Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs LSG: ಫಾಫ್ ಡು ಪ್ಲೆಸಿಸ್ ಹೊಡೆತಕ್ಕೆ 115 ಮೀಟರ್ ದೂರ ಬಿದ್ದ ಚೆಂಡು!: ವಿಡಿಯೋ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿರುವ ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದೆ. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಲಕ್ನೋ ಸೂಪರ್‌ಜೈಂಟ್ಸ್ ತಂಡ ಬೌಲರ್‌ಗಳನ್ನು ಅಟ್ಟಾಡಿಸಿ ಬಾರಿಸಿದ್ದಾರೆ. ಅದರಲ್ಲೂ ಫಾಫ್ ಡು ಪ್ಲೆಸಿಸ್ ಬಾರಿಸಿದ ಚೆಂಡು ಕ್ರಿಕೆಟ್ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದೆ.

ಈ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದರು. ಒಂದೆಡೆ ವಿರಾಟ್ ಕೊಹ್ಲಿ ಅಬ್ಬರದ ಪ್ರದರ್ಶನ ನೀಡುತ್ತಿದ್ದರೆ ಅವರಿಗೆ ಕ್ರೀಸ್‌ ಬಿಟ್ಟುಕೊಡುತ್ತಾ ಬ್ಯಾಟಿಂಗ್ ನಡೆಸಿದ್ದರು. ಆದರೆ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡ ಬಳಿಕ ಫಾಫ್ ರನ್ ವೇಗವನ್ನು ಹೆಚ್ಚಿಸತೊಡಗಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಗೆ ಅಬ್ಬರದ ಪ್ರದರ್ಶನ ನೀಡಿದ ಫಾಫ್ ರನ್ ಮಳೆ ಹರಿಸಿದರು.

IPL 2023; RCB vs LSG: Faf du plessis hit bigget six of ipl 2023

ಈ ಪಂದ್ಯದಲ್ಲಿ ರವಿ ಬಿಷ್ಣೋಯ್ ಎಸೆದ 15ನೇ ಓವರ್‌ನಲ್ಲಿ ಫಾಫ್ ಡು ಪ್ಲಸಿಸ್ ಈ ಬಾರಿಯ ಐಪಿಎಲ್‌ನ ಅತಿ ದೊಡ್ಡ ಸಿಕ್ಸರ್ ಬಾರಿಸಿದ್ದಾರೆ. 14.3ನೇ ಓವರ್‌ನಲ್ಲಿ ಬಿಷ್ಣೋಯ್ ಬಾರಿಸಿದ ಎಸೆತವನ್ನು ಭರ್ಜರಿಯಾಗಿ ಬಾರಿಸಿದ ಫಾಫ್ ಡು ಪ್ಲೆಸಿಸ್ ಈ ಬೃಹತ್ ಸಿಕ್ಸರ್ ಆಗಿ ಪರಿವರ್ತಿಸಿದರು.

ಈ ಪಂದ್ಯದಲ್ಲಿ ಆರ್‌ಸಿಬಿ ಪರವಾಗಿ ಅಗ್ರ ಕ್ರಮಾಂಕದ ಮೂವರು ಆಟಗಾರರು ಕೂಡ ಸ್ಪೋಟಕ ಪ್ರದರ್ಶನ ನೀಡಿದ್ದು ಅರ್ಧ ಶತಕ ಸಿಡಿಸಿದ್ದಾರೆ. ಮೊದಲಿಗೆ ವಿರಾಟ್ ಕೊಹ್ಲಿ ಅಬ್ಬರದ ಪ್ರದರ್ಶನ ನೀಡಿದ್ದು 44 ಎಸೆತಗಳಲ್ಲಿ 61 ರನ್ ಬಾರಿಸಿ ಔಟಾದರು. ಈ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಬಾರಿಸಿದ್ದರು ಕೊಹ್ಲಿ.

ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ಸಿ), ಮಹಿಪಾಲ್ ಲೊಮ್ರೊರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆ),
ಅನುಜ್ ರಾವತ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್
ಬೆಂಚ್: ಕರ್ಣ್ ಶರ್ಮಾ, ಸುಯಶ್ ಪ್ರಭುದೇಸಾಯಿ, ಆಕಾಶ್ ದೀಪ್, ಮೈಕೆಲ್ ಬ್ರೇಸ್‌ವೆಲ್, ಸೋನು ಯಾದವ್, ಫಿನ್ ಅಲೆನ್, ಸಿದ್ದಾರ್ಥ್ ಕೌಲ್, ರಾಜನ್ ಕುಮಾರ್, ಅವಿನಾಶ್ ಸಿಂಗ್, ಹಿಮಾಂಶು ಶರ್ಮಾ, ಮನೋಜ್ ಭಾಂಡಗೆ

ಕೆಎಲ್ ರಾಹುಲ್ (ಸಿ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೋನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಾಕ್),
ಜಯದೇವ್ ಉನದ್ಕತ್, ಅಮಿತ್ ಮಿಶ್ರಾ, ಅವೇಶ್ ಖಾನ್, ಮಾರ್ಕ್ ವುಡ್, ರವಿ ಬಿಷ್ಣೋಯ್
ಬೆಂಚ್: ಆಯುಷ್ ಬಡೋನಿ, ಡೇನಿಯಲ್ ಸಾಮ್ಸ್, ಪ್ರೇರಕ್ ಮಂಕಡ್, ಸ್ವಪ್ನಿಲ್ ಸಿಂಗ್, ಕೃಷ್ಣಪ್ಪ ಗೌತಮ್, ರೊಮಾರಿಯೋ ಶೆಫರ್ಡ್, ಯಶ್ ಠಾಕೂರ್, ಕ್ವಿಂಟನ್ ಡಿ ಕಾಕ್, ನವೀನ್-ಉಲ್-ಹಕ್, ಮನನ್ ವೋಹ್ರಾ, ಯುಧ್ವೀರ್ ಸಿಂಗ್ ಚರಕ್, ಕರಣ್ ಶರ್ಮಾ, ಮಯಾಂಕ್ ಯಾದವ್

Story first published: Monday, April 10, 2023, 21:27 [IST]
Other articles published on Apr 10, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+