For Quick Alerts
ALLOW NOTIFICATIONS  
For Daily Alerts
 

IPL 2023: ಎಂಎಸ್ ಧೋನಿ, ರೋಹಿತ್ ಶರ್ಮಾ ಹೆಸರಿನಲ್ಲಿದ್ದ ದಾಖಲೆ ಮುರಿದ ರಿಂಕು ಸಿಂಗ್

ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಒಂದು ರನ್‌ಗಳ ಅಂತರದ ಸೋಲು ಅನುಭವಿಸುವ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ಲೇಆಫ್ ಕನಸು ಭಗ್ನವಾಗಿದೆ. ಆದರೆ ಈ ಪಂದ್ಯದಲ್ಲಿ ರಿಂಕು ಸಿಂಗ್ ಅವರ ಅಮೋಘ ಹೋರಾಟದ ಪ್ರದರ್ಶನ ಎಲ್ಲರ ಹೃದಯಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅಸಾಧಾರಣ ಹೋರಾಟ ಪ್ರದರ್ಶಿಸಿದ ರಿಂಕು ಸಿಂಗ್ ಕೊನೆಯ ಎಸೆತದವರೆಗೂ ಹೋರಾಟವನ್ನು ಮುಂದುವರಿಸಿದ್ದರು.

ಗೆಲ್ಲಲು ಅಸಾಧ್ಯ ಎಂಬಂಥಾ ಸ್ಥಿತಿಯಲ್ಲಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ರಿಂಕು ಸಿಂಗ್ ಏಕಾಂಗಿಯಾಗಿ ಬಹುತೇಕ ಗೆಲುವಿನ ಸನಿಹಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. ಕೊನೆಯ ಎರಡು ಓವರ್‌ಗಳಲ್ಲಿ ಎಲ್‌ಎಸ್‌ಜಿ ಬೌಲರ್‌ಗಳನ್ನು ಹಿಗ್ಗಾಮುಗ್ಗ ದಂಡಿಸಿ ಎಲ್‌ಎಸ್‌ಜಿ ಪಾಳಯಕ್ಕೆ ಆತಂಕ ಮೂಡಿಸಿದರಾದರೂ ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಲಿಲ್ಲ.

IPL 2023: Rinku Singh breaks MS Dhoni and Rohit Sharmas big record for sixes

ಈ ಪಂದ್ಯದಲ್ಲಿ ರಿಂಕು ಸಿಂಗ್ 33 ಎಸೆತಗಳಲ್ಲಿ ಅಜೇಯ 67 ರನ್‌ಗಳನ್ನು ಬಾರಿಸಿದ್ದು ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿದರು. ಇನ್ನು ಕೊನೆಯ ಎರಡು ಓವರ್‌ಗಳಲ್ಲಿ 41 ರನ್‌ಗಳ ಅಗತ್ಯವಿದ್ದಾಗ ರಿಂಕು 7 ಬೌಂಡರಿಗಳನ್ನು ಬಾರಿಸಿ ಎಂಎಸ್ ಧೋನಿ ಹಾಗೂ ರೋಹಿತ್ ಶರ್ಮಾ ಹೆಸರಿನಲ್ಲಿದ್ದ ಐಪಿಎಲ್‌ನ ದೊಡ್ಡ ದಾಖಲೆಯೊಂದನ್ನು ಮುರಿದಿದ್ದಾರೆ.

ರಿಂಕು ಸಿಂಗ್ ಈ ಬಾರಿಯ ಐಪಿಎಲ್‌ನಲ್ಲಿ ಒಟ್ಟು 29 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ 9 ಸಿಕ್ಸರ್‌ಗಳು ಕೊನೆಯ ಓವರ್‌ನಲ್ಲಿಯೇ ಬಂದಿದೆ. ಈ ಮೂಲಕ ನಾಲ್ವರು ಐಪಿಎಲ್ ದಿಗ್ಗಜರನ್ನು ರಿಂಕು ಸಿಂಗ್ ಹಿಂದಿಕ್ಕಿದ್ದು 10ನೇ ಓವರ್‌ನಲ್ಲಿ ಆಔಋತ್ತಿಯೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಚೆನ್ನೈ ಸುಪರ್ ಕಿಂಗ್ಸ ತಂಡದ ನಾಯಕ ಎಂಎಸ್ ಧೋನಿ ಎರಡು ಐಪಿಎಲ್ ಆವೃತ್ತಿಗಳಲ್ಲಿ 20ನೇ ಓವರ್‌ನಲ್ಲಿ 8 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ. 2014 ಹಾಗೂ 2019ರಲ್ಲಿ ಈ ಸಾಧನೆ ಮಾಡಿದ್ದರು. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ 2013ರ ಐಪಿಎಲ್‌ನಲ್ಲಿ 8 ಸಿಕ್ಸರ್‌ಗಳನ್ನು ಕೊನೆಯ ಓವರ್‌ನಲ್ಲಿ ಬಾರಿಸಿದ್ದರು.

ಐಪಿಎಲ್ ಆವೃತ್ತಿಯೊಂದರಲ್ಲಿ 20 ಓವರ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿ
9 - ರಿಂಕು ಸಿಂಗ್ (2023)
8 - ಡ್ವೇನ್ ಬ್ರಾವೋ (2012)
8 - ರೋಹಿತ್ ಶರ್ಮಾ (2013)
8 - ಎಂಎಸ್ ಧೋನಿ (2014)
8 - ಎಂಎಸ್ ಧೋನಿ (2019)
8 - ಹಾರ್ದಿಕ್ ಪಾಂಡ್ಯ (2019)

ರಿಂಕು ಸಿಂಗ್ ಈ ಬಾರಿಯ ಐಪಿಎಲ್ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಅತ್ಯಂತ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. 14 ಇನ್ನಿಂಗ್ಸ್‌ಗಳಲ್ಲಿ 59.25 ಸರಾಸರಿಯಲ್ಲಿ 474 ರನ್‌ಗಳನ್ನು ಬಾರಿಸಿರುವ ಅವರು ನಾಲ್ಕು ಅರ್ಧಶತಕಗಳನ್ನು ಸಿಡಿಸಿದ್ದಾರೆ. 149.52ರ ಸ್ಟ್ರೈಕ್ ರೇಟ್‌ನಲ್ಲಿ ಅವರು ಬ್ಯಾಟಿಂಗ್ ನಡೆಸಿದ್ದಾರೆ. ಇನ್ನು ರಿಂಕು ಸಿಂಗ್ ಅವರ ದಾಖಲ ರನ್ ಬೆನ್ನಟ್ಟುವಾಗಿ ಮತ್ತಷ್ಟು ಉತ್ತಮವಾಗಿದೆ. 7 ಇನ್ನಿಂಗ್ಸ್‌ಗಳಿಂದ 152.50 ಸರಾಸರಿಯಲ್ಲಿ 174.28 ಸ್ಟ್ರೈಕ್ ರೇಟ್‌ನೊಂದಿಗೆ 305 ರನ್ ಗಳಿಸಿದ್ದಾರೆ. ಗಮನಾರ್ಹ ಸಂಗತಿಯೆಂದರೆ ರಿಂಕು ಅವರ ಎಲ್ಲಾ ನಾಲ್ಕು ಅರ್ಧಶತಕಗಳು ಕೂಡ ರನ್ ಬೆನ್ನಟ್ಟುವ ಸಂದರ್ಭದಲ್ಲಿಯೇ ಬಂದಿದೆ.

Story first published: Sunday, May 21, 2023, 14:19 [IST]
Other articles published on May 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+