Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SRH Vs RR: ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಬೌಲಿಂಗ್ ಆಯ್ಕೆ: ಪ್ಲೇಯಿಂಗ್ 11, ಪಿಚ್ ವರದಿ

ಹೈದರಾಬಾದ್‌ನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2023ರ 4ನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಸನ್‌ರೈಸರ್ಸ್ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಅನುಪಸ್ಥಿತಿಯಲ್ಲಿ ಭುವನೇಶ್ವರ್ ಕುಮಾರ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಮೂರು ವರ್ಷಗಳ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ತವರಿನಲ್ಲಿ ಮೊದಲ ಬಾರಿಗೆ ಪಂದ್ಯವನ್ನಾಡಲು ಸಜ್ಜಾಗಿದ್ದು, ಗೆಲುವಿನ ಮೂಲಕ ಐಪಿಎಲ್ ಅಭಿಯಾನ ಆರಂಭಿಸುವ ಉತ್ಸಾಹದಲ್ಲಿದೆ.

ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಪಿಚ್ ಬ್ಯಾಟರ್ ಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿರುವುದಾಗಿ ಎಸ್ಆರ್ ಹೆಚ್ ತಂಡದ ನಾಯಕ ಭುವನೇಶ್ವರ್ ಕುಮಾರ್ ಹೇಳಿದರು. ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿರುವುದರಿಂದ ದೊಡ್ಡ ಮೊತ್ತವನ್ನು ಕೂಡ ಚೇಸಿಂಗ್ ಮಾಡುವ ವಿಶ್ವಾಸದಲ್ಲಿದೆ ಸನ್‌ರೈಸರ್ಸ್ ಹೈದರಾಬಾದ್ ತಂಡ.

SRH Vs RR

ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಫಜಲ್ಹಕ್ ಫಾರೂಕಿ, ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್, ಆದಿಲ್ ರಶೀದ್ ಮತ್ತು ಗ್ಲೆನ್ ಫಿಲಿಪ್ಸ್ ಪದಾರ್ಪಣೆ ಮಾಡಲು ಸಿದ್ಧವಾಗಿದ್ದಾರೆ. ಇಂಗ್ಲೆಂಡ್‌ನ ಯುವ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅತ್ಯುತ್ತಮ ಫಾರ್ಮ್‌ನಲ್ಲಿರುವ ಅವರು ತಮ್ಮ ಮೇಲಿಟ್ಟಿರುವ ನಿರೀಕ್ಷೆಯನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಉತ್ತಮ ಪ್ರದರ್ಶನ ನೀಡುತ್ತಾ ರಾಜಸ್ಥಾನ ರಾಯಲ್ಸ್

ಕಳೆದ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ರಾಜಸ್ಥಾನ ರಾಯಲ್ಸ್ ಅದೇ ಪ್ರದರ್ಶನವನ್ನು ಮುಂದುವರೆಸುವ ವಿಶ್ವಾಸದಲ್ಲಿದೆ. ಜೇಸನ್ ಹೋಲ್ಡರ್ ಮತ್ತು ಕೆಎಂ ಆಸಿಫ್ ಮೊದಲ ಬಾರಿಗೆ ರಾಜಸ್ಥಾನ ರಾಯಲ್ಸ್ ಪರವಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಜೋಸ್ ಬಟ್ಲರ್ ತಂಡದ ಪ್ರಮುಖ ಬ್ಯಾಟರ್ ಆಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸುವ ಮಿಂಚಿದ್ದ ಅವರು ತಮ್ಮ ಉತ್ತಮ ಬ್ಯಾಟಿಂಗ್ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.

SRH Vs RR

ಉಭಯ ತಂಡಗಳ ಆಡುವ ಬಳಗ

ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ), ದೇವದತ್ ಪಡಿಕ್ಕಲ್, ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಕೆಎಂ ಆಸಿಫ್, ಯುಜ್ವೇಂದ್ರ ಚಹಾಲ್. ಇಂಪ್ಯಾಕ್ಟ್ ಪ್ಲೇಯರ್: ಧ್ರುವ್ ಜುರೆಲ್, ಸಂದೀಪ್ ಶರ್ಮಾ, ಮುರುಗನ್ ಅಶ್ವಿನ್, ನವದೀಪ್ ಸೈನಿ, ಡೊನೆವೆನ್ ಫೆರೈರಾ.

ಸನ್ ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಹ್ಯಾರಿ ಬ್ರೂಕ್, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್(ವಿಕೆಟ್ ಕೀಪರ್), ಉಮ್ರಾನ್ ಮಲಿಕ್, ಆದಿಲ್ ರಶೀದ್, ಭುವನೇಶ್ವರ್ ಕುಮಾರ್(ನಾಯಕ), ಟಿ ನಟರಾಜನ್, ಫಜಲ್ಹಕ್ ಫಾರೂಕಿ. ಇಂಪ್ಯಾಕ್ಟ್ ಪ್ಲೇಯರ್: ಅಬ್ದುಲ್ ಸಮದ್, ವಿವ್ರಾಂತ್ ಶರ್ಮಾ, ಮಾಯಂಕ್ ಡಾಗರ್, ಉಪೇಂದ್ರ ಯಾದವ್, ಮಯಾಂಕ್ ಮಾರ್ಕಂಡೆ.

Story first published: Sunday, April 2, 2023, 15:22 [IST]
Other articles published on Apr 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+