For Quick Alerts
ALLOW NOTIFICATIONS  
For Daily Alerts
 

RCB vs MI: ಆರ್‌ಸಿಬಿ ತಂಡದ ಗಾಯದ ಪಟ್ಟಿಗೆ ಮತ್ತೋರ್ವ ಆಟಗಾರನ ಸೇರ್ಪಡೆ!

ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಈ ಬಾರಿಯ ಆವೃತ್ತಿಯ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡ ಅಮೋಘ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಹಾಘೂ ಬೌಲಿಂಗ್‌ನ್ಲಲಿ ಅಮೋಘ ಪ್ರದರ್ಶನ ನೀಡಿದ ಆರ್‌ಸಿಬಿ ತಂಡ 8 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದ್ದು ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ. ಈ ಗೆಲುವಿನ ಸಂಭ್ಮದಲ್ಲಿರುವ ಆರ್‌ಸಿಬಿ ತಂಡಕ್ಕೆ ಈ ಪಂದ್ಯದಲ್ಲಿ ಹಿನ್ನಡೆಯೊಂದು ಉಂಟಾಗಿದ್ದುಯ ಮ್ಯಾನೇಜ್‌ಮೆಂಟ್‌ಗೆ ತಲೆನೋವು ತಂದಿಟ್ಟಿದೆ.

ಆರ್‌ಸಿಬಿ ತಂಡದ ವೇಗಿ ರೀಸ್ ಟೋಪ್ಲಿ ಈ ಬಾರಿಯ ಮೊದಲ ಪಂದ್ಯದಲ್ಲಿಯೇ ಗಾಯಕ್ಕೆ ಒಳಗಾಗಿದ್ದಾರೆ. ಫೀಲ್ಡಿಂಗ್ ಸಂದರ್ಭದಲ್ಲಿ ಟೋಪ್ಲಿ ಭುಜಕ್ಕೆ ಗಾಯವಾಗಿದ್ದು ತೀವ್ರ ನೋವಿಗೆ ಒಳಗಾದರು. ತಕ್ಷಣವೇ ಆರ್‌ಸಿಬಿ ಫಿಸಿಯೋ ಆಗಮಿಸಿ ಪರೀಕ್ಷಿಸಿದ್ದು ನಂತರ ಟೋಪ್ಲಿ ಮೈದಾನವನ್ನು ತೊರೆದರು. ಬಳಿಕ ಈ ಪಂದ್ಯದಲ್ಲಿ ಮುಂದುವರಿಯಲು ಅಸಮರ್ಥರಾಗಿದ್ದಾರೆ ಎಂದು ಘೋಷಿಸಲಾಯಿತು.

IPL 2023: RCB pacer Reece Topley injured while fielding against Mumbai Indians

ಇನ್ನು ಟೋಪ್ಲಿ ಗಾಯದ ಬಗ್ಗೆ ಕಾಮೆಂಟೇಟರ್ ಇಯಾನ್ ಬಿಷಪ್ ನೇರಪ್ರಸಾರದ ಸಂದರ್ಭದಲ್ಲಿ ಮಾಹಿತಿ ನೀಡಿದ್ದು ಭುಜದ ಮೂಳೆ ಸ್ಥಳಾಂತರವಾಗಿರುವುದನ್ನು ಖಚಿತಪಡಿಸಿದರು. ಹೀಗಾಗಿ ಟೋಪ್ಲಿ ಈಗ ಮುಂದಿನ ಪಂದ್ಯಗಳಲ್ಲಿ ಆಡುವ ಬಗ್ಗೆಯೂ ಅನುಮಾನಗಳುಂಟಾಗಿದೆ. ಇನ್ನು ಆರ್‌ಸಿಬಿ ತಂಡ ಈಗಾಗಲೇ ಗಾಯದ ಸಮಸ್ಯೆಯಿಂದ ಬಳಲುತ್ತಿದೆ. ತಂಡದ ಆಟಗಾರರಾದ ಜೋಶ್ ಹೇಜಲ್‌ವುಡ್ ಹಾಗೂ ರಜತ್ ಪಾಟಿದಾರ್ ಗಾಯದ ಕಾರಣದಿಂದಾಗಿ ಆರಂಬಿಕ ಕೆಲ ಪಂದ್ಯಗಳಿಂದ ಹೊರಗುಳಿಯುವುದು ಖಚಿತವಾಗಿದೆ.

ಈ ಪಂದ್ಯದಲ್ಲಿ ಆರ್‌ಸಿಬಿ ಪರವಾಗಿ ಪದಾರ್ಪಣೆ ಮಾಡಿದ ರೀಸ್ ಟೋಪ್ಲಿ ಎರಡು ಓವರ್‌ಗಳ ಬೌಲಿಂಗ್ ನಡೆಸಿ ಒಂದು ವಿಕೆಟ್ ಕೂಡ ಪಡೆದಿದ್ದರು. ಮುಂಬೈ ಇಂಡಿಯನ್ಸ ತಂಡದ ಸ್ಟಾರ್ ಆಟಗಾರ ಕ್ಯಾಮರೂನ್ ಗ್ರೀನ್ ಅವರನ್ನು ಟೋಪ್ಲಿ ಬಲಿ ಪಡೆದಿದ್ದರು. ಈ ಬಾರಿಯ ಆವೃತ್ತಿಯೂ ಮುನ್ನ ನಡೆದ ಹರಾಜಿನಲ್ಲಿ 75 ಲಕ್ಷ ಮೂಲ ಬೆಲೆ ಹೊಂದಿದ್ದ ಟೋಪ್ಲಿ ಅವರನ್ನು ಆರ್‌ಸಿಬಿ 1.90 ಕೋಟಿ ನೀಡಿ ಖರೀದಿಸಿತ್ತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ಮೈಕಲ್ ಬ್ರೇಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶ್ ದೀಪ್, ರೀಸ್ ಟೋಪ್ಲಿ, ಮೊಹಮ್ಮದ್ ಸಿರಾಜ್
ಬೆಂಚ್: ಸುಯಶ್ ಪ್ರಭುದೇಸಾಯಿ, ಅನುಜ್ ರಾವತ್, ಮನೋಜ್ ಭಾಂಡಗೆ, ಮಹಿಪಾಲ್ ಲೊಮ್ರೋರ್, ಡೇವಿಡ್ ವಿಲ್ಲಿ, ಸಿದ್ದಾರ್ಥ್ ಕೌಲ್,
ಸೋನು ಯಾದವ್, ರಾಜನ್ ಕುಮಾರ್, ಅವಿನಾಶ್ ಸಿಂಗ್, ಫಿನ್ ಅಲೆನ್, ಹಿಮಾಂಶು ಶರ್ಮಾ

ಮುಂಬೈ ಇಂಡಿಯನ್ಸ್ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಕ್ಯಾಮೆರಾನ್ ಗ್ರೀನ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೋಫ್ರಾ ಆರ್ಚರ್, ಅರ್ಷದ್ ಖಾನ್
ಬೆಂಚ್: ಡೆವಾಲ್ಡ್ ಬ್ರೆವಿಸ್, ರಮಣದೀಪ್ ಸಿಂಗ್, ಟ್ರಿಸ್ಟಾನ್ ಸ್ಟಬ್ಸ್, ಶಮ್ಸ್ ಮುಲಾನಿ, ಕುಮಾರ್ ಕಾರ್ತಿಕೇಯ, ಅರ್ಜುನ್ ತೆಂಡೂಲ್ಕರ್, ಜೇಸನ್ ಬೆಹ್ರೆಂಡಾರ್ಫ್, ಸಂದೀಪ್ ವಾರಿಯರ್, ಆಕಾಶ್ ಮಾಧ್ವಲ್, ದುವಾನ್ ಜಾನ್ಸೆನ್, ವಿಷ್ಣು ವಿನೋದ್, ರಾಘವ್ ಗೋಯಲ್

Story first published: Monday, April 3, 2023, 2:30 [IST]
Other articles published on Apr 3, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+