IPL 2023: 4ನೇ ಪಂದ್ಯದಲ್ಲಿ 3ನೇ ಅರ್ಧ ಶತಕ; 3000 ರನ್‌ಗಳ ಮೈಲಿಗಲ್ಲು ದಾಟಿದ ಜೋಸ್ ಬಟ್ಲರ್
ಐಪಿಎಲ್‌ನಲ್ಲಿ ಜೋಸ್ ಬಟ್ಲರ್ ಅಬ್ಬರದ ಆಟ ಮುಂದುವರಿದಿದೆ. ಕಳೆದ ಬಾರಿಯ ಐಪಿಎಲ್‌ನಲ್ಲಿ ನೀಡಿದ್ದ ಅಮೋಘ ಪ್ರದರ್ಶನವನ್ನು ಈ ಬಾರಿಯ ಐಪಿಎಲ್‌ನಲ್ಲಿಯೂ ಜೋಸ್ ಬಟ್ಲರ್ ಮುಂದುವರಿಸಿದ್ದು ರಾಜಸ್ಥಾನ್ ರಾಯಲ್ಸ್ ಪರ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಜೋಸ್ ಬಟ್ಲರ್ ಅರ್ಧ ಶತಕ ಸಿಡಿಸುವ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ ಮೂರನೇ ಅರ್ಧ ಶತಕ ಸಿಡಿಸಿದಂತಾಗಿದೆ.
ಈ ಪಂದ್ಯದಲ್ಲಿ ಜೋಸ್ ಬಟ್ಲರ್ ಭರ್ಜರಿ ಪ್ರದರ್ಶನ ನೀಡುವುದರ ಜೊತೆಗೆ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ದಾಟಿದ್ದಾರೆ. ಇಂಗ್ಲೆಂಡ್ ಮೂಲದ ಈ ಆಟಗಾರ ಐಪಿಎಲ್‌ನಲ್ಲಿ 3000 ರನ್‌ಗಳ ಮೈಲಿಗಲ್ಲಿ ದಾಟಿದ್ದಾರೆ. ಐಪಿಎಲ್‌ನಲ್ಲಿ ಈ ಸಾಧನೆಯನ್ನು ಅತ್ಯಂತ ವೇಗವಾಗಿ ಮಾಡಿದ 3ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಬಟ್ಲರ್ ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಧನೆಯನ್ನು ಅತ್ಯಂತ ವೇಗವಾಗಿ ಮಾಡಿದ ಆಟಗಾರರ ಪಟ್ಟಿಯಲ್ಲಿ ಕೆಎಲ್ ರಾಹುಲ್ ಮೊದಲ ಸ್ಥಾನದಲ್ಲಿದ್ದರೆ ಕ್ರಿಸ್ ಗೇಲ್ ಎರಡನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರು ಕ್ರಮವಾಗಿ 75 ಹಾಗೂ 80ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು.

ವೈಟ್ ಬಾಲ್ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎನಿಸಿರುವ ಜೋಸ್ ಬಟ್ಲರ್ 2016ರಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಆಡುವ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. 2018ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರಿಕೊಂಡ ಅವರು ಆರ್‌ಆರ್ ತಂಡದ ಪ್ರಮುಖ ಅಸ್ತ್ರವಾಗಿ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಕಳೆದ ಬಾರಿಯ ಐಪಿಎಲ್‌ನಲ್ಲಿ ಜೋಸ್ ಬಟ್ಲರ್ ಅಮೋಘ ಫಾರ್ಮ್‌ನಲ್ಲಿದ್ದು ಅಬ್ಬರಿಸಿದ್ದರು.
ಐಪಿಎಲ್‌ನಲ್ಲಿ ಸಾಕಷ್ಟು ವಿದೇಶಿ ಆಟಗಾರರು ಆಡುತ್ತಿದ್ದು ಕೇವಲ 7 ಮಂದಿ ಮಾತ್ರವೇ 3000ಕ್ಕೂ ಅಧಿಕ ರನ್‌ಗಳಿಸಿದ ಸಾಧನೆ ಮಾಡಿದ್ದಾರೆ. ಡೇವಿಡ್ ವಾರ್ನರ್, ಎವಿ ಡಿವಿಲಿಯರ್ಸ್, ಕ್ರಿಸ್ ಗೇಲ್, ಶೇನ್ ವಾಟ್ಸನ್, ಫಾಫ್ ಡು ಪ್ಲೆಸಿಸ್ ಮತ್ತು ಕಿರಾನ್ ಪೊಲಾರ್ಡ್ ಇದ್ದ ಈ ಪಟ್ಟಿಗೆ ಈಗ ಜೋಸ್ ಬಟ್ಲರ್ ಕೂಡ ಸೇರ್ಪಡೆಯಾಗಿದ್ದಾರೆ.
2022ರ ಐಪಿಎಲ್ ಆವೃತ್ತಿಯಲ್ಲಿ ಜೋಸ್ ಬಟ್ಲರ್ 17 ಪಂದ್ಯಗಳನ್ನು ಆಡಿದ್ದು 863 ರನ್‌ಗಳನ್ನು ಗಳಿಸಿದ್ದರು. ಈ ಮೂಲಕ ದೊಡ್ಡ ರನ್‌ಗಳ ಅಂತರದಿಂದ ಬಟ್ಲರ್ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಇದೀಗ ಈ ಬಾರಿಯ ಆವೃತ್ತಿಯಲ್ಲಿಯೂ ಬಟ್ಲರ್ ಅದೇ ಮಾದರಿಯಲ್ಲಿ ರನ್‌ಗಳನ್ನು ಗಳಿಸುತ್ತಿದ್ದು ನಾಲ್ಕು ಪಂದ್ಯಗಳಲ್ಲಿ 3ನೇ ಅರ್ಧ ಶತಕ ಸಿಡಿಸಿದ್ದಾರೆ.
ಈ ಪಂದ್ಯದಲ್ಲಿ ಎಂದಿನಂತೆ ಆರಂಭಿಕನಾಗಿ ಕಣಕ್ಕಿಳಿದು 36 ಎಸೆತಗಳನ್ನು ಎದುರಿಸಿದ ಜೋಸ್ ಬಟ್ಲರ್ 52 ರನ್‌ಗಳನ್ನು ಗಳಿಸಿ ಮೊಯೀನ್ ಅಲಿಗೆ ವಿಕೆಟ್ ಒಪ್ಪಿಸಿದರು. ಇನ್ನುಳಿದಂತೆ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ದೇವದತ್ ಪಡಿಕ್ಕಲ್ 38 ರನ್‌ಗಳಿಸಿದರೆ ಆರ್ ಅಶ್ವಿನ್ ಹಾಗೂ ಹೇಟ್ಮೇಯರ್ ತಲಾ 30 ರನ್‌ಗಳ ಕೊಡುಗೆ ನೀಡಿದರು. ಇದರ ಪರಿಣಾಮವಾಗಿ ರಾಜಸ್ಥಾನ್ ರಾಯಲ್ಸ್ ತಂಡ 8 ವಿಕೆಟ್ ಕಳೆದುಕೊಂಡು 175 ರನ್‌ಗಳನ್ನು ಗಳಿಸಿದ್ದು ಸವಾಲಿನ ಗುರಿ ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications