IPL 2023 SRH Vs MI : ಆರ್ಚರ್ ಆಡಲ್ಲ, ರೋಹಿತ್ ಫಿಟ್: ಕನ್ನಡಿಗನಿಗೆ ಕೊನೆ ಅವಕಾಶ?
ಐಪಿಎಲ್ 2023ರ ಆವೃತ್ತಿಯ 25ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಇಂದಿನ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಫಿಟ್ ಆಗಿದ್ದು, ಜೋಫ್ರಾ ಆರ್ಚರ್ ಮತ್ತೊಂದು ಪಂದ್ಯ ತಪ್ಪಿಸಿಕೊಳ್ಳಲಿದ್ದಾರೆ. ಕನ್ನಡಿಗ ಮಯಾಂಕ್ ಅಗರ್ವಾಲ್‌ಗೆ ಇಂದಿನ ಪಂದ್ಯ ಬಹಳ ಮುಖ್ಯವಾಗಿರಲಿದೆ.
ಸನ್‌ರೈಸರ್ಸ್ ಹೈದರಾಬಾದ್ ಮೊದಲ ಎರಡು ಪಂದ್ಯವನ್ನು ಸೋತ ಬಳಿಕ ಎರಡು ಪಂದ್ಯಗಳಲ್ಲಿ ಸತತವಾಗೆ ಗೆಲುವು ಕಂಡಿದ್ದಾರೆ. ಕೋಲ್ಕತ್ತಾದಲ್ಲಿ ಕೆಕೆಆರ್ ವಿರುದ್ಧ 23 ರನ್‌ಗಳ ಭರ್ಜರಿ ಜಯ ಸಾಧಿಸಿದ ಬಳಿಕ, ಮುಂಬೈ ಇಂಡಿಯನ್ಸ್ ತಂಡವನ್ನು ತವರಿನಲ್ಲಿ ಎದುರಿಸಲು ಸಜ್ಜಾಗಿದ್ದಾರೆ. ತವರಿನ ಲಾಭ ಪಡೆಯುವ ಮೂಲಕ ಮೂರನೇ ಗೆಲುವು ವಿಶ್ವಾಸದಲ್ಲಿದೆ ಮಾರ್ಕ್ರಾಮ್ ಪಡೆ.

ಮುಂಬೈ ಇಂಡಿಯನ್ಸ್ ಕೂಡ ಮೊದಲ ಎರಡು ಪಂದ್ಯಗಳಲ್ಲಿ ಸತತವಾಗಿ ಸೋಲು ಕಂಡಿದ್ದು, ನಂತರ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲ ಗೆಲುವು ಪಡೆದ ಅವರು, ತವರಿನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಜಿಗಿತ ಕಾಣುವ ಉತ್ಸಾಹದಲ್ಲಿದೆ.

ಫಿಟ್ ಆದ ರೋಹಿತ್, ಹೊರಗುಳಿಯುವ ಆರ್ಚರ್
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅನಾರೋಗ್ಯದ ಕಾರಣ ಫೀಲ್ಡಿಂಗ್ ವೇಳೆ ಹೊರಗುಳಿದು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್ ಮಾಡಿದ್ದ ರೋಹಿತ್ ಶರ್ಮಾ, ಇಂದಿನ ಪಂದ್ಯಕ್ಕೆ ಸಂಪೂರ್ಣವಾಗಿ ಫಿಟ್ ಆಗಿದ್ದು, ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ತಂಡದ ಪ್ರಮುಖ ವೇಗದ ಬೌಲರ್ ಜೋಫ್ರಾ ಆರ್ಚರ್ ಇನ್ನೂ ಫಿಟ್ ಆಗಿಲ್ಲ, ಅವರು ಇಂದಿನ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.
ತಂಡದ ಪ್ರಮುಖ ಬ್ಯಾಟರ್ ಸೂರ್ಯಕುಮಾರ್ ಯಾದವ್ ಫಾರ್ಮ್‌ಗೆ ಮರಳಿರುವುದು ತಂಡಕ್ಕೆ ಹೆಚ್ಚಿನ ಬಲ ತಂದುಕೊಟ್ಟಿದೆ, ಉಪ್ಪಾಳದಲ್ಲಿ ಸೂರ್ಯ ಅಬ್ಬರಿಸಿದರೆ, ಹೈದರಾಬಾದ್‌ನ ಗೆಲುವು ಕನಸಾಗಿ ಉಳಿಯಲಿದೆ. ಇಶಾನ್ ಕಿಶನ್ ಕೂಡ ಕೆಕೆಆರ್ ವಿರುದ್ಧ ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ ಎದುರಾಗಳಿಗೆ ಎಚ್ಚರಿಕೆ ನೀಡಿದ್ದಾರೆ. ಪಿಯೂಶ್ ಚಾವ್ಲಾ ಎಂತಹದ್ದೇ ಪಿಚ್ ಇದ್ರೂ ನಾನು ವಿಕೆಟ್ ಪಡೀತಿನಿ ಅನ್ನೋದನ್ನ ಈಗಾಗ್ಲೇ ಸಾಬೀತುಮಾಡಿದ್ದಾರೆ. ಎಸ್‌ಆರ್ ಎಚ್ ತಂಡಕ್ಕೆ ಇವರು ಕಂಟಕವಾದ್ರು ಅಚ್ಚರಿ ಪಡ್ಬೇಕಿಲ್ಲ.

ಮಯಾಂಕ್ ಅಗರ್ವಾಲ್‌ಗೆ ಕೊನೆ ಅವಕಾಶ?
ಮತ್ತೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ ಕೂಡ ಮುಂಬೈಗೆ ಸವಾಲಾಕಲು ಸಜ್ಜಾಗಿದೆ. ಕೆಕೆಆರ್ ವಿರುದ್ಧ ಹ್ಯಾರಿ ಬ್ರೂಕ್ ಶತಕ ಸಿಡಿಸಿ ಮಿಂಚಿದ್ದರು. ನಾಯಕ ಐಡೆನ್ ಮಾರ್ಕ್ರಾಮ್ ಕೂಡ ಅರ್ಧಶತಕ ಗಳಿಸುವ ಮೂಲಕ ತಂಡದ ಬ್ಯಾಟಿಂಗ್‌ಗೆ ಹೆಚ್ಚಿನ ಬಲ ಬಂದಂತಾಗಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್ ಮಾತ್ರ ತಮಗೆ ಸಿಕ್ಕ ಅವಕಾಶ ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ, ಇಂದಿನ ಪಂದ್ಯದಲ್ಲಿ ಕೂಡ ಅವರು ರನ್ ಗಳಿಸದೇ ಇದ್ದರೆ, ಮುಂದಿನ ಪಂದ್ಯದಲ್ಲಿಅವಕಾಶ ಸಿಗೋದು ಅನುಮಾನವಾಗಿದೆ.
ತಂಡದ ಬೌಲಿಂಗ್ ವಿಭಾಗ ಅತ್ಯುತ್ತಮವಾಗಿದೆ ಮಯಾಂಕ್ ಮಾರ್ಕಂಡೆ ಆಡಿರುವ ಎರಡೂ ಪಂದ್ಯಗಳಲ್ಲಿ ತಾನೆಂತಹ ಅಪಾಯಕಾರಿ ಬೌಲರ್ ಎನ್ನುವದನ್ನು ಸಾಬೀತು ಮಾಡಿದ್ದಾರೆ. ಇನ್ನು ಭುವನೇಶ್ವರ್ ಕುಮಾರ್, ಟಿ ನಟರಾಜನ್, ಕಾಶ್ಮೀರದ ಎಕ್ಸ್‌ಪ್ರೆಸ್ ಉಮ್ರಾನ್ ಮಲಿಕ್ ಎದುರಾಳಿಗಳನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಇವರೇನಾದ್ರು ತಮ್ಮ ಲಯ ಕಂಡುಕೊಂದ್ರೆ ಮುಂಬೈ ಬ್ಯಾಟಿಂಗ್ ಪಡೆ ಸೈಲೆಂಟ್ ಆಗೋದು ಖಂಡಿತ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications