For Quick Alerts
ALLOW NOTIFICATIONS  
For Daily Alerts
 

IPL 2023: ಆತನನ್ನು ಆಡಿಸದೆ ಮಹಾ ಎಡವಟ್ಟು ಮಾಡಿದ ಸನ್‌ರೈಸರ್ಸ್ ಹೈದರಾಬಾದ್!

ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಆಡಿದ ಎರಡೂ ಪಂದ್ಯಗಳನ್ನು ಸೋಲುವ ಮೂಲಕ ಮುಖಭಂಗ ಅನುಭವಿಸಿದೆ. ಮೊದಲನೇ ಪಂದ್ಯವನ್ನು ತವರಿನಲ್ಲಿ ಆಡಿದಾಗ, ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ 72 ರನ್‌ಗಳ ಅಂತರದಿಂದ ಸೋಲನುಭವಿಸಿತು. ಲಕ್ನೋದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಕೂಡ 5 ವಿಕೆಟ್‌ಗಳಿಂದ ಸೋಲನುಭಿಸಿತು.

ಐಪಿಎಲ್‌ 2023ರ ಮಿನಿ ಹರಾಜಿಗೆ ಮುನ್ನ ಪ್ರಮುಖ ಆಟಗಾರರನ್ನೇ ಕೈಬಿಟ್ಟ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿತ್ತು. ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್, ಹೆನ್ರಿಚ್ ಕ್ಲಾಸೆನ್ ಅವರಂತಹ ಬಲಿಷ್ಠ ಬ್ಯಾಟರ್ ಗಳನ್ನು ಖರೀದಿ ಮಾಡಿತ್ತು. ಪ್ರತಿ ಬಾರಿ ಬ್ಯಾಟಿಂಗ್ ವಿಭಾಗದಲ್ಲಿ ದುರ್ಬಲವಾಗಿದ್ದ ಹೈದರಾಬಾದ್ ಈ ಬಾರಿ ಬ್ಯಾಟಿಂಗ್ ವಿಭಾಗವನ್ನು ಬಲ ಪಡಿಸಿಕೊಂಡಿತ್ತು. ಐಡೆನ್ ಮಾರ್ಕ್ರಾಮ್‌ ತಂಡದ ನಾಯಕರಾಗಿ ಆಯ್ಕೆಯಾಗಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಇದ್ದರೂ ಅದರಲ್ಲಿ ವಿಫಲವಾಗಿದೆ.

Heinrich Klaasen

ಲಕ್ನೋ ವಿರುದ್ಧದ ಪಂದ್ಯಕ್ಕೆ ಎಸ್‌ಆರ್‌ಹೆಚ್ ಆಡುವ ಬಳಗದಲ್ಲಿ ಬದಲಾವಣೆ ಮಾಡಲಾಯಿತು. ಐಡೆನ್ ಮಾರ್ಕ್ರಾಮ್ ಆಡುವ ಬಳಗವನ್ನು ಆಯ್ಕೆ ಮಾಡುವಲ್ಲಿ ಎಡವಟ್ಟು ಮಾಡಿದರಾ ಎನ್ನುವ ಪ್ರಶ್ನೆ ಎದುರಾಗಿದೆ. ತಂಡದ ಪ್ರಮುಖ ಬ್ಯಾಟರ್ ಹೆನ್ರಿಚ್ ಕ್ಲಾಸೆನ್‌ ಅವರನ್ನು ಆಯ್ಕೆ ಮಾಡದ್ದು ತಪ್ಪು ನಿರ್ಧಾರ ಎಂದು ಹೇಳಲಾಗುತ್ತಿದೆ.

LSG vs SRH IPL 2023: ಲಕ್ನೋ ತಂಡದ ಆಲ್‌ರೌಂಡ್ ಪ್ರದರ್ಶನ; ಹೈದರಾಬಾದ್ ತಂಡಕ್ಕೆ ಸತತ 2ನೇ ಸೋಲು

ಅತ್ಯುತ್ತಮ ಫಾರ್ಮ್‌ನಲ್ಲಿರುವ ಹೆನ್ರಿಚ್ ಕ್ಲಾಸೆನ್

ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ 61 ಎಸೆತಗಳಲ್ಲಿ 15 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ ಸಹಿತ ಅಜೇಯ 119 ರನ್ ಗಳಿಸಿ ಮಿಂಚಿದರು. ಜನವರಿಯಲ್ಲಿ ನಡೆದ ಎಸ್‌ಎ20 ಟೂರ್ನಿಯಲ್ಲಿ ಕೂಡ ಉತ್ತಮವಾಗಿ ರನ್ ಗಳಿಸಿದ್ದರು.

ನಾಯಕ ಐಡೆನ್ ಮಾರ್ಕ್ರಾಮ್ ಕೂಡ ದಕ್ಷಿಣ ಆಫ್ರಿಕಾದವರಾಗಿದ್ದು, ಕ್ಲಾಸೆನ್ ಅವರ ಸಾಮರ್ಥ್ಯದ ಬಗ್ಗೆ ಚೆನ್ನಾಗಿ ತಿಳಿದವರಾಗಿದ್ದರು. ಮೊದಲು ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡಕ್ಕೆ ಕರೆತರುವ ಅವಕಾಶ ಇದ್ದರೂ ಮಾರ್ಕ್ರಾಮ್ ಅದರ ಬಗ್ಗೆ ಯೋಚನೆ ಮಾಡದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

Heinrich Klaasen

ಭಾರತದಲ್ಲಿ ಉತ್ತಮ ದಾಖಲೆ ಹೊಂದಿರುವ ಕ್ಲಾಸೆನ್: ಹೆನ್ರಿಚ್ ಕ್ಲಾಸೆನ್ ಭಾರತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಭಾರತದಲ್ಲಿ ಆಡಿರುವ ಮೂರು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 39.33 ಸರಾಸರಿ ಮತ್ತು 151.28 ಸ್ಟ್ರೈಕ್‌ರೇಟ್‌ನಲ್ಲಿ 118 ರನ್ ಗಳಿಸಿದ್ದಾರೆ. ಸ್ಪಿನ್ ವಿರುದ್ಧ ಕೂಡ ಉತ್ತಮ ಪ್ರದರ್ಶನ ನೀಡುವ ಆಟಗಾರ ಎನಿಸಿಕೊಂಡಿದ್ದಾರೆ. ಅವರನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಹೈದರಾಬಾದ್ ತಂಡದ ಆಡಳಿತ ಮಂಡಳಿ ಎಡವಿತು.

ಆಕ್ರಮಣಕಾರಿ ಬ್ಯಾಟರ್: ಅಬ್ದುಲ್ ಸಮದ್ ಹೊರತುಪಡಿಸಿದರೆ ಸನ್‌ರೈಸರ್ಸ್ ತಂಡದ ಯಾವ ಬ್ಯಾಟರ್ ಗಳು ಕೂಡ ಉತ್ತಮ ಪ್ರದರ್ಶನ ನೀಡಲಿಲ್ಲ. ನಾಲ್ವರು ಬ್ಯಾಟರ್ ಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಆಟಗಾರರು 100ಕ್ಕಿಂತ ಕಡಿಮೆ ಸ್ಟ್ರೈಕ್‌ರೇಟ್ ಹೊಂದಿದ್ದರು. ಟಿ20 ಕ್ರಿಕೆಟ್‌ನಲ್ಲಿ 148.22 ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ. ಆದರೂ ಅವರನ್ನು ಆಡಿಸದೇ ಹೈದರಾಬಾದ್ ತಂಡ ದೊಡ್ಡ ತಪ್ಪು ಮಾಡಿತು.

ಮೊದಲ ಎರಡೂ ಪಂದ್ಯಗಳನ್ನು ಸೋಲುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಸನ್‌ರೈಸರ್ಸ್ ಹೈದರಾಬಾದ್ ಮುಂದಿನ ಪಂದ್ಯವನ್ನು ತವರಿನಲ್ಲಿ ಆಡಲಿದೆ. ಏಪ್ರಿಲ್ 9ರಂದು ಪಂಜಾಬ್ ಕಿಂಗ್ಸ್‌ ತಂಡವನ್ನು ಎದುರಿಸಲು ಸಿದ್ಧವಾಗಿದೆ. ಮೊದಲ ಎರಡೂ ಪಂದ್ಯಗಳನ್ನು ಗೆದ್ದಿರುವ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲ್ಲಬೇಕಾದರೆ ಮಾರ್ಕ್ರಾಮ್ ಪಡೆ ಅತ್ಯುತ್ತಮ ಪ್ರದರ್ಶನ ನೀಡಬೇಕಾಗುತ್ತದೆ.

Story first published: Saturday, April 8, 2023, 12:21 [IST]
Other articles published on Apr 8, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+