IPL 2023: 15 ದಿನಗಳಲ್ಲಿ ಬರಲಿದೆ ಐಪಿಎಲ್‌ನ ಎರಡು ದೊಡ್ಡ ಘೋಷಣೆಗಳು

ಒಂದು ಕಡೆ ಟೀಂ ಇಂಡಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಸಿದ್ಧವಾಗುತ್ತಿದ್ದರೆ. ಐಪಿಎಲ್ ಫ್ರಾಂಚೈಸಿಗಳು ಮಾತ್ರ 2023ರ ಆವೃತ್ತಿಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿವೆ. ಮುಂದಿನ 15 ದಿನಗಳಲ್ಲಿ ಐಪಿಎಲ್ 2023ರ ಎರಡು ಪ್ರಮುಖ ಘೋಷಣೆಗಳಾಗಲಿದೆ.
ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಷಬ್ ಪಂತ್‌ಗೆ ಬದಲೀ ಆಟಗಾರನ ಹೆಸರನ್ನು ಘೋಷಿಸಲು ಡೆಲ್ಲಿ ಕ್ಯಾಪಿಟಲ್ಸ್ ತಂಡ ಯೋಜನೆ ನಡೆಸುತ್ತಿದೆ. ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು ಮತ್ತು ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸುತ್ತಿದ್ದರು.
2023ರ ಐಪಿಎಲ್‌ನಿಂದ ರಿಷಬ್ ಪಂತ್ ಹೊರಗುಳಿದಿರುವ ಕಾರಣ ಅವರ ತಂಡದ ನಾಯಕತ್ವ ಯಾರಿಗೆ ವಹಿಸುತ್ತಾರೆ ಎನ್ನುವುದು ಸದ್ಯದ ಕುತೂಹಲಕಾರಿ ಸಂಗತಿಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸದ್ಯ ವಿಕೆಟ್ ಕೀಪರ್ ಮತ್ತು ನಾಯಕನ ಅಗತ್ಯವಿದೆ.
2023ರ ಐಪಿಎಲ್ ಮಿನಿ ಹರಾಜಿಗೆ ಮುನ್ನ ಕೆ.ಎಸ್. ಭರತ್‌ರನ್ನು ಬಿಡುಗಡೆ ಮಾಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಈಗ ಸಂಕಷ್ಟಕ್ಕೆ ಸಿಲುಕಿದೆ. ಸದ್ಯ ತಂಡದಲ್ಲಿ ಫಿಲ್ ಸಾಲ್ಟ್ ಮತ್ತು ಸರ್ಫರಾಜ್ ಖಾನ್ ಇಬ್ಬರೇ ವಿಕೆಟ್ ಕೀಪರ್ ಆಗಿದ್ದಾರೆ. ಅವರೂ ಕೂಡ ಅರೆಕಾಲಿಕ ವಿಕೆಟ್ ಕೀಪರ್ ಆಗಿರುವುದು ತಂಡಕ್ಕೆ ಸಮಸ್ಯೆಯಾಗಿದೆ.

ಪಂತ್ ಸ್ಥಾನಕ್ಕೆ ಯಾರಿಗೆ ಅವಕಾಶ
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಂದಿನ ನಾಯಕನಾಗಲು ಇಬ್ಬರ ನಡುವೆ ಪೈಪೋಟಿ ನಡೆಯುತ್ತಿದೆ. ಡೇವಿಡ್ ವಾರ್ನರ್ ಮತ್ತು ಮನೀಶ್ ಪಾಂಡೆ ನಾಯಕತ್ವದ ರೇಸ್‌ನಲ್ಲಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಒಂದು ಬಾರಿ ಕಪ್ ಗೆದ್ದಿರುವ ವಾರ್ನರ್ ಸದ್ಯ ಮೊದಲ ಆಯ್ಕೆಯಾಗಿದ್ದಾರೆ.
ವಾರ್ನರ್ ಜೊತೆ ನಾಯಕತ್ವದ ಬಗ್ಗೆ ಚರ್ಚೆ ನಡೆಸಿದ ಬಳಿಕ ಘೋಷಣೆ ಮಾಡಲು ನಿರ್ಧರಿಸಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕ, ಸೌರವ್ ಗಂಗೂಲಿ ಮತ್ತು ಮುಖ್ಯ ಕೋಚ್ ರಿಕಿ ಪಾಂಟಿಂಗ್ ನಾಯಕನ ಆಯ್ಕೆ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಮಾಡಲಿದ್ದು, ಮುಂದಿನ ಎರಡು ವಾರದೊಳಗೆ ಘೋಷಣೆಯಾಗುವ ಸಾಧ್ಯತೆ ಇದೆ.

ಎಸ್‌ಆರ್ ಹೆಚ್ ತಂಡಕ್ಕೆ ನಾಯಕನ ಘೋಷಣೆ
ಐಪಿಎಲ್ 2023ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮಾತ್ರ ಇನ್ನೂ ನಾಯಕ ಯಾರು ಎನ್ನುವುದನ್ನು ಘೋಷಿಸಿಲ್ಲ. ಪಂತ್ ಅಪಘಾತದಿಂದ ಈ ಬಾರಿ ಆಡುತ್ತಿಲ್ಲವಾದ್ದರಿಂದ ಬೇರೆ ನಾಯಕನ ಆಯ್ಕೆ ಡೆಲ್ಲಿ ತಂಡಕ್ಕೆ ಅನಿವಾರ್ಯ.
ಆದರೆ, ಸನ್‌ರೈಸರ್ಸ್ ಹೈದರಾಬಾದ್ 2023ರ ಮಿನಿ ಹರಾಜಿಗೆ ಮುನ್ನ ತಮ್ಮ ತಂಡದ ನಾಯಕ ಕೇನ್ ವಿಲಿಯಮ್ಸ್‌ನ್‌ರನ್ನು ಕೈಬಿಟ್ಟಿತ್ತು. ಈಗ ಹೊಸ ನಾಯಕನ ನೇಮಕಕ್ಕೆ ಮುಂದಾಗಿದೆ. ಏಡೆನ್ ಮಾರ್ಕ್ರಾಮ್ ಮತ್ತು ಮಯಾಂಕ್ ಅಗರ್ವಾಲ್ ನಾಯಕತ್ವದ ರೇಸನಲ್ಲಿದ್ದರೂ, ಏಡೆನ್ ಮಾರ್ಕ್ರಾಮ್‌ಗೆ ಮಣೆಹಾಕುವ ಸಾಧ್ಯತೆ ಹೆಚ್ಚಾಗಿದೆ.

ಐಪಿಎಲ್ ಯಾವಾಗ ಶುರು?
ಇಂಡಿಯನ್ ಪ್ರೀಮಿಯರ್ ಲೀಗ್ 2023ರಕ್ಕೆ ಏಪ್ರಿಲ್ ಮೊದಲವಾರ ಚಾಲನೆ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಮೂಲಗಳ ಪ್ರಕಾರ ಏಪ್ರಿಲ್ 1ರಂದು ಪಂದ್ಯಾವಳಿಗೆ ಅದ್ಧೂರಿ ಚಾಲನೆ ಸಿಗಲಿದೆ. ಮೇ ಅಂತ್ಯದ ವೇಳೆಗೆ ಟೂರ್ನಿಯನ್ನು ಮುಗಿಸಲು ಬಿಸಿಸಿಐ ನಿರ್ಧರಿಸಿದೆ.
ಜೂನ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಇರುವುದರಿಂದ ಮೇ ಅಂತ್ಯದ ವೇಳೆಗೆ ಟೂರ್ನಿಗೆ ತೆರೆ ಎಳೆಯುವ ಉದ್ದೇಶ ಹೊಂದಿದೆ. ಈ ಬಾರಿ ಐಪಿಎಲ್ ಹಳೆಯ ಮಾದರಿಗೆ ಮರಳಿಗೆ, ಎಲ್ಲಾ ತಂಡಗಳು ತವರಿನಲ್ಲಿ ಮತ್ತು ಹೊರಗಡೆ ಪಂದ್ಯಗಳನ್ನು ಆಡಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications