For Quick Alerts
ALLOW NOTIFICATIONS  
For Daily Alerts
 

IPL 2023 Schedule : ಐಪಿಎಲ್ 2023ನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟ: ಮಾರ್ಚ್ 31ಕ್ಕೆ ಟೂರ್ನಿ ಆರಂಭ

IPL 2023 Schedule : IPL 2023 Time Table, Fixtures, Groups, Match Timings, Dates & Venues Details in Kannada

ಐಪಿಎಲ್ 2023ನೇ ಆವೃತ್ತಿಯ ವೇಳಾಪಟ್ಟಿ ಘೋಷಣೆಯಾಗಿದ್ದು ಮಹಾ ಸೆಣೆಸಾಟಕ್ಕೆ ಮುಹೂರ್ತ ನಿಗದಿಯಾಗಿದೆ. ಮಾರ್ಚ್ 31ಕ್ಕೆ ಈ ಮೆಗಾ ಟೂರ್ನಿ ಆರಂಭವಾಗಲಿದ್ದು ಮೇ 28ಕ್ಕೆ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ. 52 ದಿನಗಳ ಕಾಲ ನಡೆಯಲಿರುವ ಈ ಮಹಾ ಕ್ರೀಡಾಕೂಟದಲ್ಲಿ 10 ತಂಡಗಳು ಪೈಪೋಟಿ ನಡೆಸಲಿದೆ.

ಇನ್ನು ಕುತೂಹಲಕಾರಿ ಅಂಶವೆಂದರೆ ಈ ಬಾರಿ ಕೂಡ ಎರಡು ಗುಂಪುಗಳಾಗಿ ತಂಡಗಳನ್ನು ವಿಂಗಡಿಸಲಾಗಿದೆ. ಆದರೆ ಈ ಬಾರಿ ತಮ್ಮ ಗುಂಪಿನಲ್ಲಿರುವ ತಂಡದ ಜೊತೆಗೆ ಒಂದು ಪಂದ್ಯದಲ್ಲಿ ಮಾತ್ರವೇ ಮುಖಾಮುಖಿಯಾಗಲಿದ್ದು ಮತ್ತೊಂದು ಗುಂಪಿನಲ್ಲಿರುವ ತಂಡಗಳ ಜೊತೆಗೆ ಎರಡು ಬಾರಿ ಮುಖಾಮುಖಿಯಾಗಲಿದೆ. ನಾಲ್ಕು ವರ್ಷಗಳ ಬಳಿಕ ಎಲ್ಲಾ ತಂಡಗಳು ತಮ್ಮ ತವರಿನಲ್ಲಿ ಆಡುವ ಅವಕಾಶ ಪಡೆದುಕೊಂಡಿದೆ.

ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಆರ್‌ಸಿಬಿಯ ಮೊದಲ ಪಂದ್ಯ

ಆರ್‌ಸಿಬಿಯ ಮೊದಲ ಪಂದ್ಯ

ಇನ್ನು ಈ ಬಾರಿಯ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುವ ಮೂಲಕ ಟೂರ್ನಿಗೆ ಚಾಲನರ ದೊರೆಯಲಿದೆ. ಆರ್‌ಸಿಬಿ ತಂಡ ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 3ರಂದು ಆಡಲಿದ್ದು ಮುಂಬೈ ಇಂಡಿಯನ್ಸ್ ತಂಡ ಆರ್‌ಸಿಬಿಗೆ ಎದುರಾಳಿಯಾಗಿರಲಿದೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ನಡೆಯಲಿದೆ.

ಎರಡು ಗುಂಪುಗಳು ಹಾಗೂ ತಂಡಗಳು

ಎರಡು ಗುಂಪುಗಳು ಹಾಗೂ ತಂಡಗಳು

ಈ ಬಾರಿ ಕೂಡ ಎರಡು ಗುಂಪುಗಳಾಗಿ ವಿಂಗಡಿಸಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಆದರೆ ಕಳೆದ ಬಾರಿಗಿಂತ ಭಿನ್ನವಾಗಿ ಆಯಾ ಗುಂಪಿನ ತಂಡಗಳ ಜೊತೆಗೆ ಒಂದೇ ಪಂದ್ಯವನ್ನಾಡಲಿದ್ದು ಮತ್ತೊಂದು ಗುಂಪಿನ ತಂಡಗಳ ಜೊತೆಗೆ ಎರಡು ಪಂದ್ಯಗಳನ್ನು ಪ್ರತಿ ತಂಡಗಳು ಆಡಲಿದೆ. ಹಾಗಾಗಿ ಯಾವ ಗುಂಪಿನಲ್ಲಿ ಯಾವ ತಂಡಗಳು ಇದೆ ಎಂಬುದರ ಮಾಹಿತಿ ಇಲ್ಲಿದೆ.

ಗ್ರೂಪ್ ಎ: ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್

ಗ್ರೂಪ್ ಬಿ: ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಸನ್‌ರೈಸರ್ಸರ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್

1000ನೇ ಪಂದ್ಯದ ವಿಶೇಷ

1000ನೇ ಪಂದ್ಯದ ವಿಶೇಷ

ಇನ್ನು ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಐಪಿಎಲ್‌ ಇತಿಹಾಸದ 1000ನೇ ಪಂದ್ಯ ನಡೆಯಲಿದೆ. ಈ ಪಂದ್ಯ ಮೇ 6ರಂದು ನಡೆಯಲಿದ್ದು ಐಪಿಎಲ್ ಇತಿಹಾಸದ ಎರಡು ಯಶಸ್ವಿ ತಂಡಗಳಾದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈ ವಿಶೇಷ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಚೆಪಾಕ್‌ನಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ.

4 ವರ್ಷಗಳ ಬಳಿಕ ಚಿನ್ನಸ್ವಾಮಿಯಲ್ಲಿ ಐಪಿಎಲ್ ಕಲರವ

4 ವರ್ಷಗಳ ಬಳಿಕ ಚಿನ್ನಸ್ವಾಮಿಯಲ್ಲಿ ಐಪಿಎಲ್ ಕಲರವ

ಇನ್ನು ಸುದೀರ್ಘ ಸಮಯದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತವರು ಮೈದಾನವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಆಡಲಿದೆ. ಕೊರೊನಾವೈರಸ್ ಕಾರಣದಿಂದಾಗಿ ಕಳೆದ 3 ಆವೃತ್ತಿಗಳು ತಟಸ್ಥ ಕೇಂದ್ರಗಳಲ್ಲಿ ಆಯೋಜನೆಯಾಗಿತ್ತು. ಈ ಬಾರಿ ಎಲ್ಲಾ ತಂಡಗಳು ಕೂಡ ತವರಿನಲ್ಲಿ ಆಡುವ ಅವಕಾಶ ಪಡೆದುಕೊಂಡಿದೆ. ಹೀಗಾಗಿ ಆರ್‌ಸಿಬಿ ತಂಡ ಬೆಂಗಳೂರಿನಲ್ಲಿ ಸುದೀರ್ಘ ಕಾಲದ ಬಳಿಕ ಮತ್ತೆ ಆಡಲು ಸಜ್ಜಾಗುತ್ತಿದೆ. ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಏಪ್ರಿಲ್ 3ರಂದು ಬೆಂಗಳುರಿನಲ್ಲಿಯೆ ಪಂದ್ಯ ನಡೆಯುವ ಮೂಲಕ ಸುದೀರ್ಘ ಕಾಲದ ಬಳಿಕ ಆರ್‌ಸಿಬಿ ಅಭಿಮಾನಿಗಳು ಈ ತವರಿನ ಮೈದಾನದಲ್ಲಿ ಪಂದ್ಯ ವೀಕ್ಷಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

Story first published: Friday, February 17, 2023, 17:12 [IST]
Other articles published on Feb 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+