Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CSK vs RR: ಈ ಬೌಲರ್‌ನನ್ನು ಎದುರಿಸುವುದು ಬಹಳ ಕಠಿಣ ಎಂದ ಜೋಸ್ ಬಟ್ಲರ್

ಐಪಿಎಲ್‌ನಲ್ಲಿ ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದು ರೋಚಕವಾಗಿ ಅಂತ್ಯವಾಗಿದೆ. ಕೊನೆಯ ಎಸೆತದವರೆಗೂ ಸಾಗಿದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಸಿಎಸ್‌ಕೆ ನಾಯಕ ಎಂಎಸ್ ಧೋನಿ ಅಂತಿಮ ಹಂತದಲ್ಲಿ ಅಂಓಘ ಹೋರಾಟ ಪ್ರದರ್ಶಿಸಿದರು ಕೂಡ ಈ ಪಂದ್ಯದಲ್ಲಿ ಚೆನ್ನೈಗೆ ಗೆಲುವು ಸಾಧ್ಯವಾಗಲಿಲ್ಲ.

ಇನ್ನು ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಬ್ಯಾಟಿಂಗ್‌ನಲ್ಲಿ ಮತ್ತೊಮ್ಮೆ ಮಿಂಚಿದ್ದು ಆರಂಬಿಕ ಆಟಗಾರ ಜೋಸ್ ಬಟ್ಲರ್. ಈ ಪಂದ್ಯದಲ್ಲಿಯೂ ಬಟ್ಲರ್ ಅರ್ಧ ಶತಕವನ್ನು ಸಿಡಿಸಿದ್ದು ಟೂರ್ನಿಯಲ್ಲಿ ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದ್ದಾರೆ. ಆರಂಬಿಕನಾಗಿ ಕಣಕ್ಕಿಳಿದು 36 ಎಸೆತಗಳನ್ನು ಎದುರಿಸಿದ ಜೋಸ್ ಬಟ್ಲರ್ 52 ರನ್‌ಗಳನ್ನು ಗಳಿಸಿದ್ದಾರೆ.

IPL 2023: RR opener Jos Buttler said Hard to play against Ravindra Jadeja

ಈ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಬಳಿಕ ಮಾತನಾಡಿದ ಜೋಸ್ ಬಟ್ಲರ್ ಸಿಎಸ್‌ಕೆ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಬಗ್ಗೆ ವಿಶೇಷ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. "ಜಡೇಜಾ ಅದ್ಭುತವಾಗಿ ಬೌಲಿಂಗ್ ಮಾಡಿದ್ದುಯ ಅವರನ್ನು ಎದುರಿಸುವುದು ಬಹಳ ಕಠಿಣ. ಅವರು ಬಹಳ ವೇಗವಾಗಿ ಬೌಲಿಂಗ್ ಎಸೆಯುವುದಲ್ಲದೆ ಸ್ಪಿನ್ ಕೂಡ ಮಾಡುತ್ತಾರೆ. ಹಾಗಾಗಿ ಅವರನ್ನು ಎದುರಿಸುವುದು ಸುಲಭವಿಲ್ಲ" ಎಂದಿದ್ದಾರೆ ಜೋಸ್ ಬಟ್ಲರ್.

ಈ ಪಂದ್ಯದಲ್ಲಿ ಜೋಸ್ ಬಟ್ಲರ್ ಭರ್ಜರಿ ಪ್ರದರ್ಶನ ನೀಡುವುದರ ಜೊತೆಗೆ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ದಾಟಿದ್ದಾರೆ. ಇಂಗ್ಲೆಂಡ್ ಮೂಲದ ಈ ಆಟಗಾರ ಐಪಿಎಲ್‌ನಲ್ಲಿ 3000 ರನ್‌ಗಳ ಮೈಲಿಗಲ್ಲಿ ದಾಟಿದ್ದಾರೆ. ಐಪಿಎಲ್‌ನಲ್ಲಿ ಈ ಸಾಧನೆಯನ್ನು ಅತ್ಯಂತ ವೇಗವಾಗಿ ಮಾಡಿದ 3ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಬಟ್ಲರ್ ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಧನೆಯನ್ನು ಅತ್ಯಂತ ವೇಗವಾಗಿ ಮಾಡಿದ ಆಟಗಾರರ ಪಟ್ಟಿಯಲ್ಲಿ ಕೆಎಲ್ ರಾಹುಲ್ ಮೊದಲ ಸ್ಥಾನದಲ್ಲಿದ್ದರೆ ಕ್ರಿಸ್ ಗೇಲ್ ಎರಡನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರು ಕ್ರಮವಾಗಿ 75 ಹಾಗೂ 80ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು.

ಐಪಿಎಲ್‌ನಲ್ಲಿ ಸಾಕಷ್ಟು ವಿದೇಶಿ ಆಟಗಾರರು ಆಡುತ್ತಿದ್ದು ಕೇವಲ 7 ಮಂದಿ ಮಾತ್ರವೇ 3000ಕ್ಕೂ ಅಧಿಕ ರನ್‌ಗಳಿಸಿದ ಸಾಧನೆ ಮಾಡಿದ್ದಾರೆ. ಡೇವಿಡ್ ವಾರ್ನರ್, ಎವಿ ಡಿವಿಲಿಯರ್ಸ್, ಕ್ರಿಸ್ ಗೇಲ್, ಶೇನ್ ವಾಟ್ಸನ್, ಫಾಫ್ ಡು ಪ್ಲೆಸಿಸ್ ಮತ್ತು ಕಿರಾನ್ ಪೊಲಾರ್ಡ್ ಇದ್ದ ಈ ಪಟ್ಟಿಗೆ ಈಗ ಜೋಸ್ ಬಟ್ಲರ್ ಕೂಡ ಸೇರ್ಪಡೆಯಾಗಿದ್ದಾರೆ.

2022ರ ಐಪಿಎಲ್ ಆವೃತ್ತಿಯಲ್ಲಿ ಜೋಸ್ ಬಟ್ಲರ್ 17 ಪಂದ್ಯಗಳನ್ನು ಆಡಿದ್ದು 863 ರನ್‌ಗಳನ್ನು ಗಳಿಸಿದ್ದರು. ಈ ಮೂಲಕ ದೊಡ್ಡ ರನ್‌ಗಳ ಅಂತರದಿಂದ ಬಟ್ಲರ್ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಇದೀಗ ಈ ಬಾರಿಯ ಆವೃತ್ತಿಯಲ್ಲಿಯೂ ಬಟ್ಲರ್ ಅದೇ ಮಾದರಿಯಲ್ಲಿ ರನ್‌ಗಳನ್ನು ಗಳಿಸುತ್ತಿದ್ದು ನಾಲ್ಕು ಪಂದ್ಯಗಳಲ್ಲಿ 3ನೇ ಅರ್ಧ ಶತಕ ಸಿಡಿಸಿದ್ದಾರೆ.

Story first published: Wednesday, April 12, 2023, 23:44 [IST]
Other articles published on Apr 12, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+