ಕೊಹ್ಲಿ ಹೆಸರಿನಲ್ಲಿರುವ ಈ ದೊಡ್ಡ ದಾಖಲೆ ಮುರಿಯಲು ಆತನಿಂದ ಮಾತ್ರ ಸಾಧ್ಯ: ರವಿ ಶಾಸ್ತ್ರಿ ಭವಿಷ್ಯ
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅನೇಕ ದಾಖಲೆಗಳು ಸೃಷ್ಟಿಯಾಗಿದೆ. ಕೆಲ ದಾಖಲೆಗಳು ಅಗಾಗ ಪರಿಷ್ಕೃತಗೊಳ್ಳುತ್ತಿದ್ದರೆ ಕೆಲ ಅಪರೂಪದ ದಾಖಲೆಗಳನ್ನು ಮುರಿಯುವುದು ಅಸಾಧ್ಯವೇನೋ ಎಂಬಂತಿದೆ. ಅದರಲ್ಲಿ ಒಂದು ವಿರಾಟ್ ಕೊಹ್ಲಿ 2016ರ ಐಪಿಎಲ್ ಆವೃತ್ತಿಯಲ್ಲಿ ಸಿಡಿಸಿ ರನ್ ಕೂಡ ಒಂದು. ಆ ಒಂದು ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಬರೊಬ್ಬರಿ 973 ರನ್‌ಗಳನ್ನು ಗಳಿಸಿದ್ದರು.
ಈ ಮೂಲಕ ಒಂದೇ ಆವೃತ್ತಿಯಲ್ಲಿ 900ಕ್ಕೂ ಅಧಿಕ ರನ್‌ಗಳಿಸಿದ ಏಕೈಕ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ ವಿರಾಟ್ ಕೊಹ್ಲಿ. ಐಪಿಎಲ್‌ನಲ್ಲಿ ಮುರಿಯಲು ಅಸಾಧ್ಯ ಎನಿಸಿಕೊಂಡಿರುವ ದಾಖಲೆಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯ ಈ ದಾಖಲೆ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಈ ದಾಖಲೆಯನ್ನು ಮುರಿಯಬಲ್ಲ ಆಟಗಾರ ಇದ್ದಾನೆ ಎಂದು ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಹೇಳಿಕೆ ನೀಡಿದ್ದಾರೆ.

ಯುವ ಆಟಗಾರ ಶುಬ್ಮನ್ ಗಿಲ್ ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಈ ಶ್ರೇಷ್ಠ ದಾಖಲೆಯನ್ನು ಮುರಿಯಲಿದ್ದಾರೆ ಎಂದು ಮಾಜಿ ಕೋಚ್ ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಸಂವಾದಲ್ಲಿ ಭಾಗಿಯಾಗಿದ್ದ ರವಿ ಶಾಸ್ತ್ರಿ ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಈ ದಾಖಲೆಯನ್ನು ಮುರಿಯುವುದು ಕಷ್ಟ. ಆದರೆ ಶುಬ್ಮನ್ ಗಿಲ್‌ಗೆ ಆ ಅವಕಾಶ ಇದೆ ಎಂದಿದ್ದಾರೆ.
"ವಿರಾಟ್ ಕೊಹ್ಲಿಯ ಈ ದಾಖಲೆ ಮುರಿಯಲು ಆತ ಆರಂಭಿಕ ಆಟಗಾರನಾಗಿರಬೇಕು. ಹಾಗಿದ್ದರೆ ಮಾತ್ರ ಆತನಿಗೆ ಹೆಚ್ಚಿನ ರನ್‌ಗಳಿಸುವ ಅವಕಾಶವಿದೆ. ಹಾಗಾಗಿ ಶುಬ್ಮನ್ ಗಿಲ್ ಈ ದಾಖಲೆ ಮುರಿಯುವ ಅವಕಾಶವನ್ನು ಹೊಂದಿದ್ದಾರೆ ಎಂಬುದು ನನ್ನ ಭಾವನೆ. ಯಾಕೆಂದರೆ ಆತ ಅಂಥಾ ಫಾರ್ಮ್ ಹೊಂದಿದ್ದಾರೆ. ಅಲ್ಲದೆ ಆತ ಆರಂಭಿಕ ಆಟಗಾರ. ಆತ ರನ್‌ಗಳಿಸು ಸಾಕಷ್ಟು ಉತ್ತಮ ಅವಕಾಶಗಳನ್ನು ಹೊಂದಿದ್ದಾರೆ. 80-100 ರನ್‌ಗಳನ್ನು ಸತತ ಎರಡ್ಮೂರು ಪಂದ್ಯಗಳಲ್ಲಿ ಆಡಿದರೆ ಅಷ್ಟರಲ್ಲಾಗಲೇ 300-400 ರನ್‌ಗಳು ಅವರ ಖಾತೆಯಲ್ಲಿರುತ್ತದೆ" ಎಂದಿದ್ದಾರೆ ರವಿ ಶಾಸ್ತ್ರಿ.
"ನನ್ನ ಪ್ರಕಾರ ಈ ದಾಖಲೆಯನ್ನು ಮುರಿಯುವುದು ಬಹಳ ಕಷ್ಟ. ಯಾಕೆಂದರೆ 900ಕ್ಕೂ ಅಧಿಕ ರನ್ ಎಂದರೆ ಬಹಳ ದೊಡ್ಡ ಸ್ಕೋರ್. ಆದರೆ ಆರಂಭಿಕ ಆಟಗಾರರಿಗೆ ಎರಡು ಹೆಚ್ಚುವರು ಪಂದ್ಯಗಳು ಹಾಗೂ ಇನ್ನಿಂಗ್ಸ್‌ಗಳು ದೊರೆತರೆ ಮಾತ್ರ ಈ ದಾಖಲೆ ಮುರಿಯಲು ಸಾಧ್ಯ" ಎಂದಿದ್ದಾರೆ ಮಾಜಿ ಕೋಚ್ ರವಿ ಶಾಸ್ತ್ರಿ.
ಶುಬ್ಮನ್ ಗಿಲ್ ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅರ್ಧ ಶತಕ ಸಿಡಿಸಿ ಮಿಂಚಿದ್ದರು ಗಿಲ್. ಆದರೆ ಅದಾದ ಬಳಿಕದ ಎರಡು ಪಂದ್ಯಗಳಲ್ಲಿಯೂ ದೊಡ್ಡ ರನ್ ಗಳಿಸಲು ಸಾಧ್ಯವಾಗಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 14 ರನ್‌ಗಳಿಸಿ ಔಟಾದರೆ ಕೆಕೆಆರ್ ವಿರುದ್ಧ 39ರನ್‌ಗಳ ಕೊಡುಗೆ ನೀಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications