Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಆರ್‌ಸಿಬಿ ತಂಡಕ್ಕೆ ದೊಡ್ಡ ಹಿನ್ನಡೆ: ಆರಂಭದ ಕೆಲವು ಪಂದ್ಯಗಳಿಗೆ ಪ್ರಮುಖ ವೇಗಿ ಗೈರು

IPL 2023: RCBs Ace Pacer Josh Hazlewood Is Set To Miss A Few Matches Of The Ipl 2023

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) 16ನೇ ಆವೃತ್ತಿಗಾಗಿ ಎಲ್ಲಾ ತಂಡಗಳು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿವೆ. ಟೂರ್ನಿಯ ಆರಂಭಕ್ಕೆ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

ತಂಡದ ಪ್ರಮುಖ ವೇಗಿ ಜೋಶ್ ಹೇಜಲ್‌ವುಡ್‌ ಆರಂಭದ ಕೆಲವು ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ. ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಆರಂಭಕ್ಕೆ ಮುನ್ನ ಗಾಯಗೊಂಡಿದ್ದ ಹೇಜಲ್‌ವುಡ್, ಈಗ ಟೆಸ್ಟ್ ಮಾತ್ರದವಲ್ಲದೆ, ಏಕದಿನ ಸರಣಿಯಿಂದಲೂ ಹೊರಬಿದ್ದಿದ್ದಾರೆ.

ಹಿಮ್ಮಡಿ ಮೇಲಿನ ಭಾಗ (Achilles) ಗಾಯದ ಸಮಸ್ಯೆಯಿಂದ ಬಳಲುತ್ತರುವ ಜೋಶ್ ಹೇಜಲ್‌ವುಡ್ ಯಾವಾಗ ಚೇತರಿಸಿಕೊಳ್ಳಲಿದ್ದಾರೆ ಎನ್ನುವುದು ಸದ್ಯಕ್ಕೆ ತಿಳಿದಿಲ್ಲ. ಐಪಿಎಲ್‌ ಆರಂಭದ ವೇಳೆಗೆ ಗುಣಮುಖರಾದರು, ಆರಂಭದ ಎರಡು ಮೂರು ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಪವರ್ ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ತಂಡದ ಪ್ರಮುಖ ಬೌಲರ್ ಆಗಿರುವ ಕಾರಣ ಹೇಜಲ್‌ವುಡ್ ಅನುಪಸ್ಥಿತಿ ತಂಡಕ್ಕೆ ಹಿನ್ನಡೆಯಾಗಿದೆ.

ಆಶಸ್ ಸರಣಿ ಮತ್ತು ಏಕದಿನ ವಿಶ್ವಕಪ್ ಇರುವ ಕಾರಣ ಆಟಗಾರರ ಫಿಟ್‌ನೆಸ್ ಬಗ್ಗೆ ಈ ಬಾರಿ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಹೇಜಲ್‌ವುಡ್ ಸಂಪೂರ್ಣವಾಗಿ ಫಿಟ್ ಆದ ಬಳಿಕವಷ್ಟೆ ಐಪಿಎಲ್‌ಗೆ ಬರಲಿದ್ದಾರೆ. ಹೇಜಲ್‌ವುಡ್ ಗಾಯಗೊಂಡಿರುವ ಸುದ್ದಿಯ ನಡುವೆಯೇ ಮ್ಯಾಕ್ಸ್‌ವೆಲ್ ಚೇತರಿಸಿಕೊಂಡಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

IPL 2023: RCBs Ace Pacer Josh Hazlewood Is Set To Miss A Few Matches Of The Ipl 2023

ಏಕದಿನ ಸರಣಿಗೆ ಆಯ್ಕೆಯಾಗಿರುವ ಮ್ಯಾಕ್ಸ್‌ವೆಲ್

ಆಸ್ಟ್ರೇಲಿಯಾದ ಸ್ಫೋಟಕ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್‌ಗೆ ಮುಂಚೆ ಚೇತರಿಸಿಕೊಂಡಿರುವುದು ಅಭಿಮಾನಿಗಳಿಗೆ ಸಂತೋಷವನ್ನುಂಟುಮಾಡಿದೆ. ಟಿ20 ವಿಶ್ವಕಪ್ ಬಳಿಕ ಕಾಲಿನ ಗಾಯಕ್ಕೆ ತುತ್ತಾಗಿದ್ದ ಮ್ಯಾಕ್ಸ್‌ವೆಲ್ ಶಸ್ತ್ರಚಿಕಿತ್ಸೆ ಪಡೆದಿದ್ದರು.

ದೀರ್ಘಕಾಲ ವಿಶ್ರಾಂತಿ ಪಡೆದ ಬಳಿಕ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಬಳಿಕ ಆಸ್ಟ್ರೇಲಿಯಾ ಭಾರತದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದ್ದು, ಈ ಸರಣಿಗಾಗಿ ಅವರು ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಏಕದಿನ ಸರಣಿಯಲ್ಲಿ ಮ್ಯಾಕ್ಸ್‌ವೆಲ್‌ ಆಡುವ ಬಳಗದಲ್ಲಿ ಸ್ಥಾನ ಪಡೆದರೆ, ಅವರು ಐಪಿಎಲ್‌ನಲ್ಲಿ ಮೊದಲನೇ ಪಂದ್ಯದಲ್ಲೇ ಕಣಕ್ಕಿಳಿಯಲಿದ್ದಾರೆ.

IPL 2023: RCBs Ace Pacer Josh Hazlewood Is Set To Miss A Few Matches Of The Ipl 2023

ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಪಂದ್ಯ

ಮಾರ್ಚ್ 31ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ 2023ಕ್ಕೆ ಅದ್ದೂರಿ ಚಾಲನೆ ಸಿಗಲಿದ್ದು, ಆರ್‌ಸಿಬಿ ಟೂರ್ನಿಯಲ್ಲಿ ತನ್ನ ಮೊದಲನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ಅನ್ನು ಎದುರಿಸಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಈ ಪಂದ್ಯ ನಡೆಯಲಿದ್ದು, ತವರಿನ ತಂಡಕ್ಕೆ ಬೆಂಬಲಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಆರ್‌ಸಿಬಿ ತಂಡ ತವರಿನಲ್ಲಿ 5 ಪಂದ್ಯಗಳನ್ನು ಆಡಲಿದೆ.

Story first published: Thursday, February 23, 2023, 19:15 [IST]
Other articles published on Feb 23, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+