For Quick Alerts
ALLOW NOTIFICATIONS  
For Daily Alerts
 

IPL 2023 SRH Captain: ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೇ ಈತನೇ ಸೂಕ್ತ ನಾಯಕ ಎಂದ ರವಿಚಂದ್ರನ್ ಅಶ್ವಿನ್

IPL 2023: Ravichandran Ashwin Has Selected Aiden Markram As The Captain For Sunrisers Hyderabad (SRH)

ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆರಂಭಕ್ಕೆ ಇನ್ನು ಒಂದೂವರೆ ತಿಂಗಳಷ್ಟೇ ಬಾಕಿ ಇದೆ. 2023ರ ಆವೃತ್ತಿಯಲ್ಲಿ ಹತ್ತು ತಂಡಗಳು ಪ್ರಶಸ್ತಿಗಾಗಿ ಸೆಣೆಸಲಿವೆ. ಈ ಬಾರಿ ಐಪಿಎಲ್ ಹಳೆಯ ಮಾದರಿಗೆ ಮರಳಿದ್ದು ತವರು ಮತ್ತು ಹೊರಗಿನ ಅಂಗಳದಲ್ಲಿ ತಂಡಗಳು ಆಡಲಿವೆ.

2023ರ ಐಪಿಎಲ್ ಮಿನಿ ಹರಾಜಿನಲ್ಲಿ ಪ್ರಮುಖ ಆಟಗಾರರು ವಿವಿಧ ತಂಡಗಳಿಗೆ ಸೇರ್ಪಡೆಯಾಗಿದ್ದಾರೆ. 8 ತಂಡಗಳು ಈಗಾಗಲೇ ತಂಡದ ನಾಯಕನನ್ನು ನಿರ್ಧರಿಸಿವೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಇನ್ನು ತಮ್ಮ ನಾಯಕನ ಹೆಸರನ್ನು ಘೋಷಿಸಿಲ್ಲ. ರಿಷಬ್ ಪಂತ್ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರಿಂದ ಅವರು ನಾಯಕನ ಬದಲಾವಣೆ ಮಾಡುವುದು ಅನಿವಾರ್ಯವಾಗಿದೆ.

ಸನ್‌ರೈಸರ್ಸ್ ಹೈದರಾಬಾದ್ ಮಾತ್ರ ಮಿನಿ ಹರಾಜಿಗೆ ಮುನ್ನ ನಾಯಕ ಕೇನ್‌ ವಿಲಿಯಮ್ಸ್‌ರನ್ನು ಬಿಡುಗಡೆ ಮಾಡಿದ್ದು, ಹೊಸ ನಾಯಕನ ನೇಮಕ ಮಾಡಬೇಕಿದೆ. ಭಾರತ ತಂಡದ ಸ್ಪಿನ್ನರ್ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ನಾಯಕ ಯಾರಾಗಬೇಕು ಎನ್ನುವ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ ಎಸ್‌ಆರ್‌ಹೆಚ್ ತಂಡಕ್ಕೆ ನಾಯಕನಾಗಬೇಕು ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ. ಅಶ್ವಿನ್ ಹೇಳಿಕೆಯ ಹಿಂದೆ ಸಾಖಷ್ಟು ಲೆಕ್ಕಾಚಾರ ಇದೆ.

ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್

ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್

ಇತ್ತೀಚೆಗೆ ಮುಕ್ತಾಯವಾದ ಎಸ್‌ಎ 20 ಉದ್ಘಾಟನಾ ಲೀಗ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಒಡೆತನದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡ ಚಾಂಪಿಯನ್ ಆಗಿತ್ತು. ಐಡೆನ್ ಮಾರ್ಕ್ರಾಮ್‌ ಈ ತಂಡದ ನಾಯಕತ್ವ ವಹಿಸಿಕೊಂಡಿದ್ದು, ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.

ಮಾರ್ಕ್ರಾಮ್ ಎಸ್‌ಎ 20 ಲೀಗ್‌ನಲ್ಲಿ ಆಡಿದ 12 ಪಂದ್ಯಗಳಲ್ಲಿ 127.97 ಸ್ಟ್ರೈಕ್‌ರೇಟ್ ಮತ್ತು 33.27 ಸರಾಸರಿಯಲ್ಲಿ 366 ರನ್ ಗಳಿಸಿದ್ದರು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್‌ ವಿರುದ್ಧ 58 ಎಸೆತಗಳಲ್ಲಿ 100 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೆ ಬೌಲಿಂಗ್‌ನಲ್ಲಿ ಕೂಡ ಮಾರ್ಕ್ರಾಮ್ ಮಿಂಚು ಹರಿಸಿದರು. 14.63 ಸರಾಸರಿಯಲ್ಲಿ 6.18 ಎಕಾನಮಿಯಲ್ಲಿ 11 ವಿಕೆಟ್ ಪಡೆದರು. ಮಾರ್ಕ್ರಾಮ್ ಆಲ್‌ರೌಂಡರ್ ಆಟಕ್ಕೆ ಮನಸೋತಿರುವ ಅಶ್ವಿನ್‌ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಎಸ್‌ಆರ್‌ಎಚ್‌ ಆಲ್‌ರೌಂಡರ್‌ರನ್ನು ಶ್ಲಾಘಿಸಿದರು.

ಆತನೆ ನಾಯಕನಾಗಲಿ

ಆತನೆ ನಾಯಕನಾಗಲಿ

"ಏಡೆನ್ ಮಾರ್ಕ್ರಾಮ್ ಯಾಕೆ ಸ್ಟಾರ್ ಕ್ರಿಕೆಟರ್ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಸನ್‌ರೈಸರ್ಸ್ ಫ್ರಾಂಚೈಸಿ ಅವರನ್ನು ಉತ್ತಮವಾಗಿ ಬೆಂಬಲಿಸಿತ್ತು. 2023ರ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗೆ ಏಡೆನ್ ಮಾರ್ಕ್ರಾಮ್ ನಾಯಕನಾಗುವುದು ಖಚಿತವಾಗಿದೆ. ಎಸ್‌ಎ 20 ಲೀಗ್‌ನಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ" ಎಂದು ಅಶ್ವಿನ್ ಹೇಳಿದ್ದಾರೆ.

"ಎಸ್‌ಎ20 ಲೀಗ್‌ನಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್‌ ಉತ್ತಮವಾಗಿ ಆಡಿದೆ. ಮಾರ್ಕ್ರಾಮ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಫ್ರಾಂಚೈಸಿಗೆ ಈಗ ಅವರ ಮೇಲಿನ ವಿಶ್ವಾಸ ಎರಡರಷ್ಟು ಹೆಚ್ಚಾಗಿದೆ" ಎಂದು ಅಶ್ವಿನ್ ಹೇಳಿದರು.

ಉತ್ತಮ ತಂಡವನ್ನು ಆಯ್ಕೆ ಮಾಡಿದ್ದಾರೆ

ಉತ್ತಮ ತಂಡವನ್ನು ಆಯ್ಕೆ ಮಾಡಿದ್ದಾರೆ

ಐಪಿಎಲ್‌ 2023ರ ಮಿನಿ ಹರಾಜಿನಲ್ಲಿ ಎಸ್‌ಆರ್‌ಹೆಚ್ ಫ್ರಾಂಚೈಸಿ ಉತ್ತಮ ತಂಡವನ್ನು ಆಯ್ಕೆ ಮಾಡಿದೆ. ಭವಿಷ್ಯದಲ್ಲಿ ತಂಡಕ್ಕೆ ಉತ್ತಮ ಫಲಿತಾಂಶಗಳನ್ನು ನೀಡಲು ಇದು ಸಹಾಯ ಮಾಡಲಿದೆ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್‌ 2022ರಲ್ಲಿ ಎಸ್‌ಆರ್‌ಹೆಚ್ ತಂಡ ಅಂಕಪಟ್ಟಿಯಲ್ಲಿ 8ನೇ ಸ್ಥಾನ ಗಳಿಸಿತ್ತು. ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿ ಆಡಿದ 14 ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 6 ಪಂದ್ಯಗಳಲ್ಲಿ ಗೆದ್ದು, 8 ಪಂದ್ಯಗಳಲ್ಲಿ ಸೋಲನುಭವಿಸಿತ್ತು.

ತಂಡದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಕೂಡ ಇದ್ದು, ಅವರು ಕೂಡ ನಾಯಕತ್ವಕ್ಕೆ ಅರ್ಹರಾಗಿದ್ದಾರೆ. ಆದರೆ, ಸನ್‌ರೈಸರ್ಸ್ ಹೈದರಾಬಾದ್ ಎಸ್‌ಎ20 ಟೂರ್ನಿಯಲ್ಲಿ ಯಶಸ್ವಿಯಾಗಿರುವ ಏಡೆನ್ ಮಾರ್ಕ್ರಾಮ್‌ಗೆ ಮಣೆಹಾಕುವ ಸಾಧ್ಯತೆ ಹೆಚ್ಚಾಗಿದೆ.

Story first published: Thursday, February 16, 2023, 14:40 [IST]
Other articles published on Feb 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+