RR vs LSG: ರಾಜಸ್ಥಾನ್ ರಾಯಲ್ಸ್‌ಗೆ ಆಘಾತಕಾರಿ ಸೋಲು: ಅಗ್ರಸ್ಥಾನಕ್ಕೇರಿದ ರಾಹುಲ್ ಪಡೆ
ಇಂಡಿಯನ್ ಪ್ರೀಮಿಯರ್ ಲೀಗ್‌ನ 26ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ ರೋಚಕ ಗೆಲುವು ಸಾಧಿಸಿದೆ. ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದ ಸವಾಲಿನ ಪಿಚ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನೀಡಿದ ಸವಾಲನ್ನು ಬೆನ್ನಟ್ಟುವ ಸಂದರ್ಭದಲ್ಲಿ ಆರಂಭದಲ್ಲಿ ಅದ್ಭುತ ಪ್ರದರ್ಶನ ನಿಡಿದ್ದರೂ ಮಧ್ಯಮ ಕ್ರಮಾಂಕದ ಆಟಗಾರರಿಂದ ಉತ್ತಮ ಪ್ರದರ್ಶಣ ಬಾರದ ಕಾರಣ ಲಕ್ನೋ ಸೂಪರ್ ಜೈಂಟ್ಸ್ ಸೋಲು ಅನುಭವಿಸಿದೆ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 154 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಇದನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಆರಂಭದಲ್ಲಿ 87 ರನ್‌ಗಳ ಅದ್ಭುತ ಜೊತೆಯಾಟ ಪಡೆದುಕೊಂಡಿತು. ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಜೋಡಿ ದೊಡ್ಡ ಜೊತೆಯಾಟ ನೀಡಿದರಾದರೂ ರನ್ ವೇಗ ಕುಂಟಿತವಾಗಿತ್ತು. ಜೈಸ್ವಾಲ್ 35 ಎಸೆತಗಳಲ್ಲಿ 44ರನ್‌ಗಳಿಸಿದ್ದರೆ ಜೋಸ್ ಬಟ್ಲರ್ 41 ಎಸೆತಗಳಲ್ಲಿ 40 ರನ್‌ಗಳಿಸಿದರು.

ಇನ್ನು ನಾಯಕ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿ ವಿಫಲವಾಗಿದ್ದು ತಂಡಕ್ಕೆ ಮತ್ತೊಂದು ಹಿನ್ನಡೆಯಾಯಿತು. ಸಂಜು ಕೇವಲ 2 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ದೇವದತ್ ಪಡಿಕ್ಕಲ್ ಬ್ಯಾಟ್‌ನಿಂದ 26 ರನ್ ಹರಿದು ಬಂದಿತು. ಆದರೆ ಶಿಮ್ರಾನ್ ಹೇಟ್ಮೇಯರ್ ಕೂಡ ಈ ಪಂದ್ಯದಲ್ಲಿ 2 ರನ್‌ಗಳಿಗೆ ಔಟಾದರು. ಅಂರಿಮವಾಗಿ ರಿಯಾನ್ ಪರಾಗ್ ಧೃವ್ ಜೋರೆಲ್ ಮಿಂಚಲು ವಿಫಲವಾದರು. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ 144 ರನ್‌ಗಳಿಗೆ ಆಲೌಟ್ ಆಗುವ ಮೂಲಕ 10 ರನ್‌ಗಳ ಅಂತರದ ಸೋಲು ಅನುಭವಿಸಿದೆ ಸಂಜು ಸ್ಯಾಮ್ಸನ್ ಪಡೆ.
ಇನ್ನು ಇದಕ್ಕೂ ಮುನ್ನ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಎಲ್‌ಎಸ್‌ಜಿ ತಂಡ ಮೊದಲ ವಿಕೆಟ್‌ಗೆ 82 ರನ್‌ಗಳ ಆರಂಭಿಕ ಜೊತೆಯಾಟವನ್ನು ಪಡೆದುಕೊಂಡಿತಾದರೂ ರನ್ ವೇಗ ನಿಧಾನವಾಗಿತ್ತು. ನಾಯಕ ಕೆಎಲ್ ರಾಹುಲ್ ಮತ್ತೊಮ್ಮೆ ಪವರ್‌ಪ್ಲೇನ ಲಾಭವನ್ನು ಪಡೆಯುವಲ್ಲಿ ವಿಫಲವಾದರು. ಈ ಪಂದ್ಯದಲ್ಲಿ ಒಟ್ಟು 32 ಎಸೆತಗಳನ್ನು ಎದುರಿಸಿದ ಅವರು 39 ರನ್‌ಗಳನ್ನು ಗಳಿಸಲು ಶಕ್ತವಾದರು. ಅವರ ಸ್ಟ್ರೈಕ್‌ರೇಟ್ 121.88.
ಅಚ್ಚರಿಯೆಂದರೆ ಸ್ಪೋಟಕ ಬ್ಯಾಟಿಂಗ್‌ಗೆ ಹೆಸರಾಗಿರುವ ಕೇಲ್ ಮೇಯರ್ಸ್ ಕೂಡ ಈ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್‌ಗೆ ಮೊರೆಹೋದರು. 42 ಎಸೆತಗಳನ್ನು ಎದುರಿಸಿದ ಅವರು 51 ರನ್ ಬಾರಿಸಿದ್ದು ಈ ಬಾರಿಯ ಟೂರ್ನಿಯಲ್ಲಿ ಮತ್ತೊಂದು ಅರ್ಧ ಶತಕ ಸಿಡಿಸಿದ್ದಾರೆ. ಅವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ 3 ಸಿಕ್ಸರ್ ಇತ್ತು. ಆದರೆ ಸ್ಟ್ರೈಕ್‌ರೇಟ್ 121.43ಕ್ಕೆ ಸೀಮಿತವಾಗಿತ್ತು. ಉಳಿದಂತೆ ಆಯುಷ್ ಬದೋನಿ ಹಾಗೂ ದೀಪಕ್ ಹೂಡಾ ಈ ಪಂದ್ಯದಲ್ಲಿ ವಿಫಲವಾದರು. ಇನ್ನು ಮಾರ್ಕಸ್ ಸ್ಟೋಯ್ನಿಸ್ 16 ಎಸೆತದಲ್ಲಿ 21 ರನ್ ಬಾರಿಸಿದರೆ ನಿಕೋಲಸ್ ಪೂರನ್ 20 ಎಸೆತಗಳಲ್ಲಿ 28 ರನ್ ಬಾರಿಸಿದರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 154 ರನ್‌ಗಳಿಸಿತ್ತು ಎಲ್‌ಎಸ್‌ಜಿ ತಂಡ.
ರಾಜಸ್ಥಾನ್ ರಾಯಲ್ಸ್ ಆಡುವ ಬಳಗ: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್
ಬೆಂಚ್: ದೇವದತ್ ಪಡಿಕ್ಕಲ್, ಮುರುಗನ್ ಅಶ್ವಿನ್, ಆಕಾಶ್ ವಸಿಷ್ಟ್, ಡೊನಾವನ್ ಫೆರೇರಾ, ನವದೀಪ್ ಸೈನಿ, ಜೋ ರೂಟ್, ಕೆಸಿ ಕಾರಿಯಪ್ಪ, ಓಬೇದ್ ಮೆಕಾಯ್, ಕೆಎಂ ಆಸಿಫ್, ಕುಲದೀಪ್ ಯಾದವ್, ಕುಲದೀಪ್ ಸೇನ್, ಅಬ್ದುಲ್ ಬಸಿತ್, ಕುನಾಲ್ ಸಿಂಗ್ ರಾಥೋಡ್, ಆಡಮ್ ಝಂಪಾ
ಲಕ್ನೋ ಸೂಪರ್ ಜೈಂಟ್ಸ್ ಆಡುವ ಬಳಗ: ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೋನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಯುಷ್ ಬದೋನಿ, ನವೀನ್-ಉಲ್-ಹಕ್, ಅವೇಶ್ ಖಾನ್, ಯುದ್ವೀರ್ ಸಿಂಗ್ ಚರಕ್, ರವಿ ಬಿಷ್ಣೋಯ್
ಬೆಂಚ್: ಜಯದೇವ್ ಉನದ್ಕತ್, ಕೃಷ್ಣಪ್ಪ ಗೌತಮ್, ಡೇನಿಯಲ್ ಸಾಮ್ಸ್, ಪ್ರೇರಕ್ ಮಂಕಡ್, ಅಮಿತ್ ಮಿಶ್ರಾ, ಮನನ್ ವೋಹ್ರಾ, ಕ್ವಿಂಟನ್ ಡಿ ಕಾಕ್, ಸ್ವಪ್ನಿಲ್ ಸಿಂಗ್, ಯಶ್ ಠಾಕೂರ್, ರೊಮಾರಿಯೋ ಶೆಫರ್ಡ್, ಕರಣ್ ಶರ್ಮಾ, ಮಯಾಂಕ್ ಯಾದವ್, ಮಾರ್ಕ್ ವುಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications