Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RR vs LSG: ರಾಜಸ್ಥಾನ್ ರಾಯಲ್ಸ್‌ಗೆ ಗೆಲ್ಲಲು 155 ರನ್‌ಗಳ ಗುರಿ ನೀಡಿದ ರಾಹುಲ್ ಪಡೆ

ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಐಪಿಎಲ್‌ನಲ್ಲಿ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಸಂಜು ಸ್ಯಾಮ್ಸನ್ ಪಡೆಗೆ ಸವಾಲಿನ ಗುರಿ ನೀಡಿದೆ. ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಕೆಎಲ್ ರಾಹುಲ್ ಪಡೆ 154 ರನ್‌ಗಳನ್ನು ಗಳಿಸಲು ಶಕ್ತವಾಯಿತು.

ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದರೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ರಾಜಸ್ಥಾನ್ ರಾಯಲ್ಸ್ ಬೌಲರ್‌ಗಳು ಉತ್ತಮ ಯಶಸ್ಸು ಸಾಧಿಸಿದ್ದಾರೆ. ಅಂದುಕೊಂಡ ವೇಗದಲ್ಲಿ ರನ್‌ಗಳಿಸಲು ಅವಕಾಶ ನೀಡದ ಕಾರಣ ಲಕ್ನೋ ತಂಡ ಈ ಪಂದ್ಯದಲ್ಲಿ ಸಾಧಾರಣ ಮೊತ್ತವನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು.

IPL 2023, RR vs LSG: Rajasthan Royals need 155 runs to win against LSG

ಈ ಪಂದ್ಯದಲ್ಲಿ ಎಲ್‌ಎಸ್‌ಜಿ ತಂಡ ಮೊದಲ ವಿಕೆಟ್‌ಗೆ 82 ರನ್‌ಗಳ ಆರಂಭಿಕ ಜೊತೆಯಾಟವನ್ನು ಪಡೆದುಕೊಂಡಿತಾದರೂ ರನ್ ವೇಗ ನಿಧಾನವಾಗಿತ್ತು. ನಾಯಕ ಕೆಎಲ್ ರಾಹುಲ್ ಮತ್ತೊಮ್ಮೆ ಪವರ್‌ಪ್ಲೇನ ಲಾಭವ್ನು ಪಡೆಯುವಲ್ಲಿ ವಿಫಲವಾದರು. ಈ ಪಂದ್ಯದಲ್ಲಿ ಒಟ್ಟು 32 ಎಸೆತಗಳನ್ನು ಎದುರಿಸಿದ ಅವರು 39 ರನ್‌ಗಳನ್ನು ಗಳಿಸಲು ಶಕ್ತವಾದರು. ಅವರ ಸ್ಟ್ರೈಕ್‌ರೇಟ್ 121.88.

ಅಚ್ಚರಿಯೆಂದರೆ ಸ್ಪೋಟಕ ಬ್ಯಾಟಿಂಗ್‌ಗೆ ಹೆಸರಾಗಿರುವ ಕೇಲ್ ಮೇಯರ್ಸ್ ಕೂಡ ಈ ಪಂದ್ಯದಲ್ಲಿ ನಿಧಾನಗತೊಇಯ ಬ್ಯಾಟಿಂಗ್‌ಗೆ ಮೊರೆಹೋದರು. 42 ಎಸೆತಗಳನ್ನು ಎದುರಿಸಿದ ಅವರು 51 ರನ್‌ ಬಾರಿಸಿದ್ದು ಈ ಬಾರಿಯ ಟೂರ್ನಿಯಲ್ಲಿ ಮತ್ತೊಂದು ಅರ್ಧ ಶತಕ ಸಿಡಿಸಿದ್ದಾರೆ. ಅವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ 3 ಸಿಕ್ಸರ್ ಇತ್ತು. ಆದರೆ ಸ್ಟ್ರೈಕ್‌ರೇಟ್ 121.43ಕ್ಕೆ ಸೀಮಿತವಾಗಿತ್ತು.

ಉಳಿದಂತೆ ಆಯುಷ್ ಬದೋನಿ ಹಾಗೂ ದೀಪಕ್ ಹೂಡಾ ಈ ಪಂದ್ಯದಲ್ಲಿ ವಿಫಲವಾದರು. ಇನ್ನು ಮಾರ್ಕಸ್ ಸ್ಟೋಯ್ನಿಸ್ 16 ಎಸೆತದಲ್ಲಿ 21 ರನ್ ಬಾರಿಸಿದರೆ ನಿಕೋಲಸ್ ಪೂರನ್ 20 ಎಸೆತಗಳಲ್ಲಿ 28 ರನ್ ಬಾರಿಸಿದರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 154 ರನ್‌ಗಳಿಸಿದರೆ ಲಕ್ನೋ ಸೂಪರ್ ಜೈಂಟ್ಸ್ ತಂಡ.

ರಾಜಸ್ಥಾನ್ ರಾಯಲ್ಸ್ ಆಡುವ ಬಳಗ: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್
ಬೆಂಚ್: ದೇವದತ್ ಪಡಿಕ್ಕಲ್, ಮುರುಗನ್ ಅಶ್ವಿನ್, ಆಕಾಶ್ ವಸಿಷ್ಟ್, ಡೊನಾವನ್ ಫೆರೇರಾ, ನವದೀಪ್ ಸೈನಿ, ಜೋ ರೂಟ್, ಕೆಸಿ ಕಾರಿಯಪ್ಪ, ಓಬೇದ್ ಮೆಕಾಯ್, ಕೆಎಂ ಆಸಿಫ್, ಕುಲದೀಪ್ ಯಾದವ್, ಕುಲದೀಪ್ ಸೇನ್, ಅಬ್ದುಲ್ ಬಸಿತ್, ಕುನಾಲ್ ಸಿಂಗ್ ರಾಥೋಡ್, ಆಡಮ್ ಝಂಪಾ

ಲಕ್ನೋ ಸೂಪರ್ ಜೈಂಟ್ಸ್ ಆಡುವ ಬಳಗ: ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೋನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಯುಷ್ ಬದೋನಿ, ನವೀನ್-ಉಲ್-ಹಕ್, ಅವೇಶ್ ಖಾನ್, ಯುದ್ವೀರ್ ಸಿಂಗ್ ಚರಕ್, ರವಿ ಬಿಷ್ಣೋಯ್
ಬೆಂಚ್: ಜಯದೇವ್ ಉನದ್ಕತ್, ಕೃಷ್ಣಪ್ಪ ಗೌತಮ್, ಡೇನಿಯಲ್ ಸಾಮ್ಸ್, ಪ್ರೇರಕ್ ಮಂಕಡ್, ಅಮಿತ್ ಮಿಶ್ರಾ, ಮನನ್ ವೋಹ್ರಾ, ಕ್ವಿಂಟನ್ ಡಿ ಕಾಕ್, ಸ್ವಪ್ನಿಲ್ ಸಿಂಗ್, ಯಶ್ ಠಾಕೂರ್, ರೊಮಾರಿಯೋ ಶೆಫರ್ಡ್, ಕರಣ್ ಶರ್ಮಾ, ಮಯಾಂಕ್ ಯಾದವ್, ಮಾರ್ಕ್ ವುಡ್

Story first published: Wednesday, April 19, 2023, 21:28 [IST]
Other articles published on Apr 19, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+