IPL 2023: 2023ರ ಐಪಿಎಲ್ ಪ್ರೋಮೊ ಬಿಡುಗಡೆ ಮಾಡಿದ ಸ್ಟಾರ್ ಸ್ಪೋರ್ಟ್ಸ್

ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಗಾಗಿ ಒಂದು ತಿಂಗಳಿಗಿಂತ ಕಡಿಮೆ ಸಮಯ ಇದೆ. ಸ್ಟಾರ್ ಸ್ಪೋರ್ಟ್ ಈಗಾಗಲೇ ಐಪಿಎಲ್‌ಗಾಗಿ ಪ್ರಚಾರ ಆರಂಭಿಸಿದೆ. 2023 ಐಪಿಎಲ್ ಅಧಿಕೃತ ಪ್ರೋಮೊವನ್ನು ಬಿಡುಗಡೆ ಮಾಡಿದೆ.
ಪ್ರೋಮೊದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ, ಗುಜರಾತ್ ಜೈಂಟ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಕಾಣಿಸಿಕೊಂಡಿದ್ದು, ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ಮಿಂಚಿದ್ದಾರೆ. ಈ ವರ್ಷದ ಐಪಿಎಲ್‌ಗೆ ಶಾರ್ ಆನ್, ಗೇಮ್ ಆನ್ ಎಂಬ ಅಡಿಬರಹ ಬಳಸಲಾಗಿದೆ.
ಸ್ಟಾರ್ ಸ್ಪೋರ್ಟ್ಸ್ ಐಪಿಎಲ್ ಪಂದ್ಯಗಳ ಅಧಿಕೃತ ಟೆಲಿವಿಷನ್ ಪ್ರಸಾಕರಾಗಿದ್ದಾರೆ. ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಐಪಿಎಲ್‌ನ ಕ್ರೇಜ್ ಅನ್ನು ಚಿತ್ರಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರೋಮೊವನ್ನು ಬಿಡುಗಡೆ ಮಾಡಿರುವ ಸ್ಟಾರ್ ಸ್ಪೋರ್ಟ್ಸ್ "#IPLonStar ವಾಪಸಾಗುತ್ತಿದೆ, ನಾವು ಶಾಂತವಾಗಿರಲು ಸಾಧ್ಯವಿಲ್ಲ! ನಿಮ್ಮ ಸ್ನೇಹಿತರು, ಕುಟುಂಬದೊಂದಿಗೆ ಒಟ್ಟಾಗಿ ಸೇರಿ ನಿಮ್ಮ ಟಿವಿಗಳನ್ನು ಆನ್ ಮಾಡಿ" ಎಂದು ಬರೆದುಕೊಂಡಿದೆ.
ಅದ್ದೂರಿಯಾಗಿ ಹಾಡಿನ ಚಿತ್ರಣ
ಸಾಕಷ್ಟು ಅದ್ದೂರಿಯಿಂದ ಪ್ರೋಮೋವನ್ನು ಚಿತ್ರಿಸಲಾಗಿದೆ. ಐಪಿಎಲ್ ಪಂದ್ಯಗಳನ್ನು ಒಟ್ಟಿಗೆ ವೀಕ್ಷಿಸಲು ಅಭಿಮಾನಿಗಳು ತಮ್ಮ ಮನೆಗಳಿಂದ ಹೊರಬರುತ್ತಿರುವುದನ್ನು ನೋಡಬಹುದು. ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್‌ರ ಕಟೌಟ್‌ಗಳನ್ನು ಹೊತ್ತೊಯ್ಯುವುದನ್ನು ಸಹ ಕಾಣಬಹುದು. ಅಭಿಮಾನಿಗಳು ರಂಜನೆಗಾಗಿ, ಕಟೌಟ್‌ಗಳು ಜೀವ ಪಡೆದುಕೊಳ್ಳುತ್ತವೆ, ಅಭಿಮಾನಿಗಳ ಸಂಭ್ರಮದಲ್ಲಿ ಮೂವರು ಕ್ರಿಕೆಟ್ ತಾರೆಗಳು ಪಾಲ್ಗೊಳ್ಳುತ್ತಾರೆ.
ಸ್ಟಾರ್ ಸ್ಪೋರ್ಟ್ಸ್ ಐಪಿಎಲ್‌ಗೆ ಮುಂಚಿತವಾಗಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ ಸೇರಿದಂತೆ ಪ್ರಮುಖ ಆಟಗಾರರನ್ನು ಒಳಗೊಂಡ ಮುಂದಿನ ಭಾಗವನ್ನು ಬಿಡುಗಡೆ ಮಾಡಲಿದೆ.
ಮಾರ್ಚ್ 31ರಿಂದ ಐಪಿಎಲ್‌ಗೆ ಅದ್ದೂರಿ ಚಾಲನೆ ಸಿಗಲಿದೆ. ಮೊದಲನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣೆಸಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.
ಈ ಬಾರಿಯ ಐಪಿಎಲ್ ಸಾಂಪ್ರದಾಯಿಕ ಶೈಲಿಗೆ ಮರಳಿದೆ. ತವರಿನಲ್ಲಿ ಎಲ್ಲಾ ತಂಡಗಳು ಪಂದ್ಯಗಳನ್ನಾಡಲಿವೆ. 10 ತಂಡಗಳು ಪ್ರತಿಷ್ಠಿತ ಕಪ್‌ಗಾಗಿ ಸೆಣೆಸಲಿವೆ. ಮೇ ಅಂತ್ಯಕ್ಕೆ ಫೈನಲ್ ಪಂದ್ಯ ನಡೆಯಲಿದ್ದು, ಬಿಸಿಸಿಐ ಇನ್ನೂ ಪ್ಲೇ ಆಫ್, ಫೈನಲ್ ಪಂದ್ಯಗಳ ವಿವರಗಳನ್ನು ಬಿಡುಗಡೆ ಮಾಡಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications