For Quick Alerts
ALLOW NOTIFICATIONS  
For Daily Alerts
 

IPL 2023: ಟೂರ್ನಿ ಮುಗಿದ ಬಳಿಕ ಈ 5 ಯುವ ಆಟಗಾರರು ಟೀಮ್ ಇಂಡಿಯಾ ಸೇರುವುದು ಪಕ್ಕಾ!

ಟೀಮ್ ಇಂಡಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಲಭಿಸಲು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸರಿಯಾದ ವೇದಿಕೆ ಎಂಬ ಮಾತುಗಳಿವೆ ಹಾಗೂ ಈ ಮಾತು ಅನೇಕ ಬಾರಿ ನಿಜವಾಗಿದೆ ಕೂಡ. ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿದ ಆಧಾರದ ಮೇಲೆ ಹಲವರಿಗೆ ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶ ಲಭಿಸಿದೆ. ಸದ್ಯ ಟೀಮ್ ಇಂಡಿಯಾದಲ್ಲಿರುವ ಅನೇಕ ಯುವ ಆಟಗಾರರು ಇದೇ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ತಂಡ ಸೇರಿದವರೇ. ಅದೇ ರೀತಿ ಇದೀಗ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚುತ್ತಿರುವ ಹಲವು ಆಟಗಾರರು ಟೂರ್ನಿ ಮುಗಿದ ಬಳಿಕ ನೀಲಿ ಜೆರ್ಸಿ ತೊಟ್ಟು ಕಣಕ್ಕಿಳಿಯುವುದು ಪಕ್ಕಾ ಎಂಬ ಊಹೆಗಳಿವೆ. ಹೀಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳುವ ಅವಕಾಶ ಹೆಚ್ಚು ಹೊಂದಿರುವ ಐವರು ಆಟಗಾರರು ಯಾರು ಎಂಬ ಪಟ್ಟಿ ಈ ಕೆಳಕಂಡಂತಿದೆ.. 5. ತುಷಾರ್ ದೇಶಪಾಂಡೆ: ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ತುಷಾರ್ ದೇಶಪಾಂಡೆ ಇಲ್ಲಿಯವರೆಗೂ 8 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 14 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ದೀಪಕ್ ಚಾಹರ್ ಸ್ಥಾನವನ್ನು ಬೌಲರ್ ಆಗಿ ತುಂಬುವಲ್ಲಿ ಯಶಸ್ವಿಯಾಗುತ್ತಿರುವ ತುಷಾರ್ ದೇಶಪಾಂಡೆ ಟೂರ್ನಿ ಮುಗಿದ ಬಳಿಕ ಟೀಮ್ ಇಂಡಿಯಾದಿಂದ ಕರೆ ಸ್ವೀಕರಿಸುವ ಸಾಧ್ಯತೆಗಳಿವೆ. 4. ಯಶಸ್ವಿ ಜೈಸ್ವಾಲ್: ಕ್ರಿಕೆಟ್ ಕಲಿಯಲೆಂದು ಮುಂಬೈಗೆ ಬಂದು ಬೀದಿ ಬದಿಯಲ್ಲಿ ತಿನಿಸುಗಳನ್ನು ಮಾರಾಟ ಮಾಡಿ ಖರ್ಚನ್ನು ನಿಭಾಯಿಸುತ್ತಿದ್ದ ಯಶಸ್ವಿ ಜೈಸ್ವಾಲ್ ಈಗ ಐಪಿಎಲ್‌ನಲ್ಲಿ ತಮ್ಮದೇ ಹೆಸರನ್ನು ಮಾಡಿದ್ದಾರೆ. 2020ರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರ್ಪಡೆಗೊಂಡ ಯಶಸ್ವಿ ಜೈಸ್ವಾಲ್ ಈ ಬಾರಿಯ ಐಪಿಎಲ್‌ನಲ್ಲಿ ಅಕ್ಷರಶಃ ಮಿಂಚಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ 8 ಪಂದ್ಯಗಳನ್ನಾಡಿರುವ ಯಶಸ್ವಿ ಜೈಸ್ವಾಲ್ 304 ರನ್‌ಗಳನ್ನು ಗಳಿಸಿದ್ದಾರೆ. ಹೀಗೆ ಯಶಸ್ವಿ ಜೈಸ್ವಾಲ್ ಒಳ್ಳೆಯ ಎತ್ತರ ಕೂಡ ಇದ್ದು, ದೊಡ್ಡ ಹೊಡೆತ ಬಾರಿಸಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರನಾಗಿದ್ದಾರೆ. ಹೀಗೆ ಮಿಂಚುತ್ತಿರುವ ಯಶಸ್ವಿ ಜೈಸ್ವಾಲ್ ಶೀಘ್ರದಲ್ಲಿಯೇ ನೀಲಿ ಜರ್ಸಿ ತೊಡಲಿದ್ದಾರೆ. 3. ಸಾಯಿ ಸುದರ್ಶನ್: ತಮಿಳುನಾಡು ಪ್ರೀಮಿಯರ್ ಲೀಗ್ ಹಾಗೂ ದೇಸಿ ಕ್ರಿಕೆಟ್ ಟೂರ್ನಿಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಸಾಯಿ ಸುದರ್ಶನ್ ಅವರನ್ನು ಗುಜರಾತ್ ಟೈಟನ್ಸ್ ಖರೀದಿಸಿತ್ತು. ಕಳೆದ ಬಾರಿಯ ಹಾಗೂ ಈ ಬಾರಿಯ ಐಪಿಎಲ್ ಸೇರಿದಂತೆ ಒಟ್ಟು 10 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಸುದರ್ಶನ್ 321 ರನ್ ಗಳಿಸಿದ್ದಾರೆ. ಹೀಗೆ ಗಮನಾರ್ಹ ಪ್ರದರ್ಶನಗಳನ್ನು ನೀಡುತ್ತಿರುವ ಸಾಯಿ ಸುದರ್ಶನ್ ಬಿಸಿಸಿಐನಿಂದ ಕರೆ ಸ್ವೀಕರಿಸುವ ಸಾಧ್ಯತೆ ಹೆಚ್ಚಿದೆ. 2. ರಿಂಕು ಸಿಂಗ್: ರಿಂಕು ಸಿಂಗ್ ಸಹ ಬಡ ಕುಟುಂಬದಿಂದ ಬೆಳೆದು ಬಂದಿರುವ ಪ್ರತಿಭೆ. ಈ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಮಿಂಚಿ ಸ್ಪೋಟಕ ಆಟಗಾರ ಎನಿಸಿಕೊಂಡಿರುವ ರಿಂಕು ಸಿಂಗ್ 8 ಪಂದ್ಯಗಳಲ್ಲಿ 251 ರನ್‌ಗಳನ್ನು 158 ಸ್ಟ್ರೈಕ್ ರೇಟ್‌ನೊಂದಿಗೆ ಗಳಿಸಿದ್ದಾರೆ. ಅದರಲ್ಲಿಯೂ ಗುಜರಾತ್ ಟೈಟನ್ಸ್ ವಿರುದ್ಧ ಕೊನೆಯ ಐದು ಎಸೆತಗಳಲ್ಲಿ ಸತತವಾಗಿ ಸಿಕ್ಸರ್ ಚಚ್ಚಿ ಅಬ್ಬರಿಸಿದ್ದ ರಿಂಕು ಸಿಂಗ್ ಟೀಮ್ ಇಂಡಿಯಾ ಪ್ರವೇಶಿಸುವ ಭರವಸೆ ಮೂಡಿಸಿದ್ದಾರೆ. 1. ತಿಲಕ್ ವರ್ಮಾ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಿಂಕು ಸಿಂಗ್ ರೀತಿಯೇ ಹೆಚ್ಚು ಚರ್ಚೆಗೆ ಒಳಗಾಗಿರುವ ಆಟಗಾರನೆಂದರೆ ಅದು ತಿಲಕ್ ವರ್ಮಾ. ಕಳೆದ ವರ್ಷ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದು 400 ರನ್‌ಗಳವರೆಗೆ ಅಬ್ಬರಿಸಿದ್ದ ತಿಲಕ್ ವರ್ಮಾ ಈ ಬಾರಿ 7 ಪಂದ್ಯಗಳನ್ನಾಡಿ 219 ರನ್ ಗಳಿಸಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿ ಮುಗಿದ ಬಳಿಕ ಟೀಮ್ ಇಂಡಿಯಾ ಸೇರಬಹುದಾದ ಕೆಲ ಆಟಗಾರರ ಪೈಕಿ ತಿಲಕ್ ವರ್ಮಾ ಮುನ್ನಡೆಯಲ್ಲಿರಲಿದ್ದಾರೆ.

ಟೀಮ್ ಇಂಡಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಲಭಿಸಲು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸರಿಯಾದ ವೇದಿಕೆ ಎಂಬ ಮಾತುಗಳಿವೆ ಹಾಗೂ ಈ ಮಾತು ಅನೇಕ ಬಾರಿ ನಿಜವಾಗಿದೆ ಕೂಡ. ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿದ ಆಧಾರದ ಮೇಲೆ ಹಲವರಿಗೆ ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶ ಲಭಿಸಿದೆ.

ಸದ್ಯ ಟೀಮ್ ಇಂಡಿಯಾದಲ್ಲಿರುವ ಅನೇಕ ಯುವ ಆಟಗಾರರು ಇದೇ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ತಂಡ ಸೇರಿದವರೇ. ಅದೇ ರೀತಿ ಇದೀಗ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚುತ್ತಿರುವ ಹಲವು ಆಟಗಾರರು ಟೂರ್ನಿ ಮುಗಿದ ಬಳಿಕ ನೀಲಿ ಜೆರ್ಸಿ ತೊಟ್ಟು ಕಣಕ್ಕಿಳಿಯುವುದು ಪಕ್ಕಾ ಎಂಬ ಊಹೆಗಳಿವೆ.

ಹೀಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳುವ ಅವಕಾಶ ಹೆಚ್ಚು ಹೊಂದಿರುವ ಐವರು ಆಟಗಾರರು ಯಾರು ಎಂಬ ಪಟ್ಟಿ ಈ ಕೆಳಕಂಡಂತಿದೆ..

5. ತುಷಾರ್ ದೇಶಪಾಂಡೆ: ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ತುಷಾರ್ ದೇಶಪಾಂಡೆ ಇಲ್ಲಿಯವರೆಗೂ 8 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 14 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ದೀಪಕ್ ಚಾಹರ್ ಸ್ಥಾನವನ್ನು ಬೌಲರ್ ಆಗಿ ತುಂಬುವಲ್ಲಿ ಯಶಸ್ವಿಯಾಗುತ್ತಿರುವ ತುಷಾರ್ ದೇಶಪಾಂಡೆ ಟೂರ್ನಿ ಮುಗಿದ ಬಳಿಕ ಟೀಮ್ ಇಂಡಿಯಾದಿಂದ ಕರೆ ಸ್ವೀಕರಿಸುವ ಸಾಧ್ಯತೆಗಳಿವೆ.

4. ಯಶಸ್ವಿ ಜೈಸ್ವಾಲ್: ಕ್ರಿಕೆಟ್ ಕಲಿಯಲೆಂದು ಮುಂಬೈಗೆ ಬಂದು ಬೀದಿ ಬದಿಯಲ್ಲಿ ತಿನಿಸುಗಳನ್ನು ಮಾರಾಟ ಮಾಡಿ ಖರ್ಚನ್ನು ನಿಭಾಯಿಸುತ್ತಿದ್ದ ಯಶಸ್ವಿ ಜೈಸ್ವಾಲ್ ಈಗ ಐಪಿಎಲ್‌ನಲ್ಲಿ ತಮ್ಮದೇ ಹೆಸರನ್ನು ಮಾಡಿದ್ದಾರೆ. 2020ರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರ್ಪಡೆಗೊಂಡ ಯಶಸ್ವಿ ಜೈಸ್ವಾಲ್ ಈ ಬಾರಿಯ ಐಪಿಎಲ್‌ನಲ್ಲಿ ಅಕ್ಷರಶಃ ಮಿಂಚಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ 8 ಪಂದ್ಯಗಳನ್ನಾಡಿರುವ ಯಶಸ್ವಿ ಜೈಸ್ವಾಲ್ 304 ರನ್‌ಗಳನ್ನು ಗಳಿಸಿದ್ದಾರೆ. ಹೀಗೆ ಯಶಸ್ವಿ ಜೈಸ್ವಾಲ್ ಒಳ್ಳೆಯ ಎತ್ತರ ಕೂಡ ಇದ್ದು, ದೊಡ್ಡ ಹೊಡೆತ ಬಾರಿಸಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರನಾಗಿದ್ದಾರೆ. ಹೀಗೆ ಮಿಂಚುತ್ತಿರುವ ಯಶಸ್ವಿ ಜೈಸ್ವಾಲ್ ಶೀಘ್ರದಲ್ಲಿಯೇ ನೀಲಿ ಜರ್ಸಿ ತೊಡಲಿದ್ದಾರೆ.

3. ಸಾಯಿ ಸುದರ್ಶನ್: ತಮಿಳುನಾಡು ಪ್ರೀಮಿಯರ್ ಲೀಗ್ ಹಾಗೂ ದೇಸಿ ಕ್ರಿಕೆಟ್ ಟೂರ್ನಿಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಸಾಯಿ ಸುದರ್ಶನ್ ಅವರನ್ನು ಗುಜರಾತ್ ಟೈಟನ್ಸ್ ಖರೀದಿಸಿತ್ತು. ಕಳೆದ ಬಾರಿಯ ಹಾಗೂ ಈ ಬಾರಿಯ ಐಪಿಎಲ್ ಸೇರಿದಂತೆ ಒಟ್ಟು 10 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಸುದರ್ಶನ್ 321 ರನ್ ಗಳಿಸಿದ್ದಾರೆ. ಹೀಗೆ ಗಮನಾರ್ಹ ಪ್ರದರ್ಶನಗಳನ್ನು ನೀಡುತ್ತಿರುವ ಸಾಯಿ ಸುದರ್ಶನ್ ಬಿಸಿಸಿಐನಿಂದ ಕರೆ ಸ್ವೀಕರಿಸುವ ಸಾಧ್ಯತೆ ಹೆಚ್ಚಿದೆ.

2. ರಿಂಕು ಸಿಂಗ್: ರಿಂಕು ಸಿಂಗ್ ಸಹ ಬಡ ಕುಟುಂಬದಿಂದ ಬೆಳೆದು ಬಂದಿರುವ ಪ್ರತಿಭೆ. ಈ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಮಿಂಚಿ ಸ್ಪೋಟಕ ಆಟಗಾರ ಎನಿಸಿಕೊಂಡಿರುವ ರಿಂಕು ಸಿಂಗ್ 8 ಪಂದ್ಯಗಳಲ್ಲಿ 251 ರನ್‌ಗಳನ್ನು 158 ಸ್ಟ್ರೈಕ್ ರೇಟ್‌ನೊಂದಿಗೆ ಗಳಿಸಿದ್ದಾರೆ. ಅದರಲ್ಲಿಯೂ ಗುಜರಾತ್ ಟೈಟನ್ಸ್ ವಿರುದ್ಧ ಕೊನೆಯ ಐದು ಎಸೆತಗಳಲ್ಲಿ ಸತತವಾಗಿ ಸಿಕ್ಸರ್ ಚಚ್ಚಿ ಅಬ್ಬರಿಸಿದ್ದ ರಿಂಕು ಸಿಂಗ್ ಟೀಮ್ ಇಂಡಿಯಾ ಪ್ರವೇಶಿಸುವ ಭರವಸೆ ಮೂಡಿಸಿದ್ದಾರೆ.

1. ತಿಲಕ್ ವರ್ಮಾ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಿಂಕು ಸಿಂಗ್ ರೀತಿಯೇ ಹೆಚ್ಚು ಚರ್ಚೆಗೆ ಒಳಗಾಗಿರುವ ಆಟಗಾರನೆಂದರೆ ಅದು ತಿಲಕ್ ವರ್ಮಾ. ಕಳೆದ ವರ್ಷ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದು 400 ರನ್‌ಗಳವರೆಗೆ ಅಬ್ಬರಿಸಿದ್ದ ತಿಲಕ್ ವರ್ಮಾ ಈ ಬಾರಿ 7 ಪಂದ್ಯಗಳನ್ನಾಡಿ 219 ರನ್ ಗಳಿಸಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿ ಮುಗಿದ ಬಳಿಕ ಟೀಮ್ ಇಂಡಿಯಾ ಸೇರಬಹುದಾದ ಕೆಲ ಆಟಗಾರರ ಪೈಕಿ ತಿಲಕ್ ವರ್ಮಾ ಮುನ್ನಡೆಯಲ್ಲಿರಲಿದ್ದಾರೆ.

Story first published: Saturday, April 29, 2023, 14:02 [IST]
Other articles published on Apr 29, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+