Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023: ಹ್ಯಾಟ್ರಿಕ್ ಸೋಲು ಅನುಭವಿಸಿದ ಆರ್‌ಸಿಬಿ; ಗುಜರಾತ್ ಜೈಂಟ್ಸ್‌ಗೆ ಮೊದಲ ಗೆಲುವು

IPL 2023: Royal Challengers bangalore lost match to Gujarat Giants by 11 runs

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿನ ಸರಪಳಿ ಮುಂದುವರಿದಿದೆ. ಸತತ ಮೂರನೇ ಪಂದ್ಯದಲ್ಲಿಯೂ ರಾಯಲ್ ಚಾಲೆಂಜರ್ಸ್ ಬೆಂಗಳುರು ತಂಡ ಗೆಲುವು ಸಾಧಿಸಲು ವಿಫಲವಾಗಿದ್ದು ಆಘಾತ ಅನುಭವಿಸಿದೆ. ಗುಜರಾತ್ ಜೈಂಟ್ಸ್ ತಂಡ ವುಮೆನ್ಸ್ ಪ್ರೀಮಿಯರ್ ಲೀಗ್‌ನ ಮೊದಲ ಗೆಲುವು ಸಾಧಿಸಿ ಸಂಭ್ರಮಿಸಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿದ ಗುಜರಾತ್ ಜೈಂಟ್ಸ್ ಉತ್ತಮ ಪ್ರದರ್ಶನ ನೀಡಿತು. ಆರಂಭಿಕ ಆಟಗಾರ್ತಿ ಸೋಫಿಯಾ ಡಂಕ್ಲೆ ಸ್ಪೋಟಕ ಪ್ರದರ್ಶನ ನೀಡಿದ್ದು ಕೇವಲ 28 ಎಸೆತಗಳಲ್ಲಿ 65 ರನ್ ಬಾರಿಸಿ ಅಬ್ಬರಿಸಿದರು. ಹರ್ಲೀನ್ ಡಿಯೋಲ್ ಕೂಡ ಅದ್ಭುತ ಪ್ರದರ್ಶನ ನೀಡಿದ್ದು 45 ಎಸೆತಗಳಲ್ಲಿ 67 ರನ್‌ ಬಾರಿಸಿದ್ದಾರೆ. ಉಳಿದಂತೆ ಗಾರ್ಡ್ನರ್ 15 ಎಸೆತಗಳಲ್ಲಿ 19 ರನ್ ಬಾರಿಸಿದರೆ ಹೇಮಲತಾ 7 ಎಸೆತಗಳಲ್ಲಿ 16 ರನ್ ಬಾರಿಸಿದರು. ಸದರ್ಲ್ಯಾಂಡ್ ಕೂಡ 8 ಎಸೆತಗಳಲ್ಲಿ 14 ರನ್ ಬಾರಿಸಿದ್ದಾರೆ. ಹೀಗಾಗಿ ಗುಜರಾತ್ ಜೈಂಟ್ಸ್ ತಂಡ ಈ ಪಂದ್ಯದಲ್ಲಿ ಆರ್‌ಸಿಬಿ ಬೃಹತ್ ಗುರಿ ನಿಗದಿಪಡಿಸಿತು.

ಈ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಆರ್‌ಸಿಬಿ ತಂಡಕ್ಕೆ ಮತ್ತೊಂದು ಉತ್ತಮ ಆರಂಬ ದೊರೆಯಿತು. ಅದರಲ್ಲೂ ಸೋಫಿ ಡಿವೈನ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಅಬ್ಬರಿಸಿದರು. ಆದರೆ ನಾಯಕಿ ಸ್ಮೃತಿ ಮಂಧಾನ 14 ಎಸೆತಗಳಲ್ಲಿ 18 ರನ್ ಬಾರಿಸಿ ವಿಕೆಟ್ ಕಳೆದುಕೊಳ್ಳುವ ಮೂಲಕ ಮತ್ತೊಮ್ಮೆ ನಿರಾಸೆ ಅನುಭವಿಸಿದ್ದಾರೆ. ಬಳಿಕ ಎಲೀಸ್ ಪೆರ್ರಿ ಜೊತೆಗೆ ಸೋಫಿ ಇನ್ನಿಂಗ್ಸ್ ಬೆಳೆಸಿದರು. ಪೆರ್ರಿ 25 ಎಸೆತಗಳಲ್ಲಿ 32 ರನ್ ಬಾರಿಸಿ ವಿಕೆಟ್ ಕಳೆದಿಕೊಂಡರು. ''

ಬಳಿಕ ಬಂದ ರಿಚಾ ಘೋಷ್ ಕೂಡ ವೈಫಲ್ಯ ಅನುಭವಿಸಿದರು. 10 ಎಸೆತಗಳಲ್ಲಿ 10 ರನ್‌ಗಳಿಸಿ ರಿಚಾ ವಿಕೆಟ್ ಕಳೆದುಕೊಂಡರು. ಈ ಸಂದರ್ಭದಲ್ಲಿ 45 ಎಸೆಗಳಲ್ಲಿ 66 ರನ್‌ಗಳಿಸಿದ್ದ ಸೋಫಿ ಡಿವೈನ್ ಕೂಡ ವಿಕೆಟ್ ಕಳೆದುಕೊಂಡರು. ನಂತರ ಬಂದ ಕನಿಕಾ ಅಹುಜಾ ಹಾಗೂ ಪೂನಮ್ ಕೇಮ್ನರ್ ಕೂಡ ವೈಫಲ್ಯ ಕಂಡರು. ಆದರೆ ಹೀದರ್ ನೈಟ್ ಕೊನೆಯ ಹಂತದವರೆಗೂ ಹೋರಾಟದ ಪ್ರದರ್ಶನ ನೀಡಿ ಗೆಲುವಿನ ಆಸೆ ಉಳಿಸಿದ್ದರು. ಆದರೆ ಗೆಲುವು ದಕ್ಕಿಸಲು ಸಾಧ್ಯವಾಗಲಿಲ್ಲ.

ಇನ್ನು ಈ ಪಂದ್ಯದಲ್ಲಿಯೂ ಕನ್ನಡತಿ ಶ್ರೇಯಾಂಕ ಪಾಟೀಲ್ ನೀಡಿರುವ ಪ್ರದರ್ಶನ ಸೋಲಿನಲ್ಲೂ ಆರ್‌ಸಿಬಿ ಅಭಿಮಾನಿಗಳಿಗೆ ಭರವಸೆ ಮೂಡಿಸಿದೆ. ಮೊದಲಿಗೆ ಬೌಲಿಂಗ್‌ನಲ್ಲಿ 2 ವಿಕೆಟ್ ಪಡೆದು ಮಿಂಚಿದ್ದ ಶ್ರೇಯಾಂಕ, ಬ್ಯಾಟಿಂಗ್‌ನಲ್ಲಿ ಅಂತಿಮ ಹಂತದ ಒತ್ತಡದಲ್ಲಿಯೂ 4 ಎಸೆತಗಳಲ್ಲಿ 11 ರನ್ ಬಾರಿಸಿ ಗಮನಸೆಳೆದಿದ್ದಾರೆ. ಕಳೆದ ಪಂದ್ಯದಲ್ಲಿಯೂ ಶ್ರೇಯಾಂಕ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರು.

ಇನ್ನು ಈ ಸೋಲಿನೊಂದಿಗೆ ಆರ್‌ಸಿಬಿ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಶುಕ್ರವಾರ ಆರ್‌ಸಿಬಿ ನಾಲ್ಕನೇ ಪಂದ್ಯವನ್ನಾಡಲಿದ್ದು ಆ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಆರ್‌ಸಿಬಿ ತಂಡಕ್ಕೆ ಸವಾಲೊಡ್ಡಲಿದೆ.

ಗುಜರಾತ್ ಜೈಂಟ್ಸ್ ಆಡುವ ಬಳಗ: ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಹರ್ಲೀನ್ ಡಿಯೋಲ್, ಅನ್ನಾಬೆಲ್ ಸದರ್ಲ್ಯಾಂಡ್, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಆಶ್ಲೀ ಗಾರ್ಡ್ನರ್, ದಯಾಲನ್ ಹೇಮಲತಾ, ಸ್ನೇಹ ರಾಣಾ(ನಾಯಕಿ), ಕಿಮ್ ಗಾರ್ತ್, ಮಾನ್ಸಿ ಜೋಶಿ, ತನುಜಾ ಕನ್ವರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ(ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್(ವಿಕೆಟ್ ಕೀಪರ್), ಪೂನಂ ಖೇಮ್ನಾರ್, ಕನಿಕಾ ಅಹುಜಾ, ಶ್ರೇಯಾಂಕಾ ಪಾಟೀಲ್, ಮೇಗನ್ ಶುಟ್, ರೇಣುಕಾ ಠಾಕೂರ್ ಸಿಂಗ್, ಪ್ರೀತಿ ಬೋಸ್

Story first published: Wednesday, March 8, 2023, 23:26 [IST]
Other articles published on Mar 8, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+