Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಕೊಹ್ಲಿ vs ನವೀನ್ ಉಲ್ ಹಕ್ ಜಗಳದ ಬಗ್ಗೆ ಪ್ರತಿಕ್ರಿಯಿಸಿ ತಪ್ಪು ಈತನದ್ದೇ ಎಂದ ಅಫ್ರಿದಿ!

IPL 2023: Shahid Afridi supports Naveen Ul Haq and indirectly trolls Virat Kohli

ಮೇ 1ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯ ಮುಗಿದು ಮೂರ್ನಾಲ್ಕು ದಿನಗಳು ಕಳೆದರೂ ಸಹ ಈ ಪಂದ್ಯದ ಕುರಿತು ಅನೇಕ ಸುದ್ದಿಗಳು ಹೊರಬೀಳುತ್ತಲೇ ಇವೆ, ಹಿರಿಯ ಕ್ರಿಕೆಟಿಗರು ಈ ಬಗ್ಗೆ ಮಾತನಾಡುತ್ತಲೇ ಇದ್ದಾರೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ನಿರಂತರವಾಗಿ ಟ್ರೆಂಡ್‌ಗಳು ಆಗುತ್ತಲೇ ಇವೆ.

ಈ ಪಂದ್ಯ ಇಷ್ಟರ ಮಟ್ಟಿಗೆ ಸುದ್ದಿಯಾಗಿ ಚರ್ಚೆಗೀಡಾಗಲು ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರರು ಮತ್ತು ಮೆಂಟರ್ ಗೌತಮ್ ಗಂಭೀರ್ ನಡುವೆ ನಡೆದ ಜಗಳಗಳು ಹಾಗೂ ವಾಕ್ಸಮರ.

ಹೌದು, ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆದ್ದಾಗ ಗೌತಮ್ ಗಂಭೀರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಶ್ ಎಂದು ಸನ್ನೆ ಮಾಡಿದ್ದರು. ಅದೇ ಸೇಡನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾನು ಶ್ ಎನ್ನುವುದಿಲ್ಲ ಬದಲಾಗಿ ನಿಮ್ಮನ್ನೆಲ್ಲಾ ಪ್ರೀತಿಸುತ್ತೇನೆ ಎಂದು ಸನ್ನೆ ಮಾಡುವ ಮೂಲಕ ತೀರಿಸಿಕೊಂಡಿದ್ದರು.

ಹೀಗೆ ವಿರಾಟ್ ಕೊಹ್ಲಿ vs ಗೌತಮ್ ಗಂಭೀರ್ ನಡುವೆ ಮಾತ್ರ ಇದ್ದ ಜಗಳ ನಂತರ ಕೊಹ್ಲಿ ಹಾಗೂ ಕೆಲ ಲಕ್ನೋ ಆಟಗಾರರ ನಡುವೆ ಸಹ ನಡೆಯಿತು. 17ನೇ ಓವರ್‌ನಲ್ಲಿ ಕಣದಲ್ಲಿದ್ದ ನವೀನ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿ ಕೈಕೈ ಹಿಡಿದುಕೊಂಡು ವಾಕ್ಸಮರ ನಡೆಸುವ ಮಟ್ಟಕ್ಕೆ ಜಗಳ ನಡೆದಿತ್ತು.

ನವೀನ್ ಉಲ್ ಹಕ್ ಕ್ರೀಸ್‌ಗೆ ಬ್ಯಾಟ್ ಇಟ್ಟಿದ್ದರೂ ಸಹ ಮೊಹಮ್ಮದ್ ಸಿರಾಜ್ ವಿಕೆಟ್‌ಗೆ ಚೆಂಡನ್ನು ಎಸೆದು ದಿಟ್ಟಿಸಿ ನೋಡಿದ್ದರ ಪರಿಣಾಮ ನವೀನ್ ಉಲ್ ಹಕ್ ಜಗಳಕ್ಕೆ ಮುಂದಾಗಿದ್ದರು. ಈ ಸಮಯದಲ್ಲಿ ಕೊಹ್ಲಿ ಮಧ್ಯ ಪ್ರವೇಶಿಸಿದ ಕಾರಣ ಕೊಹ್ಲಿ ಹಾಗೂ ನವೀನ್ ನಡುವೆ ಜಗಳ ತೀವ್ರಗೊಂಡಿತ್ತು. ಇನ್ನು ಪಂದ್ಯ ಮುಗಿದ ಬಳಿಕ ಶೇಕ್ ಹ್ಯಾಂಡ್ ಮಾಡುವ ಸಂದರ್ಭದಲ್ಲಿಯೂ ಸಹ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವೆ ಜಗಳ ನಡೆದಿತ್ತು.

ನವೀನ್ ಉಲ್ ಹಕ್ ವಿರಾಟ್ ಕೊಹ್ಲಿ ಹ್ಯಾಂಡ್ ಶೇಕ್ ಮಾಡಿದ ಬಳಿಕ ಕೊಹ್ಲಿ ಕೈಯನ್ನು ಜೋರಾಗಿ ತಳ್ಳಿದ್ದರು. ಹೀಗೆ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವೆ ಹಲವು ಬಾರಿ ಜಗಳ ಏರ್ಪಟ್ಟಿತ್ತು. ಈ ಜಗಳದ ಬಗ್ಗೆ ಹಲವರು ಪ್ರತಿಕ್ರಿಯಿಸಿದ್ದು, ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಸಹ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹೌದು, ಪಾಕಿಸ್ತಾನ ಸಮಾ ಟಿವಿ ಜತೆ ಮಾತನಾಡಿರುವ ಶಾಹಿದ್ ಅಫ್ರಿದಿ "ಯಾರಾದರೂ ಅನಗತ್ಯವಾಗಿ ಕೆಣಕಿದಾಗ ಮಾತ್ರ ನವೀನ್ ಉಲ್ ಹಕ್ ಪ್ರತಿಕ್ರಿಯಿಸುತ್ತಾನೆ. ಆತ ಬೌಲಿಂಗ್ ಮಾಡುವುದನ್ನು ನಾನು ಕಂಡಿದ್ದೇನೆ. ರನ್ ಬಾರಿಸಿಕೊಂಡಾಗಲೂ ಸಹ ಆತ ಯಾರೊಂದಿಗೂ ಜಗಳ ಮಾಡಿದವನಲ್ಲ. ಆತ ಇಷ್ಟು ಕುಪಿತಗೊಂಡಿದ್ದನ್ನು ನಾನು ಹಿಂದೆಂದೂ ಕಂಡಿರಲಿಲ್ಲ. ಪ್ರತಿ ತಂಡವೂ ಸಹ ಇಂತಹ ಮುಂಗೋಪಿ ಆಟಗಾರರನ್ನು ಹೊಂದಿರುತ್ತೆ. ನಮ್ಮ ತಂಡದಲ್ಲಿಯೂ ಸಹ ಇದ್ದಾರೆ. ವೇಗಿಗಳೇ ಹಾಗೆ" ಎಂದು ಹೇಳಿಕೆ ನೀಡಿದ್ದಾರೆ.

ಈ ರೀತಿ ಹೇಳುವ ಮೂಲಕ ನವೀನ್ ಉಲ್ ಹಕ್ ವಿರಾಟ್ ಕೊಹ್ಲಿ ಅನಗತ್ಯವಾಗಿ ಕೆಣಕಿದ್ದಕ್ಕಾಗಿ ಆ ರೀತಿ ವರ್ತಿಸಿದ್ದಾನೆ ಎಂದು ಶಾಹಿದ್ ಅಫ್ರಿದಿ ಪರೋಕ್ಷವಾಗಿ ಕೊಹ್ಲಿಯದ್ದೇ ತಪ್ಪು ಎಂದಿದ್ದಾರೆ. ಇನ್ನು ಶಾಹಿದ್ ಅಫ್ರಿದಿ ಈ ಹೇಳಿಕೆಯಲ್ಲಿ ಅಷ್ಟೇನೂ ಸತ್ಯಾಂಶವಿಲ್ಲ ಎನ್ನಬಹುದು. ಏಕೆಂದರೆ ಇದೇ ಶಾಹಿದ್ ಅಫ್ರಿದಿ ನವೀನ್ ಉಲ್ ಹಕ್ ಜತೆ ಜಗಳವಾಡಿದ ಪ್ರಸಂಗ ನಡೆದಿದೆ.

ಹೌದು, 2020ರಲ್ಲಿ ನಡೆದಿದ್ದ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದ ನವೀನ್ ಉಲ್ ಹಕ್ ಮೊಹಮ್ಮದ್ ಆಮೀರ್ ಜತೆ ಕಿರಿಕ್ ಮಾಡಿಕೊಂಡಿದ್ದರು. ಇಬ್ಬರೂ ಸಹ ಕಣದಲ್ಲಿಯೇ ಕಿತ್ತಾಡಿಕೊಂಡಿದ್ದರು. ಪಂದ್ಯ ಮುಗಿದ ಬಳಿಕ ಮೊಹಮ್ಮದ್ ಆಮೀರ್ ತಂಡದಲ್ಲಿದ್ದ ಶಾಹಿದ್ ಆಫ್ರಿದಿ ಸಹ ನವೀನ್ ಉಲ್ ಹಕ್‌ಗೆ ಬೈದು ವಾರ್ನಿಂಗ್ ನೀಡಿದ್ದರು. ಹೀಗಿರುವಾಗ ಅಫ್ರಿದಿ ನವೀನ್ ಉಲ್ ಹಕ್ ಬಗ್ಗೆ ನೀಡಿರುವ ಹೇಳಿಕೆಗೆ ಬೆಲೆಯೇ ಇಲ್ಲದಂತಾಗಿದೆ..

Story first published: Thursday, May 4, 2023, 9:47 [IST]
Other articles published on May 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+