Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SRH Vs RR: ಹೈದರಾಬಾದ್‌ನಲ್ಲಿ ಮುಳುಗಿದ ಸೂರ್ಯ: ರಾಯಲ್ ಆಗಿ ಗೆದ್ದ ರಾಜಸ್ಥಾನ!

ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಸಂಜು ಸ್ಯಾಮ್ಸನ್ ಪಡೆಯ ಅಬ್ಬರಕ್ಕೆ ಸನ್‌ರೈಸರ್ಸ್ ಹೈದರಾಬಾದ್ ಕಂಗಾಲಾಗಿದೆ. ರಾಜಸ್ಥಾನ ರಾಯಲ್ಸ್ ಐಪಿಎಲ್ 2023ರ ಆವೃತ್ತಿಯ ತಮ್ಮ ಮೊದಲನೇ ಪಂದ್ಯದಲ್ಲೇ 72 ರನ್‌ಗಳ ಬೃಹತ್ ಜಯ ದಾಖಲಿಸಿದೆ. ಬ್ಯಾಟಿಂಗ್‌ನಲ್ಲಿ ಬಟ್ಲರ್, ಜೈಸ್ವಾಲ್, ಸ್ಯಾಮ್ಸನ್ ಅಬ್ಬರಿಸಿದರೆ, ಬೌಲಿಂಗ್‌ನಲ್ಲಿ ಬೌಲ್ಟ್, ಚಹಾಲ್ ಮೋಡಿ ಮಾಡಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ 20 5 ವಿಕೆಟ್ ಕಳೆದುಕೊಂಡು 203 ರನ್ ಗಳಿಸಿತು. ಕಳೆದ ಸೀಸನ್‌ನಲ್ಲಿ ಫೈನಲ್ ತಲುಪಿ ಚಾಂಪಿಯನ್ ಆಗುವಲ್ಲಿ ಸೋತಿದ್ದ ರಾಜಸ್ಥಾನ ರಾಯಲ್ಸ್ ಈ ಬಾರಿ ಆವೃತ್ತಿಯನ್ನು ಭಾರಿ ಜಯದ ಮೂಲಕ ಆರಂಭಿಸಿದೆ. ಕಳೆದ ಆವೃತ್ತಿಯಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದ ಜೋಸ್ ಬಟ್ಲರ್ ಅದೇ ಆಟವನ್ನು ಇಂದಿನ ಪಂದ್ಯದಲ್ಲಿ ಮುಂದುವರೆಸಿದರು.

SRH Vs RR

ಕೇವಲ 22 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್ ಸಹಿತ 54 ರನ್ ಗಳಿಸಿದರು. ಪವರ್ ಪ್ಲೇನಲ್ಲಿ ಅರ್ಧಶತಕ ಗಳಿಸುವ ಮೂಲಕ ರಾಜಸ್ಥಾನ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಯುವ ಬ್ಯಾಟರ್ ಯಶಸ್ವೀ ಜೈಸ್ವಾಲ್ ಕೂಡ ಇವರಿಗೆ ಉತ್ತಮವಾಗಿ ಜೊತೆಯಾದರು. ಈ ಜೋಡಿ 6 ಓವರ್ ಗಳಲ್ಲೇ 85 ರನ್ ಗಳಿಸಿದರು. ಬಟ್ಲರ್ ಅರ್ಧಶತಕ ಗಳಿಸಿ ಔಟಾದ ಬಳಿಕ, ಜೈಸ್ವಾಲ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಅತ್ಯುತ್ತಮ ಜೊತೆಯಾಟ ಆಡಿದರು.

ಸಂಜು ಸ್ಯಾಮ್ಸನ್ 32 ಎಸೆತಗಳಲ್ಲಿ 3 ಬೌಂಡರಿ 4 ಸಿಕ್ಸರ್ ಸಹಿತ 55 ರನ್ ಗಳಿಸಿದರೆ, ಯಶಸ್ವೀ ಜೈಸ್ವಾಲ್ 37 ಎಸೆತಗಳಲ್ಲಿ 9 ಬೌಂಡರಿ ಸಹಿತ 37 ರನ್ ಗಳಿಸಿದರು. ದೇವದತ್ ಪಡಿಕ್ಕಲ್ 2 ರನ್ ಗಳಿಸಿ ಔಟಾದರೆ, ರಿಯಾನ್ ಪರಾಗ್ ಕೂಡ 7 ರನ್ ಗಳಿಸಿ ಔಟಾದರು. ಅಂತಿಮ ಓವರ್ ಗಳಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡಿದ ಶಿಮ್ರಾನ್ ಹೆಟ್ಮೇರ್ 16 ಎಸೆತಗಳಲ್ಲಿ ಅಜೇಯ 22 ರನ್ ಗಳಿಸಿದರು. ಅಶ್ವಿನ್ ಕೇವಲ ಒಂದು ರನ್ ಗಳಿಸಿ ಅಜೇಯರಾಗಿ ಉಳಿದರು. ಫಜಲಕ್ ಫಾರ್‍ಹೂಕಿ ಮತ್ತು ಟಿ ನಟರಾಜನ್ ತಲಾ 2 ವಿಕೆಟ್ ಪಡೆದರೆ, ಉಮ್ರಾನ್ ಮಲಿಕ್ ಒಂದು ವಿಕೆಟ್ ಪಡೆದರು.

ಟ್ರೆಂಟ್ ಬೌಲ್ಟ್, ಚಹಾಲ್ ಮೋಡಿ

204 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಟ್ರೆಂಟ್ ಬೌಲ್ಟ್ ಆಘಾತ ನೀಡಿದರು. ಮೊದಲನೇ ಓವರ್ ನಲ್ಲೇ ಅಭಿಷೇಕ್ ಶರ್ಮಾ ಮತ್ತು ರಾಹುಲ್ ತ್ರಿಪಾಠಿ ಅವರ ವಿಕೆಟ್ ಪಡೆದರು. ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಸನ್‌ರೈಸರ್ಸ್ ನಂತರ ಯಾವುದೇ ಪ್ರತಿರೋಧವನ್ನು ತೋರಲಿಲ್ಲ. ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ 21 ಎಸೆತಗಳಲ್ಲಿ 13 ರನ್ ಗಳಿಸಿ ಚಹಾಲ್‌ಗೆ ವಿಕೆಟ್ ಒಪ್ಪಿಸಿದರು. ಮಯಾಂಕ್ ಅಗರ್ವಾಲ್ 23 ಎಸೆತಗಳಲ್ಲಿ 27 ರನ್ ಗಳಿಸಿ ಔಟಾದರು.

ವಾಷಿಂಗ್ಟನ್ ಸುಂದರ್ 1 ರನ್ ಗಳಿಸಿದರೆ, ಗ್ಲೆನ್ ಫಿಲಿಪ್ಸ್ 8 ರನ್ ಗಳಿಸಿದರು. ಆದಿಲ್ ರಶೀದ್ 18 ಮತ್ತು ಭುವನೇಶ್ವರ್ ಕುಮಾರ್ ಕೇವಲ 6 ರನ್ ಗಳಿಸಿ ಔಟಾದರು. ಅಬ್ದುಲ್ ಸಮದ್ 32 ಎಸೆತಗಳಲ್ಲಿ ಅಜೇಯ 32 ರನ್ ಗಳಿಸಿದರೆ, ಉಮ್ರಾನ್ ಮಲಿಕ್ 8 ಎಸೆತಗಳಲ್ಲಿ 19 ರನ್ ಗಳಿಸಿದರು. 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 131 ರನ್ ಗಳಿಸಿತು. ಟ್ರೆಂಟ್ ಬೌಲ್ಟ್ 4 ಓವರ್ ಗಳಲ್ಲಿ 21 ರನ್ ನೀಡಿ 2 ವಿಕೆಟ್ ಪಡೆದರು, ಯುಜುವೇಂದ್ರ ಚಹಾಲ್ 4 ಓವರ್ ಗಳಲ್ಲಿ 17 ನ್ ನೀಡಿ 4 ವಿಕೆಟ್ ಪಡೆದರು.

SRH Vs RR

ಉಭಯ ತಂಡಗಳ ಆಡುವ ಬಳಗ

ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ), ದೇವದತ್ ಪಡಿಕ್ಕಲ್, ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಕೆಎಂ ಆಸಿಫ್, ಯುಜ್ವೇಂದ್ರ ಚಹಾಲ್. ಇಂಪ್ಯಾಕ್ಟ್ ಪ್ಲೇಯರ್: ಧ್ರುವ್ ಜುರೆಲ್, ಸಂದೀಪ್ ಶರ್ಮಾ, ಮುರುಗನ್ ಅಶ್ವಿನ್, ನವದೀಪ್ ಸೈನಿ, ಡೊನೆವೆನ್ ಫೆರೈರಾ.

ಸನ್ ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಹ್ಯಾರಿ ಬ್ರೂಕ್, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್(ವಿಕೆಟ್ ಕೀಪರ್), ಉಮ್ರಾನ್ ಮಲಿಕ್, ಆದಿಲ್ ರಶೀದ್, ಭುವನೇಶ್ವರ್ ಕುಮಾರ್(ನಾಯಕ), ಟಿ ನಟರಾಜನ್, ಫಜಲ್ಹಕ್ ಫಾರೂಕಿ. ಇಂಪ್ಯಾಕ್ಟ್ ಪ್ಲೇಯರ್: ಅಬ್ದುಲ್ ಸಮದ್, ವಿವ್ರಾಂತ್ ಶರ್ಮಾ, ಮಾಯಂಕ್ ಡಾಗರ್, ಉಪೇಂದ್ರ ಯಾದವ್, ಮಯಾಂಕ್ ಮಾರ್ಕಂಡೆ.

Story first published: Sunday, April 2, 2023, 19:38 [IST]
Other articles published on Apr 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+