ನು ಪಂದ್ಯದ ದಿನ ಆಟಕ್ಕೆ ಪೂರಕವಾದ ವಾತಾವರಣವಿರಲಿದ್ದು ಅಭಿಮಾನಿಗಳು ಸಂಪೂರ್ಣವಾಗಿ ಪಂದ್ಯವನ್ನು ಆನಂದಿಸಬಹುದು. 20-30ರ ಆಸುಪಾಸಿನಲ್ಲಿ ಉಷ್ಣಾಂಶವಿರಲಿದೆ.
ಪಂಜಾಬ್ ಕಿಂಗ್ಸ: ಅಥರ್ವ ಟೈಡೆ, ಶಿಖರ್ ಧವನ್ (ನಾಯಕ), ಸಿಕಂದರ್ ರಜಾ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರಾನ್, ಜಿತೇಶ್ ಶರ್ಮಾ (ವಿಕೆ), ಶಾರುಖ್ ಖಾನ್, ಕಗಿಸೊ ರಬಾಡ, ರಾಹುಲ್ ಚಾಹರ್, ಗುರ್ನೂರ್ ಬ್ರಾರ್, ಅರ್ಶ್‌ದೀಪ್ ಸಿಂಗ್
ಬೆಂಚ್: ಪ್ರಭಾಸಿಮ್ರಾನ್ ಸಿಂಗ್, ಮೋಹಿತ್ ರಥಿ, ರಿಷಿ ಧವನ್, ಮ್ಯಾಥ್ಯೂ ಶಾರ್ಟ್, ಹರ್‌ಪ್ರೀತ್ ಬ್ರಾರ್, ನಾಥನ್ ಎಲ್ಲಿಸ್, ಶಿವಂ ಸಿಂಗ್, ಭಾನುಕಾ ರಾಜಪಕ್ಸೆ, ವಿಧ್ವತ್ ಕಾವೇರಪ್ಪ, ಬಲ್ತೇಜ್ ಸಿಂಗ್, ಹರ್‌ಪ್ರೀತ್ ಸಿಂಗ್ ಭಾಟಿಯಾ
ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ಸಿ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆ), ಆಯುಷ್ ಬಡೋನಿ, ನವೀನ್-ಉಲ್-ಹಕ್, ರವಿ ಬಿಷ್ಣೋಯ್, ಅವೇಶ್ ಖಾನ್, ಯಶ್ ಠಾಕೂರ್
ಬೆಂಚ್: ಕೃಷ್ಣಪ್ಪ ಗೌತಮ್, ಡೇನಿಯಲ್ ಸಾಮ್ಸ್, ಪ್ರೇರಕ್ ಮಂಕಡ್, ಅಮಿತ್ ಮಿಶ್ರಾ, ಮಾರ್ಕ್ ವುಡ್, ಜಯದೇವ್ ಉನದ್ಕತ್, ಮನನ್ ವೋಹ್ರಾ, ಕ್ವಿಂಟನ್ ಡಿ ಕಾಕ್, ಸ್ವಪ್ನಿಲ್ ಸಿಂಗ್, ರೊಮಾರಿಯೋ ಶೆಫರ್ಡ್, ಅರ್ಪಿತ್ ಗುಲೇರಿಯಾ, ಯುಧ್ವೀರ್ ಸಿಂಗ್ ಚರಕ್, ಕರಣ್ ಶರ್ಮಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications