RCB vs KKR: 2ನೇ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಆತ್ಮವಿಶ್ವಾಸ ಹೆಚ್ಚಿಸಿದೆ ಈ ನಾಲ್ಕು ಅಂಶಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2ನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಮೊದಲ ಪಂದ್ಯವನ್ನು ತವರಿನ ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆಡಿ ಅಮೋಘ ಗೆಲುವು ಸಾಧಿಸಿರುವ ಆರ್‌ಸಿಬಿ ತಂಡ ಎರಡನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣೆಸಾಡಲಿದೆ. ಕೊಲ್ಕತ್ತಾದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್‌ಸಿಬಿ ನೀಡಲಿರುವ ಪ್ರದರ್ಶನ ಕುತೂಹಲ ಮೂಡಿಸಿದೆ.
ಇನ್ನು ಆರ್‌ಸಿಬಿ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ಆರಂಭವನ್ನು ಪಡೆದಿರುವುದು ತಂಡದ ಭರವಸೆ ಹೆಚ್ಚಿಸಿದೆ. ಅದರಲ್ಲೂ ತಂಡದಲ್ಲಿ ಕೆಲ ಅಂಶಗಳು ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಮುಂಬರುವ ಪಂದ್ಯಗಳಿಗೆ ಆರ್‌ಸಿಬಿ ಅಭಿಮಾನಿಗಳು ಕಾತರದಿಂದ ಕಾಯುವಂತೆ ಮಾಡಿದೆ. ಆರ್‌ಸಿಬಿ ತಂಡದ ಆತ್ಮವಿಶ್ವಾಸ ಹೆಚ್ಚಲು ಕಾರಣವಾಗಿರುವ ನಾಲ್ಕು ಅಂಶಗಳು ಇಲ್ಲಿದೆ. ಮುಂದೆ ಓದಿ..

ಆರಂಭಿಕರ ಪ್ರದರ್ಶನ
ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ತಂಡದ ಅನುಭವಿ ಆರಂಭಿಕ ಜೋಡಿ ನೀಡಿರುವ ಪ್ರದರ್ಶನ ತಂಡಕ್ಕೆ ದೊಡ್ಡ ಬಲ ನೀಡಿರುವುದರಲ್ಲಿ ಅನುಮಾನವಿಲ್ಲ. ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶಿಸಿದ್ದು ತಾವು ಅತ್ಯುತ್ತಮ ಫಾರ್ಮ್‌ನಲ್ಲಿರುವುದನ್ನು ಸಾರಿದ್ದಾರೆ. ಸ್ಪೋಟಕ ಬ್ಯಾಟಿಂಗ್ ಮೂಲಕ ಈ ಇಬ್ಬರು ಆಟಗಾರರು ಆರಂಭದಲ್ಲಿಯೇ ದೊಡ್ಡ ಇನ್ನಿಂಗ್ಸ್ ನೀಡಿರುವುದು ಎಲ್ಲಾ ಎದುರಾಳಿ ತಂಡಗಳಿಗೂ ದೊಡ್ಡ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದಂತಾಗಿದೆ. ಇದು ತಂಡಕ್ಕೆ ದೊಡ್ಡ ಬಲ ನೀಡಲಿದೆ.
ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್
ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್ ಸಂದರ್ಭದಲ್ಲಿ ಬಹುತೇಕ ಭಾಗವನ್ನು ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಜೋಡಿ ಆವರಿಸಿದ್ದು ನಿಜ. ಆದರೆ ತಂಡದ ಪ್ರಮುಖ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಈ ಪಂದ್ಯದಲ್ಲಿ ಕೇವಲ ಮೂರು ಎಸೆತಗಳನ್ನು ಎದುರಿಸಿ ಎರಡು ಸಿಕ್ಸರ್ ಬಾರಿಸಿ ತಮ್ಮ ಫಾರ್ಮ್‌ನ ಸಣ್ಣ ಸುಳಿವು ನೀಡಿದ್ದಾರೆ. ಈ ಆರಂಭ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಕೂಡ ಆತ್ಮವಿಶ್ವಾಸ ತುಂಬಿರುವುದರಲ್ಲಿ ಅನುಮಾನವಿಲ್ಲ.
ಬ್ರೇಸ್‌ವೆಲ್ ಆಲ್‌ರೌಂಡರ್ ಪ್ರದರ್ಶನ
ಮೈಕಲ್ ಬ್ರೇಸ್‌ವೆಲ್ ಈ ಬಾರಿಯ ಐಪಿಎಲ್‌ಗೂ ಮುನ್ನ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾದ ಪ್ರತಿಭಾನ್ವಿತ ಆಟಗಾರ. ನ್ಯೂಜಿಲೆಂಡ್ ಮೂಲದ ಈ ಆಲ್‌ರೌಂಡರ್ ಮೊದಲ ಪಂದ್ಯದಲ್ಲೊ ಬೌಲಿಂಗ್ ಮೂಲಕ ತಮ್ಮ ಕೌಶಲ್ಯ ಪ್ರದರ್ಶಿಸಿದ್ದರೂ ಬ್ಯಾಟಿಂಗ್‌ನಲ್ಲಿ ಪ್ರದರ್ಶನ ನೀಡುವ ಅವಕಾಶ ದೊರೆಯಲಿಲ್ಲ. ಆದರೆ ಬ್ರೇಸ್‌ವೆಲ್ ಬ್ಯಾಟಿಂಗ್‌ನಲ್ಲಿ ಎಂಥಾ ಅದ್ಭುತ ಫಾರ್ಮ್‌ನಲ್ಲಿದ್ದಾರೆ ಎಂಬುದನ್ನು ಈಗಾಗಲೇ ಸಾರಿದ್ದಾರೆ. ಕಳೆದ ಜನವರಿಯಲ್ಲಿ ಭಾರತದ ವಿರುದ್ಧ ನಡೆದ ಸರಣಿಯಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಬ್ರೇಸ್‌ವೆಲ್ ಐಪಿಎಲ್‌ಗೂ ಮುನ್ನ ನಡೆದ ಆಂತರಿಕ ಅಭ್ಯಾಸ ಪಂದ್ಯದಲ್ಲಿಯೂ ಬ್ರೇಸ್‌ಬೆಲ್ ಸ್ಪೋಟಕ ಪ್ರದರ್ಶನ ನೀಡಿದ್ದರು.
ಮೊಹಮ್ಮದ್ ಸಿರಾಜ್ ಬೌಲಿಂಗ್
ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಸಾಧಿಸಿರುವ ಬೆಳವಣಿಗೆ ಅದ್ಭುತ. ಅದರಲ್ಲೂ ಸಿರಾಜ್ ಹೊಸ ಚೆಂಡಿನಲ್ಲಿ ನೀಡುವ ಪ್ರದರ್ಶನ ಎದುರಾಳಿಗಳಿಗೆ ಭಯಹುಟ್ಟಿಸುವುದರಲ್ಲಿ ಅನುಮಾನವಿಲ್ಲ. ಮುಂಬೈ ಇಂಡಿಯನ್ಸ್ ವಿರುದ್ಧ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಕ್ರೀಸ್‌ನಲ್ಲಿದ್ದಾಗ ಸಿರಾಜ್ ಅವರ ಬೌಲಿಂಗ್ ದಾಳಿ ಇದಕ್ಕೆ ಸಾಕ್ಷಿ. ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಇಬ್ಬರು ಕೂಡ ಸಿರಾಜ್ ದಾಳಿಗೆ ಕಂಗೆಟ್ಟಿದ್ದರು. ಇದು ಕೂಡ ಆರ್‌ಸಿಬಿ ಪಡೆಗೆ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications