IPL 2023: ಆರ್‌ಸಿಬಿ ತಂಡದ ಬಲಿಷ್ಠ ಆಡುವ ಬಳಗವನ್ನು ಆಯ್ಕೆ ಮಾಡಿದ ಆರ್ ಅಶ್ವಿನ್

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಅಂತಿಮ ಘಟ್ಟಕ್ಕೆ ಕಾಲಿಡುತ್ತಿದ್ದಂತೆಯೇ ಐಪಿಎಲ್ 16ನೇ ಆವೃತ್ತಿಯ ಕುತೂಹಲಗಳು ಹೆಚ್ಚಾಗಲು ಆರಂಭವಾಗಿದೆ. ಕೆಲ ತಂಡಗಳು ಈಗಾಗಲೇ ಪೂರ್ವಸಿದ್ಧತೆಗನ್ನು ನಡೆಸುತ್ತಿದ್ದು ಟೂರ್ನಿಗೆ ಭರದಿಂದ ಸಜ್ಜಾಗುತ್ತಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ಆರ್ ಅಶ್ವಿನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಗ್ಗೆ ಹಂಚಿಕೊಂಡಿರುವ ಮಾಹಿತಿ ಕುತೂಹಲ ಮೂಡಿಸಿದೆ.
ಮುಂದಿನ ಐಪಿಎಲ್ ಆವೃತ್ತಿಗಾಗಿ ಆರ್‌ಸಿಬಿ ತಂಡ ಆಡುವ ಬಳಗ ಹೇಗಿರಬಹುದು ಎಂಬುದು ಆರ್‌ಸಿಬಿ ತಂಡದ ಆಟಗಾರರ ಅಭಿಮಾನಿಗಳ ಕುತೂಹಲವಾಗಿದೆ. ಆರ್‌ಸಿಬಿ ಅಭಿಮಾನಿಗಳು ಯಾವೆಲ್ಲಾ ಆಟಗಾರರು ಆಡುವ ಬಳಗದಲ್ಲಿ ಸ್ಥಾನ ಪಡೆಯಬಹುದು ಎಂಬುದರ ಲೆಕ್ಕಚಾರವನ್ನು ನಡೆಸಲು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಅನುಭವು ಆಟಗಾರ ಆರ್ ಅಶ್ವಿನ್ ಆರ್‌ಸಿಬಿ ತಂಡದ ಆಡುವ ಬಳಗವನ್ನು ಆಯ್ಕೆ ಮಾಡಿದ್ದು ಕುತೂಹಲ ಮೂಡಿಸಿದೆ.
ಕೊಹ್ಲಿ-ಫಾಫ್ ಆರಂಭಿಕ ಆಟಗಾರರು
ಆರ್ ಅಶ್ವಿನ್ ಆಯ್ಕೆ ಮಾಡಿರುವ ಆರ್‌ಸಿಬಿ ತಂಡದ ಆಡುವ ಬಳಗದಲ್ಲಿ ಆರಂಭಿಕರಾಗಿ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಆಯ್ಕೆ ಮಾಡಿದ್ದಾರೆ. ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಶಹ್ಬಾಜ್ ಅಹ್ಮದ್‌ಗೆ ಮಧ್ಯಮ ಕ್ರಮಾಂಕದ ಜವಾಬ್ಧಾರಿ ನೀಡಲಾಗಿದೆ. ಇನ್ನು 36ರ ಹರೆಯದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್‌ಗೆ ಆರನೇ ಕ್ರಮಾಂಕದಲ್ಲಿ ಫಿನಿಷರ್ ಜವಾಬ್ಧಾರಿಯನ್ನು ನೀಡಲಾಗಿದೆ.
ಬೌಲಿಂಗ್ ವಿಭಾಗ
ಇನ್ನು ಆರ್ ಅಶ್ವಿನ್ ಆರ್‌ಸಿಬಿ ತಂಡದಲ್ಲಿ ಸ್ಪಿನ್ನರ್‌ಗಳ ಸ್ಥಾನಕ್ಕೆ ಮಹಿಪಾಲ್ ಲೋಮ್ರೋರ್ ಅಥವಾ ಅನುಜ್ ರಾವತ್ ಹಾಗೂ ವನಿಂದು ಹಸರಂಗ ಅವರನ್ನು ಆಯ್ಕೆ ಮಾಡಿದ್ದಾರೆ. ಇನ್ನು ವೇಗದ ಬೌಲಿಂಗ್ ವಿಭಾಗದಲ್ಲಿ ಜೋಶ್ ಹೇಜಲ್‌ವುಡ್, ಮೊಹಮ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್ ಅವರನ್ನು ಆಯ್ಕೆ ಮಾಡಿದ್ದಾರೆ ಟೀಮ್ ಇಂಡಿಯಾದ ಅನುಭವಿ ಆಟಗಾರ ಆರ್ ಅಶ್ವಿನ್.
ಅಶ್ವಿನ್ ಆಯ್ಕೆ ಮಾಡಿರುವ ಆರ್‌ಸಿಬಿ XI
ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್ ಅಥವಾ ಅನುಜ್ ರಾವತ್, ವನಿಂದು ಹಸರಂಗ, ಜೋಶ್ ಹ್ಯಾಜಲ್‌ವುಡ್, ರೀಸ್ ಟೋಪ್ಲಿ, ಮೊಹಮ್ಮದ್ ಸಿರಾ, ಆಕಾಶ್ ದೀಪ್
ಆರ್‌ಸಿಬಿ ಸಂಪೂರ್ಣ ಸ್ಕ್ವಾಡ್ ಹೀಗಿದೆ
ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ರಜತ್ ಪಾಟಿದಾರ್, ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇವಿಡ್ ವಿಲ್ಲಿ, ವನಿಂದು ಹಸರಂಗ, ಶಹಬಾಜ್ ಅಹಮದ್, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ಸಿದ್ಧಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜೋಶ್ ಹೇಜಲ್‌ವುಡ್, ಕರಣ್ ಶರ್ಮಾ, ಹಿಮಾಂಶು ಶರ್ಮಾ, ವಿಲ್ ಜಾಕ್ಸ್, ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್, ಮೈಕಲ್ ಬ್ರೇಸ್‌ವೆಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications