IPL 2023: SRH ಅತ್ಯಧಿಕ ಐಪಿಎಲ್ ಮೊತ್ತ ಗಳಿಸಿದ ಹೊರತಾಗಿಯೂ RCBಯ ಈ ದಾಖಲೆ ಟಚ್ ಮಾಡಲಾಗಲಿಲ್ಲ
ಬುಧವಾರ, ಮಾರ್ಚ್ 27ರಂದು ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಧಿಕ ಮೊತ್ತವನ್ನು ದಾಖಲಿಸಿತು.
ಸನ್‌ರೈಸರ್ಸ್ ಹೈದರಾಬಾದ್ ನೀಡಿದ್ದ 278 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ಕಳೆದುಕೊಂಡು 246 ರನ್ ಗಳಿಸಿ 31 ರನ್‌ಗಳಿಂದ ಸೋಲು ಅನುಭವಿಸಿತು. ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡ ಸತತ ಎರಡನೇ ಸೋಲು ಕಂಡಿತು.

ಇನ್ನು ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ 263 ರನ್‌ಗಳ ಗರಿಷ್ಠ ಮೊತ್ತದ ದಾಖಲೆಯನ್ನು ಸನ್‌ರೈಸರ್ಸ್ ಹೈದರಾಬಾದ್ ಅಳಿಸಿ ಹಾಕಿತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ದಾಳಿಯನ್ನು ಸದೆಬಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಇತಿಹಾಸದಲ್ಲಿ 277 ರನ್‌ಗಳ ಗರಿಷ್ಠ ಮೊತ್ತವನ್ನು ಗಳಿಸಿದೆ.
ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಪ್ರಚಂಡ ಬ್ಯಾಟಿಂಗ್‌ನಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟರ್‌ಗಳು ಬಹುತೇಕ ಎಲ್ಲಾ ಮುಂಬೈ ಇಂಡಿಯನ್ಸ್ ಬೌಲರ್‌ಗಳನ್ನು ದಂಡಿಸಿದರು. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈದರು.
ಐಪಿಎಲ್ ಪಂದ್ಯವೊಂದರಲ್ಲಿ ಆರ್‌ಸಿಬಿ ವೇಗವಾಗಿ 200 ರನ್ ಗಳಿಸಿದೆ
ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಬ್ಯಾಟಿಂಗ್ ಪರಾಕ್ರಮದಿಂದ 15ನೇ ಓವರ್‌ನಲ್ಲಿ 200 ರನ್ ಗಡಿ ತಲುಪಿತು. ಆದರೆ ದುರದೃಷ್ಟವಶಾತ್, ಐಪಿಎಲ್ ಇತಿಹಾಸದಲ್ಲಿ ಇದು ವೇಗವಾಗಿ 200 ರನ್ ಆಗಲು ಸಾಕಾಗಲಿಲ್ಲ.

2016ರಲ್ಲಿ ಕಿಂಗ್ಸ್ XI ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ವೇಗವಾಗಿ 200 ರನ್‌ಗಳನ್ನು ಗಳಿಸಿತ್ತು. ಈಗ ಆ ದಾಖಲೆ ಹಾಗೇ ಉಳಿದಿರುವ ಕಾರಣದಿಂದ ಆರ್‌ಸಿಬಿ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ 14.1 ಓವರ್‌ಗಳಲ್ಲಿ 200 ರನ್ ಕಲೆಹಾಕಿತ್ತು. ಆದರೆ ಸನ್‌ರೈಸರ್ಸ್ ಹೈದರಾಬಾದ್ ಈ ಮಾರ್ಕ್ ತಲುಪಲು 14.4 ಓವರ್‌ಗಳನ್ನು ತೆಗೆದುಕೊಂಡಿತು.
ಆದರೆ, ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಇತಿಹಾಸದಲ್ಲಿ ಜಂಟಿ-ವೇಗವಾಗಿ 250 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಹೈದರಾಬಾದ್ ಬ್ಯಾಟರ್‌ಗಳು ತಮ್ಮ ಸಂಪೂರ್ಣ ಕೋಟಾದ 20 ಓವರ್‌ಗಳಲ್ಲಿ 277 ರನ್‌ಗಳನ್ನು ಗಳಿಸಿದ್ದರಿಂದ, ಆರ್‌ಸಿಬಿ ತಂಡದ ಹಿಂದಿನ ಐಪಿಎಲ್‌ನ ಅತ್ಯಧಿಕ 263 ರನ್‌ಗಳ ದಾಖಲೆಯನ್ನು ಮುರಿದರು.
ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ 200 ರನ್
14.1 ಓವರ್‌ಗಳು - ಆರ್‌ಸಿಬಿ vs ಕಿಂಗ್ಸ್ XI ಪಂಜಾಬ್, 2016
14.4 ಓವರ್‌ಗಳು - ಎಸ್‌ಆರ್‌ಎಚ್ vs ಮುಂಬೈ ಇಂಡಿಯನ್ಸ್, 2024
15.5 ಓವರ್‌ಗಳು - ಆರ್‌ಸಿಬಿ vs ಪುಣೆ ವಾರಿಯರ್ಸ್, 2013
15.5 ಓವರ್‌ಗಳು - ಎಲ್‌ಎಸ್‌ಜಿ vs ಪಂಜಾಬ್ ಕಿಂಗ್ಸ್, 2023
ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಮೊತ್ತ
277/3 - ಸನ್‌ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್ (2024)
263/5 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪುಣೆ ವಾರಿಯರ್ಸ್ ಇಂಡಿಯಾ (2013)
256/5 - ಲಕ್ನೋ ಸೂಪರ್ ಜೈಂಟ್ಸ್ vs ಪಂಜಾಬ್ ಕಿಂಗ್ಸ್ (2023)
248/3 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಲಯನ್ಸ್ (2016)
246/5 - ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್ (2010)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications