Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಪ್ಲೇಆಫ್‌ಗೆ ನಾವು ಪ್ರವೇಶ ಪಡೆಯುತ್ತೇವೆ: ಲಕ್ನೋ ವಿರುದ್ಧ ಸೋತರೂ MI ನಾಯಕ ರೋಹಿತ್ ವಿಶ್ವಾಸ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಅಮೋಘ ಪ್ರದರ್ಶನ ನೀಡಿ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಕೊನೆಯ ಹಂತದಲ್ಲಿ ಬಹಳ ನಿರ್ಣಾಯಕವಾಗಿದ್ದ ಎರಡು ಅಂಕಗಳು ಎಲ್‌ಎಸ್‌ಜಿ ಪಾಲಾಗಿದೆ. ಈ ಸೋಲಿನಿಂದಾಗು ಮುಂಬೈ ಇಮಡಿಯನ್ಸ್ ತಂಡದ ಸ್ಥಿತಿ ಮತ್ತಷ್ಟು ಕಠಿಣವಾಗಿದ್ದು ಪ್ಲೇಆಫ್‌ಗೇರುವ ಅವಕಾಶ ಕ್ಷೀಣಿಸಿದೆ.

ಆದರೆ ಈ ಸೋಲಿನ ಬಳೀಕ ಮಾತನಾಡಿರುವ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಪ್ಲೇಆಫ್‌ಗೇರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನೀಡಿದ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಅದ್ಭುತ ಆರಂಭ ದೊರೆತರು ಕೂಡ ಕೊನೆಯ ಹಂತದಲ್ಲಿ ಎಂಐ ಎಡವಿದ್ದು ಸೋಲಿಗೆ ಕಾರಣವಾಯಿತು.

MumbaiIndians

"ನಾವು ಕೇವಲ ಪಂದ್ಯವನ್ನು ಮಾತ್ರವ ಸೋತಿದ್ದೇವೆ. ಇದನ್ನು ಹೇಳಲು ನಾನು ನಾಯಸುತ್ತೇನೆ. ಈ ಪಂದ್ಯದಲ್ಲಿ ಕೆಲ ಸಣ್ಣ ಸಣ್ಣ ಕ್ಷಣಗಣನ್ನು ಗೆಲ್ಲುವುದರಲ್ಲಿ ನಾವು ಸೋತೆವು. ಅಂತಿಮವಾಗಿ ಇದು ಬಹಳ ದುರದೃಷ್ಟಕರ ಸಂಗತಿ. ಈ ಸಂದರ್ಭದಲ್ಲಿಯೂ ನಾವು ತಲೆ ತಗ್ಗಿಸದೆ ಮುನ್ನುಗ್ಗಬೇಕು" ಎಂದಿದ್ದಾರೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ.

ಇನ್ನು ಈ ಪಂದ್ಯದಲ್ಲಿ ಡೆತ್ ಓವರ್‌ನಲ್ಲಿ ಅನುಭವಿಸಿದ ಹಿನ್ನಡೆಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಬೇಸರ ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ಕೊನೆಯ ಐದು ಓವರ್‌ಗಳಲ್ಲು ಮುಂಬೈ ಇಂಡಿಯನ್ಸ್ ತಂಡ ಎದುರಾಳಿಗೆ ಭರ್ಜರಿ 69 ರನ್‌ಗಳನ್ನು ಬಿಟ್ಟುಕೊಟ್ಟಿತು. ಅದರಲ್ಲೂ 54 ರನ್‌ಗಳು ಕೊನೆಯ ಮೂರು ಓವರ್‌ಗಳಲ್ಲಿ ಎಲ್‌ಎಸ್‌ಜಿ ತಂಡಕ್ಕೆ ಹರಿದುಬಂದಿತು. ಕ್ರಿಸ್ ಜೋರ್ಡನ್ ಎಸೆದ 18ನೇ ಓವರ್‌ನಲ್ಲಿ 18 ರನ್‌ ಕಸಿದಿದ್ದರು ಮಾರ್ಕಸ್ ಸ್ಟೋಯ್ನಿಸ್.

"ನಾವು ಪಿಚ್ಚನ್ನು ಉತ್ತಮವಾಗಿಯೇ ಅರ್ಥ ಮಾಡಿಕೊಂಡಿದ್ದೆವು. ಇದು ನಿಜಕ್ಕೂ ಉತ್ತಮವಾದ ಪಿಚ್. ಈ ಹಿಂದಿನ ಪಂದ್ಯಗಳಲ್ಲಿ ನೋಡಿದ ಪಿಚ್ ಇದಾಗಿರಲಿಲ್ಲ. ಬ್ಯಾಟಿಂಗ್‌ಗೆ ಉತ್ತಮವಾಗಿ ನೆರವು ನೀಡುವಂತಾ ಪಿಚ್ ಇದು. ನಾವು ಕೊನೆಯ ಹಂತದಕಲ್ಲಿಯೇ ಇಲ್ಲಿ ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಟ್ಟೆವು" ಎಂದು ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.

"ಪಂದ್ಯ ಕೊನೆಯ ಕೆಲ ಓವರ್‌ಗಳನ್ನು ನಾವು ಸೋಲು ಕಂಡೆವು. ಇದು ಗೆಲ್ಲಬಹುದಾಗಿದ್ದ ಸ್ಕೋರ್ ಆಗಿತ್ತು. ಆದರೆ ದ್ವಿತಿಯಾರ್ಧದಲ್ಲಿ ನಾವು ಪಂದ್ಯವನ್ನು ಕಳೆದುಕೊಂಡೆವು" ಎಂದು ರೋಹಿತ್ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಮುಂದುವರಿದು ರೋಹಿತ್ "ಹೇಗೆಲ್ಲಾ ಲೆಕ್ಕಾಚಾರಗಳು ನಡೆಯುತ್ತವೆ ಎಂಬುದು ಗೊತ್ತಿಲ್ಲ. ಆದರೆ ಮುಂದಿನ ಪಂದ್ಯವನ್ನು ಗೆದ್ದು ನಾವು ಪ್ಲೇಆಫ್‌ಗೇರುವ ವಿಶ್ವಾಸವಿದೆ" ಎಂದಿದ್ದಾರೆ.

13 ಪಂದ್ಯಗಳನ್ನು ಆಡಿರುವ ಮುಂಬೈ ಇಮಡಿಯನ್ಸ್ ತಂಡ 14 ಅಂಕಗಳನ್ನು ಹೊಂದಿದ್ದು ಅಂಕಪಟ್ಟಿಯಲ್ಲಿ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಮುಂಬೈ ಇಂಡಿಯನ್ಸ್‌ಗೆ ಇನ್ನು ಕೇವಲ ಒಂದು ಪಂದ್ಯ ಮಾತ್ರವೇ ಬಾಕಿಯಿರುವ ಕಾರಣ ಈ ಸ್ಥಾದಲ್ಲಿ ಮುಂದುವರಿಯುವುದು ಬಹಳ ಕಠಿಣವಾಗಿರಲಿದೆ.

Story first published: Wednesday, May 17, 2023, 9:11 [IST]
Other articles published on May 17, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+