Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL: 16 ವರ್ಷ ಆಟಗಾರರ ಸಂಬಳಕ್ಕೆ ತಂಡಗಳು ಖರ್ಚು ಮಾಡಿದ ಹಣ; 1000 ಕೋಟಿ ಸುರಿದದ್ದು ಒಂದೇ ತಂಡ!

IPL 2023: RCB spent most amount on players salary from IPL 2008 to IPL 2023

ಸದ್ಯ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿದ್ದು, ನಿನ್ನೆಯಷ್ಟೆ ( ಮೇ 24 ) ನಡೆದ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಎಲಿಮಿನೇಟರ್ ಪಂದ್ಯ ಮುಕ್ತಾಯಗೊಂಡಿದೆ.

ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 81 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್ ಎರಡನೇ ಕ್ವಾಲಿಫಯರ್ ಪಂದ್ಯದ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ. ಇನ್ನು ಸೋತ ಲಕ್ನೋ ಸೂಪರ್ ಜೈಂಟ್ಸ್ ತಂಡ ಟೂರ್ನಿಯಿಂದ ಹೊರಬಿದ್ದಿದೆ.

ನಾಳೆ ( ಮೇ 26 ) ನಡೆಯಲಿರುವ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಜತೆ ಫೈನಲ್ ಪಂದ್ಯವನ್ನಾಡಲು ಅವಕಾಶ ಗಿಟ್ಟಿಸಿಕೊಳ್ಳುವ ಯತ್ನ ನಡೆಸಲಿವೆ. ಹೀಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಯಾವ ತಂಡ ಕಪ್ ಗೆಲ್ಲಲಿದೆ ಎಂಬ ಕುತೂಹಲ ಉಂಟಾಗಿದೆ.

ಹೀಗಿರುವಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇಲ್ಲಿಯವರೆಗೂ ನಡೆದಿರುವ ಒಟ್ಟು ಹದಿನಾರು ಆವೃತ್ತಿಗಳಲ್ಲಿ ಆಟಗಾರರನ್ನು ಖರೀದಿಸಲು ಯಾವ ಫ್ರಾಂಚೈಸಿಗಳು ಎಷ್ಟು ಹಣ ಖರ್ಚು ಮಾಡಿವೆ ಎಂಬ ಮಾಹಿತಿ ಬಿಡುಗಡೆಯಾಗಿದೆ. ಸದ್ಯ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯ ಭಾಗವಾಗಿರುವ ಎಲ್ಲಾ ಹತ್ತು ತಂಡಗಳು ಆಟಗಾರರ ಖರೀದಿಗಾಗಿ ಎಷ್ಟು ಹಣ ಸುರಿದಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

* ರಾಯಲ್ ಚಾಲೆಂಜರ್ಸ್ ಬೆಂಗಳೂರು 2008ರಿಂದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯವರೆಗೂ ಒಟ್ಟು 1003.7 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದು, ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಖರ್ಚು ಮಾಡಿದ ಫ್ರಾಂಚೈಸಿ ಎನಿಸಿಕೊಂಡಿದೆ.

* ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 2008ರಿಂದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯವರೆಗೂ ಒಟ್ಟು 978.3 ಕೋಟಿ ಖರ್ಚು ಮಾಡಿದ್ದು, ಎರಡನೆ ಸ್ಥಾನದಲ್ಲಿದೆ.

* ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ 2008ರಿಂದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯವರೆಗೂ ಒಟ್ಟು 939.6 ಕೋಟಿ ಖರ್ಚು ಮಾಡಿದೆ.

* ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 2008ರಿಂದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯವರೆಗೂ ಒಟ್ಟು 918.7 ಕೋಟಿ ರೂಪಾಯಿಗಳನ್ನು ಆಟಗಾರರ ಖರೀದಿಗಾಗಿ ಸುರಿದಿದೆ.

* ಪಂಜಾಬ್ ಕಿಂಗ್ಸ್ ಫ್ರಾಂಚೈಸಿ 2008ರಿಂದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯವರೆಗೂ ಒಟ್ಟು 860.9 ಕೋಟಿ ರೂಪಾಯಿಗಳನ್ನು ಆಟಗಾರರ ಖರೀದಿಗಾಗಿ ಸುರಿದಿದೆ.

* ಚೆನ್ನೈ ಸೂಪರ್ ಕಿಂಗ್ಸ್ 2008ರಿಂದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯವರೆಗೂ ಒಟ್ಟು 854.1 ಕೋಟಿ ರೂಪಾಯಿಗಳನ್ನು ಆಟಗಾರರ ಖರೀದಿಗಾಗಿ ಸುರಿದಿದೆ.

* ಸನ್ ರೈಸರ್ಸ್ ಹೈದರಾಬಾದ್ 2008ರಿಂದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯವರೆಗೂ ಒಟ್ಟು 735.4 ಕೋಟಿ ರೂಪಾಯಿಗಳನ್ನು ಆಟಗಾರರ ಖರೀದಿಗಾಗಿ ಸುರಿದಿದೆ.

* ರಾಜಸ್ಥಾನ್ ರಾಯಲ್ಸ್ 2008ರಿಂದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯವರೆಗೂ ಒಟ್ಟು 704.8 ಕೋಟಿ ರೂಪಾಯಿಗಳನ್ನು ಆಟಗಾರರ ಖರೀದಿಗಾಗಿ ಸುರಿದಿದೆ.

* ಲಕ್ನೋ ಸೂಪರ್ ಜೈಂಟ್ಸ್ 2022ರಿಂದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯವರೆಗೂ ಒಟ್ಟು 179.8 ಕೋಟಿ ರೂಪಾಯಿಗಳನ್ನು ಆಟಗಾರರ ಖರೀದಿಗಾಗಿ ಸುರಿದಿದೆ.

* ಗುಜರಾತ್ ಟೈಟನ್ಸ್ 2022ರಿಂದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯವರೆಗೂ ಒಟ್ಟು 174.3 ಕೋಟಿ ರೂಪಾಯಿಗಳನ್ನು ಆಟಗಾರರ ಖರೀದಿಗಾಗಿ ಸುರಿದಿದೆ.

Story first published: Thursday, May 25, 2023, 12:58 [IST]
Other articles published on May 25, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+