IPL 2023: ಓರ್ವನಿಗೆ 16.75 ಕೋಟಿ, ಮತ್ತೊಬ್ಬನಿಗೆ 13.25 ಕೋಟಿ: ಆದರೆ ಆದರೂ ಬೆಂಚ್ ಬಿಸಿ ಮಾಡುತ್ತಿದ್ದಾರೆ 3 ಸ್ಟಾರ್‌ಗಳು!
ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯ ಅಂತಿಮ ಹಂತಕ್ಕೆ ಕಾಲಿಟ್ಟಾಗಿದೆ. ಎಲ್ಲಾ ತಂಡಗಳಿಗೂ ಗರಿಷ್ಠ ಎರಡು ಪಂದ್ಯಗಳು ಮಾತ್ರವೇ ಬಾಕಿಯಿದ್ದು ಕೆಲ ತಂಡಗಳಿಗೆ ಒಂದು ಪಂದ್ಯ ಮಾತ್ರವೇ ಬಾಕಿಯಿದೆ. ಈ ಸಂದರ್ಭದಲ್ಲಿ ಪ್ಲೇ ಆಫ್‌ಗೇರುವ ಸ್ಪರ್ಧೆ ಬಿರುಸುಗೊಂಡಿದ್ದು ಗುಜರಾತ್ ಟೈಟನ್ಸ್ ತಂಡ ಮಾತ್ರವೇ ಅಧಿಕೃತವಾಗಿ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿದೆ. ಮತ್ತೊಂದಡೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಪ್ಲೇಆಫ್ ಸ್ಪರ್ಧೆಯಿಂದ ಅಧಿಕೃತವಾಗಿ ಹೊರಬಿದ್ದಿದ್ದು ಉಳಿದ 7 ತಂಡಗಳು ಕೂಡ ಪ್ಲೇಆಫ್‌ಗೇರುವ ರೇಸ್‌ನಲ್ಲಿ ಉಳಿದುಕೊಂಡಿದೆ.
ಈ ಸಂದರ್ಭದಲ್ಲಿ ಐಪಿಎಲ್ ಹರಾಜಿನಲ್ಲಿ ಭಾರೀ ಬೇಡಿಕೆ ಪಡೆದುಕೊಂಡು ಬೃಹತ್ ಮೊತ್ತಕ್ಕೆ ಹರಾಜಾಗಿದ್ದ ಮೂವರು ಆಟಗಾರರು ಆಡುವ ಬಳಗದಿಂದ ಹೊರಗುಳಿದಿದ್ದಾರೆ. 10 ಕೋಟಿಗೂ ಅಧಿಕ ಮೊತ್ತವನ್ನು ಪಡೆದುಕೊಂಡಿದ್ದರೂ ಮೂವರು ಸ್ಟಾರ್ ಆಟಗಾರರು ಆಡುವ ಬಳಗದಿಂದ ಹೊರಬಿದ್ದಿದ್ದಾರೆ. ಆ ಮೂವರು ಆಟಗಾರರು ಯಾರು? ಆಡುವ ಬಳಗದಿಂದ ಹೊರಬೀಳಲು ಕಾರಣವೇನು? ಮುಂದೆ ಓದಿ..

ಕೇವಲ 2 ಪಂದ್ಯ ಆಡಿರುವ ಬೆನ್ ಸ್ಟೋಕ್ಸ್
ಈ ಬಾರಿಯ ಐಪಿಎಲ್‌ಗೂ ಮುನ್ನ ನಡೆದ ಹರಾಜುನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಬೆನ್ ಸ್ಟೋಕ್ಸ್ ಅವರನ್ನು ಬರೊಬ್ಬರಿ 16.25 ಕೋಟಿಗೆ ತಂಡಕ್ಕೆ ಸೇರ್ಪಡೆಗೊಳಿಸಿತ್ತು. ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಬೆನ್ ಸ್ಟೋಕ್ಸ್ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಆದರೆ ಸ್ಟೋಕ್ಸ್ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರವೇ ಕಣ್ಕಕಿಳಿದಿದ್ದಾರೆ. ಎರಡು ಪಂದ್ಯಗಳಲ್ಲಿ 15 ರನ್ ಮಾತ್ರವೇ ಗಳಿಸಿದ ಅವರು ಒಂದು ಓವರ್ ಬೌಲಿಂಗ್ ಮಾತ್ರವೇ ನಡೆಸಿದರು. ಬಳಿಕ ಗಾಯಕ್ಕೆ ತುತ್ತಾದ ಕಾರಣ ಸ್ಟೋಕ್ಸ್ ಆಡುವ ಬಳಗದಿಂದ ಹೊರಗುಳಿದರು. ಸದ್ಯ ಸ್ಟೋಕ್ಸ್ ಗಾಯದಿಂದ ಚೇತರಿಸಿಕೊಂಡಿದ್ದರು ಕೂಡ ಆಡುವ ಬಳಗದಕ್ಕೆ ಸೇರಿಸಿಕೊಂಡಿಲ್ಲ.
ಹ್ಯಾರಿ ಬ್ರೂಕ್‌ಗೂ ತಪ್ಪಿತು ಅವಕಾಶ
ಸನ್‌ರೈಸರ್ಸ್ ಹೈದರಾಬಾದ್ ತಂಡ ಇಂಗ್ಲೆಂಡ್ ಯುವ ಆಟಗಾರ ಹ್ಯಾರಿ ಬ್ರೂಕ್ ಅವರನ್ನು ಬರೊಬ್ಬರಿ 13.25 ಕೊಟಿ ನೀಡಿ ತಂಡಕ್ಕೆ ಸೇರ್ಪಡೆಗೊಳಿಸಿತ್ತು. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದರು ಕೂಡ ಅತ್ಯಂತ ಅಸ್ಥಿರ ಪ್ರದರ್ಶನ ನೀಡಿದ್ದಾರೆ ಯುವ ಆಟಗಾರ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದರು ಕೂಡ ನಂತರ ಉತ್ತಮ ಪ್ರದರ್ಶಣ ನೀಡಲು ವಿಫಲವಾದ ಕಾರಣ ಆಡವ ಬಳಗದಿಂದ ಹೊರಬಿದ್ದಿದ್ದಾರೆ.
ಆರ್‌ಸಿಬಿ ಆಟಗಾರ ವನಿಂದು ಹಸರಂಗ
ರಾಯಲ್ ಚಾಲೆಂಜರ್ಸ್ ನೆಂಗಳೂರು ತಂಡ ವನಿಂದು ಹಸರಂಗ ಅವರನ್ನು ಈ ಬಾರಿಯ ಟೂರ್ನಿಯ ಆರಂಬಕ್ಕೂ ಮುನ್ನ 10.75 ಕೋಟಿ ಮೌಲ್ಯದ ವನಿಂದು ಹಸರಂಗ ಅವರನ್ನು ತಂಡದಲ್ಲಿ ರೀಟೈನ್ ಮಾಡಿಕೊಂಡಿತ್ತು. ಆರ್‌ಸಿಬಿ ತಂಡದ ಆಡುವ ಬಳಗದ ಪ್ರಮುಖ ಸದಸ್ಯನಾಗಿ ಸತತವಾಗಿ ಆಡುವ ಅವಕಾಶವನ್ನು ಹಸರಂಗ ಪಡೆದುಕೊಂಡಿದ್ದರು. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಹಸರಂಗ ಅವರನ್ನು ಆಡುವ ಬಳಗದಿಂದ ಕೈಬಿಟ್ಟು ಮೈಕಲ್ ಬ್ರೇಸ್‌ವೆಲ್ ಅವರಿಗೆ ಅವಕಾಶ ನೀಡಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications