Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಕಾಮೆಂಟರಿ ಮಾಡ್ತಿದ್ದಾಗ ಆರ್‌ಸಿಬಿಯ ಈತ ಕರೆ ಮಾಡಿ ತಂಡಕ್ಕೆ ಕರೆದ್ರು: ಕೇದಾರ್ ಜಾಧವ್!

IPL 2023: Sanjay Bhai called when I was doing commentary and told me to join RCB says Kedar Jadhav

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್‌ರೌಂಡರ್ ಡೇವಿಡ್ ವಿಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೊಳಗಾಗಿದ್ದರು. ಗಾಯದ ತೀವ್ರತೆ ಹೆಚ್ಚಿದ್ದ ಕಾರಣ ಡೇವಿಡ್ ವಿಲ್ಲಿ ಚಿಕಿತ್ಸೆ ಪಡೆಯಬೇಕಿದ್ದು ಟೂರ್ನಿಯಿಂದಲೇ ಹೊರಬಿದ್ದಿದ್ದರು.

ಹೀಗೆ ಗಾಯದ ಸಮಸ್ಯೆಯಿಂದ ಡೇವಿಡ್ ವಿಲ್ಲಿ ಹೊರಬಿದ್ದ ಕಾರಣ ವಿಲ್ಲಿ ಬದಲಾಗಿ ಕೇದಾರ್ ಜಾಧವ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೇಮಿಸಿಕೊಂಡಿತು. ಮೂಲಗಳ ಪ್ರಕಾರ 1 ಕೋಟಿ ರೂಪಾಯಿಗಳಿಗೆ ಕೇದಾರ್ ಜಾಧವ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿದೆ ಎನ್ನಲಾಗಿದೆ.

ಕೇದಾರ್ ಜಾಧವ್ ತಂಡ ಸೇರಿದ ವಿಷಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಿಳಿಸಿ ಸಾಮಾಜಿಕ ಜಾಲತಾಣದ ತನ್ನ ಖಾತೆಗಳಲ್ಲಿ ಪೋಸ್ಟ್ ಹಂಚಿಕೊಂಡು ಡೇವಿಡ್ ವಿಲ್ಲಿ ಬದಲಾಗಿ ಕೇದರ್ ಜಾಧವ್ ತಂಡ ಸೇರಿದ್ದಾರೆ, ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸ್ವಾಗತ ಎಂದು ಬರೆದುಕೊಂಡಿತ್ತು.

ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ರೇಕಿಂಗ್ ಸುದ್ದಿ ನೀಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗಳು ಹರಿದಾಡಿದ್ದವು. ಬೇರೆ ಯಾವ ಆಟಗಾರನೂ ಸಹ ಸಿಗಲಿಲ್ವಾ, ಎಲ್ಲರೂ ಫಾರ್ಮ್‌ನಲ್ಲಿ ಇರುವ ಆಟಗಾರನನ್ನು ಹುಡುಕಿದರೆ, ನೀವು ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಅನ್ನೇ ಆಡದ ಆಟಗಾರನನ್ನು ಕರೆತರುತ್ತಿದ್ದೀರಲ್ಲ ಎಂದು ಕಾಮೆಂಟ್ ಮಾಡಿದ್ದರು.

ಇಂತಹ ಪ್ರತಿಕ್ರಿಯೆ ಪಡೆದುಕೊಂಡ ಕೇದಾರ್ ಜಾಧವ್ ಜಿಯೋ ಸಿನಿಮಾದಲ್ಲಿ ಐಪಿಎಲ್ ಮರಾಠಿ ಕಾಮೆಂಟರಿ ಮಾಡುತ್ತಿದ್ದ ತಾವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ್ದೇಗೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ. "ನಾನು ಕಾಮೆಂಟರಿ ಮಾಡುತ್ತಿದ್ದೆ. ಸಂಜಯ್ ಭಾಯ್ (ಸಂಜಯ್ ಬಂಗರ್) ಕರೆ ಮಾಡಿ ಏನು ಮಾಡುತ್ತಿದ್ದೀಯ ಎಂದು ಕೇಳಿದ್ರು. ನಾನು ಕಾಮೆಂಟರಿ ಮಾಡುತ್ತಿದ್ದೇನೆ ಎಂದೆ. ಕ್ರಿಕೆಟ್ ತಾಲೀಮು ನಡೆಸುತ್ತಿದ್ದೀಯ ಎಂದು ಕೇಳಿದ್ರು. ಹೌದು, ವಾರಕ್ಕೆರಡು ಬಾರಿ ಎಂದು ಹೇಳಿದೆ. ವ್ಯಾಯಾಮದ ಬಗ್ಗೆ ಕೇಳಿದ್ರು. ಹೌದು, ಹೊಟೇಲ್‌ನಲ್ಲಿ ಜಿಮ್ ಮಾಡುತ್ತಿದ್ದು, ಸರಿಯಾದ ಶೇಪ್‌ನಲ್ಲಿದ್ದೇನೆ ಎಂದೆ. ಬಳಿಕ ಸ್ವಲ್ಪ ಸಮಯ ಕೊಡು, ಮರಳಿ ಕರೆ ಮಾಡುತ್ತೇನೆ ಎಂದ್ರು. ಆಗಲೇ ಅರ್ಥವಾಗಿತ್ತು. ಅವರು ಕರೆ ಮಾಡಿ ನನ್ನನ್ನು ಆರ್‌ಸಿಬಿ ಪರ ಆಡು ಎನ್ನುತ್ತಾರೆ ಎಂದು ಹೇಳ್ತಾರೆ ಅಂತ" ಎಂದು ಕೇದಾರ್ ಜಾಧವ್ ತಿಳಿಸಿದರು.

ಇನ್ನೂ ಮುಂದುವರಿದು ಮಾತನಾಡಿದ ಕೇದಾರ್ ಜಾಧವ್ "ಆಶ್ಚರ್ಯವಾಯಿತು. ಆದರೆ ಸಂತಸದ ಆಶ್ಚರ್ಯ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲು ಅವಕಾಶ ಕೊಟ್ಟ ಸಿಬ್ಬಂದಿಗಳಿಗೆ ಧನ್ಯವಾದಗಳು ಹಾಗೂ ನನ್ನಿಂದ 110% ಆಟ ಬಂದೇ ಬರುತ್ತೆ" ಎಂದು ಹೇಳಿಕೆ ನೀಡಿದರು.

ಕೇದಾರ್ ಜಾಧವ್ ಇಲ್ಲಿಯವರೆಗೂ ಒಟ್ಟು 93 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 1193 ರನ್ ಬಾರಿಸಿದ್ದಾರೆ. ಆದರೆ ಕೇದಾರ್ ಜಾಧವ್ ಒಮ್ಮೆಯೂ ಬೌಲಿಂಗ್ ಮಾಡಿಲ್ಲ. 2016 ಹಾಗೂ 2017ರ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಕೇದಾರ್ ಜಾಧವ್ ಆರ್‌ಸಿಬಿ ಪರ ಕಣಕ್ಕಿಳಿದಿದ್ದರು.

2016ರಲ್ಲಿ 4 ಪಂದ್ಯಗಳನ್ನಾಡಿದ್ದ ಕೇದಾರ್ ಜಾಧವ್ ಒಟ್ಟು 45 ರನ್‌ಗಳನ್ನು ಬಾರಿಸಿದ್ದರು ಹಾಗೂ ಅಜೇಯ 25 ಕೇದಾರ್ ಜಾಧವ್ ಗಳಿಸಿದ್ದ ಗರಿಷ್ಠ ರನ್. ಇನ್ನು 2017ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 13 ಪಂದ್ಯಗಳನ್ನಾಡಿದ್ದ ಜಾಧವ್ ಗರಿಷ್ಠ 69 ರನ್ ಸೇರಿದಂತೆ ಒಟ್ಟು 267 ರನ್ ಗಳಿಸಿದ್ದರು.

Story first published: Thursday, May 4, 2023, 12:35 [IST]
Other articles published on May 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+