ಹೈ ವೋಲ್ಟೇಜ್ ಪಂದ್ಯಕ್ಕೆ ಮುನ್ನ ವಿರಾಟ್ ಕೊಹ್ಲಿ ರೆಸ್ಟೋರೆಂಟ್‌ಗೆ ಭೇಟಿ ಕೊಟ್ಟ ಆರ್‌ಸಿಬಿ ಆಟಗಾರರು
ಐಪಿಎಲ್‌ನ ತಮ್ಮ ಮೊದಲನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಪಂದ್ಯವನ್ನಾಡಲು ಕೋಲ್ಕತ್ತಾಗೆ ತೆರಳಿದೆ. ಏಪ್ರಿಲ್ 6ರಂದು ಈಡನ್ ಗಾರ್ಡನ್ಸ್ ಅಂಗಳದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣೆಸಲಿದೆ. ಈಗಾಗಲೇ ಆರ್ ಸಿಬಿ ತಂಡದ ಆಟಗಾರರು ಕೋಲ್ಕತ್ತಾಗೆ ಪ್ರಯಾಣಿಸಿದ್ದು, ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ಎರಡನೇ ಪಂದ್ಯದಲ್ಲಿ ಕೂಡ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ ಫಾಫ್ ಡುಪ್ಲೆಸಿಸ್ ಪಡೆ.
ಕೆಕೆಆರ್ ವಿರುದ್ಧದ ಹೈ ವೋಲ್ಟೇಜ್ ಪಂದ್ಯಕ್ಕೆ ಮುನ್ನ ಆರ್ ಸಿಬಿಯ ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡು ಪ್ಲೆಸಿಸ್ ಮತ್ತು ಮೊಹಮ್ಮದ್ ಸಿರಾಜ್ ಮತ್ತು ಇತರ ಆಟಗಾರರು ವಿರಾಟ್ ಕೊಹ್ಲಿ ಒಡೆತನದ ಒನ್8 ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದರು. ನಾಲ್ವರು ಆಟಗಾರರ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ ಬಳಿಕ, ಸಾಕಷ್ಟು ಚರ್ಚೆ, ಸಂವಾದ ನಡೆಸಿದ್ದಾರೆ. ಕೊಹ್ಲಿ ಮತ್ತು ಇತರ ಆಟಗಾರರು ರೆಸ್ಟೋರೆಂಟ್‌ಗೆ ಭೇಟಿ ನೀಡಿರುವ ಫೋಟೊಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ನಾಲ್ವರು ಕ್ರಿಕೆಟ್ ಆಟಗಾರರು ಸಂವಾದ ಮತ್ತು ಊಟ ಮಾಡುವಾಗ ಸಾಕಷ್ಟು ಚರ್ಚೆ ಮಾಡಿದ್ದಾರೆ. ಅವರು ಮುಂದಿನ ಪಂದ್ಯದಲ್ಲಿ ಗೆಲುವಿನ ರಣತಂತ್ರ ರೂಪಿಸುತ್ತಿದ್ದಾರೆ ಎಂದು ಅಭಿಮಾನಿಗಳು ತಿಳಿದಿದ್ದಾರೆ. ಮೈದಾನದ ಹೊರಗಡೆ ಆಟಗಾರರು ಬಿಡುವಿನ ವೇಳೆಯನ್ನು ಕಳೆಯುತ್ತಿರುವುದನ್ನು ನೋಡಿ ಅಭಿಮಾನಿಗಳು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಈಡನ್ ಗಾರ್ಡನ್ಸ್ ಅಂಗಳದಲ್ಲಿ ವಿರಾಟ್ ಕೊಹ್ಲಿ ಆಟವನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಕೊಹ್ಲಿ ಒಡೆತನದ ಒನ್8 ರೆಸ್ಟೋರೆಂಟ್
ವಿರಾಟ್ ಕೊಹ್ಲಿ ಖ್ಯಾತ ಕ್ರಿಕೆಟಿಗ ಎನ್ನುವುದು ಇಡೀ ಜಗತ್ತಿಗೆ ಗೊತ್ತು, ಆದರೆ ಅವರು ಹಲವು ಉದ್ಯಮಗಳಲ್ಲಿ ಬಂಡವಾಳ ಹೂಡಿದ್ದಾರೆ ಎನ್ನುವುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಹೌದು, ವಿರಾಟ್ ಕೊಹ್ಲಿ ಹಲವು ರೆಸ್ಟೋರೆಂಟ್‌ಗಳ ಮಾಲಿಕ, ದೆಹಲಿ, ಪುಣೆ, ಮುಂಬೈ ಮತ್ತು ಕೋಲ್ಕತ್ತಾ ನಗರಗಳಲ್ಲಿ ಐಷಾರಾಮಿ ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾರೆ. ಮುಂಬೈನ ಜುಹು ಬೀಚ್‌ನಲ್ಲಿ ಖ್ಯಾತ ಸಂಗೀತಗಾರ ಕಿಶೋರ್ ಕುಮಾರ್ ಅವರ ಬಂಗಲೆಯನ್ನು ರೆಸ್ಟೋರೆಂಟ್ ಆಗಿ ಬದಲಾಯಿಸಿದ್ದರು.
ಅವರ ರೆಸ್ಟೋರೆಂಟ್ ಮತ್ತು ಬಾರ್ ಒನ್8 ಕಮ್ಯೂನ್ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತವೆ. ಕೋಲ್ಕತ್ತಾದಲ್ಲಿ 2021ರಲ್ಲಿ ರೆಸ್ಟೋರೆಂಟ್ ಆರಂಭವಾಗಿದೆ. ನಗರ್ ಗೋಲ್ಡನ್ ಪಾರ್ಕ್‌ನ ಸಮೀಪದಲ್ಲಿ ಈ ರೆಸ್ಟೋರೆಂಟ್ ಅನ್ನು ನಿರ್ಮಿಸಲಾಗಿದೆ. ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ಸಮ್ಮಿಶ್ರಣದಲ್ಲಿ ಈ ರೆಸ್ಟೋರೆಂಟ್ ಅನ್ನು ವಿನ್ಯಾಸ ಮಾಡಲಾಗಿದೆ. ಹಳೆಯ ಕಾಲದ ಪೀಠೋಪಕರಣಗಳು ಕೋಲ್ಕತ್ತಾ ನಗರದ ಗತವೈಭವವನ್ನು ನೆನಪು ಮಾಡುತ್ತವೆ. ಮೊದಲ ರೆಸ್ಟೋರೆಂಟ್ ದೆಹಲಿಯಲ್ಲಿ ಆರಂಭವಾದರೆ, ಎರಡನೇ ರೆಸ್ಟೋರೆಂಟ್ ಕೋಲ್ಕತ್ತಾದಲ್ಲಿ ಆರಂಭಿಸಲಾಗಿದೆ.
ಪ್ರಸಿದ್ಧ ಇಂಟೀರಿಯರ್ ಡಿಸೈನರ್ ಸುಮೇಶ್ ಮೆನನ್ ರಚಿಸಿದ ವಿಶಿಷ್ಟವಾದ ರೆಸ್ಟೊ-ಬಾರ್ 100 ಜನರ ಆಸನ ಸಾಮರ್ಥ್ಯವನ್ನು ಹೊಂದಿದೆ ಮತ್ತು 4,500 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ. ವಿಐಪಿ ಆಸನ ಪ್ರದೇಶಗಳು, ಕ್ಯಾಪ್ಸುಲ್-ಶೈಲಿಯ ಪಾಡ್‌ಗಳು ಮತ್ತು ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿಯ ಸಹಿಯ ಎಲ್‌ಇಡಿ-ಲೈಟ್ ಪ್ರಮುಖ ಆಕರ್ಷಣೆಯಾಗಿದೆ. ಕೊಹ್ಲಿ ಈ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದು, ಅಲ್ಲಿನ ಅಭಿಮಾನಿಗಳಿಗೂ ಖುಷಿ ನೀಡಿದೆ. ಮೊದಲನೇ ಪಂದ್ಯವನ್ನು ಗೆದ್ದಿರುವ ಆರ್ ಸಿಬಿ ಎರಡನೇ ಪಂದ್ಯದಲ್ಲಿ ಅಬ್ಬರಿಸಲು ಸಜ್ಜಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications