Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಲ್ಲಿ ಧೋನಿಗೆ ನೆರವಾಗಲಿದ್ದಾರೆ ಜಡೇಜಾ: ಸುರೇಶ್ ರೈನಾ

IPL 2023: Suresh Raina said all-rounder Ravindra Jadeja will prove to be a great support to MS Dhoni at CSK

ಐಪಿಎಲ್ ಟೂರ್ನಿಯ ಮುಂಬರುವ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ರವೀಂದ್ರ ಜಡೇಜಾ ನಾಯಕ ಎಂಎಸ್ ಧೋನಿಗೆ ದೊಡ್ಡ ಬೆಂಬಲವಾಗಲಿದ್ದಾರೆ ಎಂದು ಸುರೇಶ್ ರೈನಾ ಭರವಸೆ ವ್ಯಕ್ತಪಡಿಸಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಈ ಹಿಂದೆಯೂ ಅದ್ಭುತ ಪ್ರದರ್ಶನ ನಿಡಿರುವ ರವೀಂದ್ರ ಜಡೇಜಾ ಮುಂದಿನ ಆವೃತ್ತಿಯಲ್ಲಿ ನಾಯಕ ಎಂಎಸ್ ಧೋನಿಗೆ ತಾನು ದೊಡ್ಡ ಬಲ ಎಂಬುದನ್ನು ಸಾಬೀತುಪಡಿಸಲಿದ್ದಾರೆ ಎಂದಿದ್ದಾರೆ.

"ಸರ್ ಜಡೇಜಾ ಅವರು ಬ್ಯಾಟ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ. ಎಂಎಸ್ ಧೋನಿಗೆ ಉತ್ತಮ ಬೆಂಬಲ ಎಂಬುದನ್ನು ಅವರು ಸಾಬೀತುಪಡಿಸಲಿದ್ದಾರೆ. ಅವರು ಅದ್ಭುತವಾಗಿ ರಿಹ್ಯಾಬ್‌ನಲ್ಲಿ ಭಾಗುಯಾಗಿದ್ದು ಬಲಿಷ್ಠವಾಗಿ ಹಾಗೂ ದೈಹಿಕವಾಗಿಯೂ ಸಮರ್ಥವಾಗಿ ಕಂಡುಬರುತ್ತಿದ್ದಾರೆ" ಎಂದಿದ್ದಾರೆ ಸುರೇಶ್ ರೈನಾ.

ಇನ್ನು ಇದೇ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಬಗ್ಗೆಯೂ ವಿಶ್ವಾಸದ ಮಾತುಗಳನ್ನಾಡಿದ್ದಾರೆ. "ಋತುರಾಜ್ ಚೆಪಾಕ್‌ನ್ಲಲಿ ಮೊದಲ ಪಂದ್ಯವನ್ನಾಡಲಿದ್ದಾರೆ. ಆತನೋರ್ವ ಅದ್ಭುತವಾದ ಆಟಗಾರನಾಗಿದ್ದು ಖಂಡಿತವಾಗಿಯೂ ಉತ್ತಮ ಪ್ರದರ್ಶನ ನೀಡಲಿದ್ದಾರೆ. ಎಂಎಸ್ ಧೋನಿ ಕೂಡ ಚೆಪಾಕ್‌ಗೆ ತೆರಳಿ ಅಭಿಮಾನಿಗಳೊಂದಿಗೆ ಕಾಲ ಕಳೆಯಲು ಎದುರುನೋಡುತ್ತಿದ್ದಾರೆ. ಇದು ಸಾಕಷ್ಟು ಉತ್ಸುಕವಾಗಿದ್ದು ನಾವು ಅಲ್ಲಿ ಗೆಲುವಿನೊಂದಿಗೆಆರಂಭಿಸುವ ವಿಶ್ವಾಸವಿದೆ" ಎಂದಿದ್ದಾರೆ ಸುರೇಶ್ ರೈನಾ.

ಇನ್ನು ಈ ಸಂದರ್ಭದಲ್ಲಿ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೆ ಚೆಪಾಕ್ ಸ್ಟೇಡಿಯಂನಲ್ಲಿ ಆಡಲು ಸಜ್ಜಾಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಂಡದ ಸಾಧನೆಗೆ ಅಭಿಮಾನಿಗಳು ಹರ್ಷಗೊಂಡಿರುತ್ತಾರೆ ಎಂಬ ವಿಶ್ವಾಸವನ್ನು ಕೂಡ ವ್ಯಕ್ತಪಡಿಸಿದ್ದಾರೆ.

"ಸುದೀರ್ಘ ಕಾಲದ ಬಳಿಕ ನಾವು ಮತ್ತೆ ಅಭಿಮಾನಿಗಳ ಮುಂದೆ ಆಡಲು ಸಾಧ್ಯವಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಈ ನಾಲ್ಕು ವರ್ಷಗಳಖ ಅವಧಿಯಲ್ಲಿ ದುಬೈನಲ್ಲಿ ನಾವು ಟ್ರೋಫಿಯನ್ನು ಗೆದ್ದಿದ್ದೇವೆ. ತವರಿಗಿಂತ ಆಚೆಯಿದ್ದರೂ ಈ ಸಾಧನೆ ಮಾಡಿರುವುದಕ್ಕೆ ಅಭಿಮಾನಿಗಳು ಹರ್ಷಗೊಂಡಿರುತ್ತಾರೆ" ಎಂದಿದ್ದಾರೆ ಸುರೇಶ್ ರೈನಾ.

2023ರ ಆವೃತ್ತಿಯ ಐಪಿಎಲ್ ಆವೃತ್ತಿ ಮಾರ್ಚ್ 31ರಿಂದ ಆರಂಭವಾಗಲಿದ್ದು ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.

Story first published: Tuesday, February 21, 2023, 17:52 [IST]
Other articles published on Feb 21, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+