Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಐಡೆನ್ ಮಾರ್ಕ್ರಮ್ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ನೂತನ ನಾಯಕ

IPL 2023: Sunrisers Hyderabad announced Aiden Markram as new skipper for upcoming season

ಐಪಿಎಲ್‌ನ ಪ್ರಮುಖ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಮುಂಬರುವ ಐಪಿಎಲ್‌ ಆವೃತ್ತಿಗಾಗಿ ಹೊಸ ನಾಯಕನನ್ನು ನೇಮಿಸಿದೆ. ದಕ್ಷಿಣ ಆಫ್ರಿಕಾ ಆಟಗಾರ ಐಡೆನ್ ಮಾರ್ಕ್ರಮ್ ಅವರನ್ನು 2023ರ ಆವೃತ್ತಿಗೂ ಮುನ್ನ ನೂತನ ನಾಯಕನನ್ನಾಗಿ ಆಯ್ಕೆ ಮಾಡಲಾಗಿದ್ದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ದಕ್ಷಿಣ ಆಫ್ರಿಕಾದ ಎಸ್‌ಎ20 ಲೀಗ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮಾಲೀಕತ್ವ ಹೊಂದಿರುವ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡವನ್ನು ಮೊದಲ ಆವೃತ್ತಿಯಲ್ಲಿ ಮುನ್ನಡೆಸಿದ್ದ ಐಡೆನ್ ಮಾರ್ಕ್ರಮ್ ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಈ ಅದ್ಭುತ ಯಶಸ್ಸಿನ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯನನ್ನಾಗಿಯೂ ಐಡೆನ್ ಮಾರ್ಕ್ರಮ್ ಅವರನ್ನೇ ನೇಮಕಗೊಳಿಸಲು ಎಸ್‌ಆರ್‌ಹೆಚ್ ತೀರ್ಮಾನಿಸಿ ಈ ಕ್ರಮ ಕೈಗೊಂಡಿದೆ.

ಕಳೆದ ಮೂರು ಆವೃತ್ತಿಗಳಲ್ಲಿ ಕೇನ್ ವಿಲಿಯಮ್ಸನ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ನಾಯಕನನ್ನಾಗಿ ಮುನ್ನಡೆಸಿದ್ದರು. ಆದರೆ ಮುಂದಿನ ಆವೃತ್ತಿಗೂ ಮುನ್ನ ನಡೆದ ಹರಾಜು ಪ್ರಕ್ರಿಯೆಗೆ ಮುನ್ನ ಕೇನ್ ವಿಲಿಯಮ್ಸನ್ ಅವರನ್ನು ಎಸ್‌ಆರ್‌ಹೆಚ್ ಫ್ರಾಂಚೈಸಿ ತಂಡದಿಂದ ಕೈಬಿಟ್ಟಿದ್ದು ಕೇನ್ ಗುಜರಾತ್ ಟೈಟನ್ಸ್ ತಂಡದ ಪಾಲಾಗಿದ್ದಾರೆ. ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವಕ್ಕಾಗಿ ಮಯಾಂಕ್ ಅಗರ್ವಾಲ್ ಅಜಿಂಕ್ಯಾ ರಹಾನೆ ಮೊದಲಾದ ಸ್ಟಾರ್ ಆಟಗಾರರು ಸ್ಪರ್ಧೆಯಲ್ಲಿದ್ದರು. ಆದರೆ ಎಸ್‌ಆರ್‌ಹೆಚ್ ಫ್ರಾಂಚೈಸಿ ದಕ್ಷಿಣ ಆಫ್ರಿಕಾದ ಆಟಗಾರನ ಮೇಲೆ ಭರವಸೆಯಿಟ್ಟಿದೆ.

ಐಡೆನ್ ಮಾರ್ಕ್ರಮ್ ಕಳೆದ ಐಪಿಎಲ್ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಆಡಿದ 14 ಪಂದ್ಯಗಳಲ್ಲಿ 381 ರನ್‌ಗಳನ್ನು ಗಳಿಸಿದ್ದು 47.63ರ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿದ್ದರು. ಇನ್ನು ಸನ್‌ರೈಸರ್ಸ್ ಈಸ್ಟರ್ನ್‌ ಕೇಪ್ ಪರವಾಗಿ ಸೆಮಿಫೈನಲ್‌ನಲ್ಲಿ ಜೋಹನ್ಸ್‌ಬರ್ಗ್ ಸೂಪರ್ ಕಿಂಗ್ಸ್ ಪರವಾಗಿ ಶತಕ ಸಿಡಿಸಿ ಫೈನಲ್‌ಗೇರಲು ಕಾರಣವಾಗಿದ್ದರು. ಫೈನಲ್‌ನಲ್ಲಿ ಪ್ರಿಟೋರಿಯ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಸನ್‌ರೈಸರ್ಸ್ ಈಸ್ಟರ್ನ್‌ ಕೇಪ್ ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ಶೀಘ್ರ ಘೋಷಣೆ ಸಾಧ್ಯತೆ: ಇನ್ನು ಐಪಿಎಲ್‌ನ ಮತ್ತೊಂದು ತಂಡವಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಈ ಬಾರಿಯ ಆವೃತ್ತಿಯಲ್ಲಿ ನೂತನ ನಾಯಕನ ನೇತೃತ್ವದಲ್ಲಿ ಕಣಕ್ಕಿಳಿಯಲಿದೆ. ರಿಷಭ್ ಪಂತ್ ಈ ಬಾರಿಯ ಐಪಿಎಲ್‌ಗೆ ಅಲಭ್ಯವಾಗಿರುವ ಕಾರಣ ಹೊಸ ನಾಯಕನ ಹುಡುಕಾಟದಲ್ಲಿದೆ ಡಿಸಿ ಫ್ರಾಂಚೈಸಿ. ಆಸ್ಟ್ರೇಲಿಯಾದ ಅನುಭವಿ ಆಟಗಾರ ಡೇವಿಡ್ ವಾರ್ನರ್ ಅವರನ್ನು ಮುಂದಿನ ಆವರತ್ತಿಗೆ ನಾಯಕ ಎಂದು ಘೋಷಿಸುವ ಸಾಧ್ಯತೆಯಿದೆ.

Story first published: Thursday, February 23, 2023, 17:16 [IST]
Other articles published on Feb 23, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+