Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: 10 ಕೋಟಿ ಪಡೆದು 10 ಪಂದ್ಯವನ್ನೂ ಆಡದ ಸ್ಟಾರ್‌ಗಳು ಇವರು: ಓರ್ವ RCB ಆಟಗಾರ!!

2023ರ ಐಪಿಎಲ್ ಆವೃತ್ತಿ ಸಾಕಷ್ಟು ಸ್ಮರಣೀಯ ಕ್ಷಣಗಳೊಂದಿಗೆ ಅಂತ್ಯವಾಗುತ್ತಿದೆ. ಕ್ರಿಕೆಟ್ ಪ್ರೇಮಿಗಳಿಗೆ ಈ ಬಾರಿಯ ಐಪಿಎಲ್ ಟೂರ್ನಿ ಭರಪೂರ ಮನರಂಜನೆ ನೀಡಿದೆ. ಲೀಗ್ ಹಂತದಲ್ಲಿ ಪ್ಲೇಆಫ್‌ಗೆ ನಡೆದ ಜಿದ್ದಾಜಿದ್ದಿನ ಪೈಪೋಟಿ ರೋಮಾಂಚನ ಮೂಡಿಸಿದ್ದು ಅಭಿಮಾನಿಗಳು ಪ್ರತಿ ಪಂದ್ಯವನ್ನು ಕೂಡ ಸಾಕಷ್ಟು ನಿರೀಕ್ಷೆಯಿಂದ ನೋಡುವಂತೆ ಮಾಡಿತ್ತು. ಪ್ಲೇಆಫ್ ಹಂತಕ್ಕೆ ಇಷ್ಟು ಪೈಪೊಟಿಯ ಹೋರಾಟ ಈವರೆಗಿನ ಐಪಿಎಲ್ ಟೂರ್ನಿಯಲ್ಲಿ ಇದೇ ಮೊದಲು.

ಇನ್ನು ಈ ಬಾರಿಯ ಐಪಿಎಲ್ ಟೂರ್ನಿಗೂ ಮುನ್ನ ಕೇರಳದ ಕೊಚ್ಚಿಯಲ್ಲಿ ಮನಿ ಹರಾಜು ಪ್ರಕ್ರಿಯೆ ನಡೆದಿತ್ತು. ಈ ಹರಾಜಿನಲ್ಲಿ ಫ್ರಾಂಚೈಸಿಗಳು ತಮ್ಮ ತಂಡವನ್ನು ಬಲಿಷ್ಠಗೊಳಿಸಲು ಸಾಕಷ್ಟು ಬದಲಾವಣೆ ಮಾಡಿಕೊಂಡಿತ್ತು. ಈ ಮಿನಿ ಹರಾಜಿನಲ್ಲಿ ಕೆಲ ಆಟಗಾರರು ಭಾರೀ ಮೊತ್ತದ ಒಪ್ಪಂದವನ್ನು ಪಡೆದುಕೊಂಡರು. ಸ್ಯಾಮ್ ಕರನ್, ಕ್ಯಾಮರೂನ್ ಗ್ರೀನ್ ಹ್ಯಾರಿ ಬ್ರೂಕ್ ಮೊದಲಾದ ಆಟಗಾರರು ಸಾಕಷ್ಟು ಬೇಡಿಕೆಯನ್ನು ಪೆಡೆದುಕೊಂಡು ದೊಡ್ಡ ಮೊತ್ತನ್ನು ಜೇಬಿಗಿಳಿಸಿದರು.

IPL 2023: These 5 star cricketers earned 10 crore in this season but played less than 10 matches

ಹೀಗೆ ದೊಡ್ಡ ಮೊತ್ತವನ್ನು ನೀಡಿ ಸೇರ್ಪಡೆಗೊಳಿಸಿದ ಆಟಗಾರರನ್ನು ಫ್ರಾಂಚೈಸಿಗಳು ಟೂರ್ನಿಯಲ್ಲಿ ಬಹುತೇಕ ಪಂದ್ಯಗಳಲ್ಲಿ ಆಡಿಸಿದೆ. ಆದರೆ ಈ ಐವರು ಆಟಗಾರರು 10 ಕೋಟಿಗೂ ಅಧಿಕ ಮೊತ್ತವನ್ನು ಪಡೆದುಕೊಂಡಿದ್ದರು ಕೂಡ ಅಡುವ ಬಳಗದಲ್ಲಿ ಹೆಚ್ಚಿನ ಮಟ್ಟದ ಅವಕಾಶ ದೊರೆಯಲಿಲ್ಲ. 10 ಕೋಟಿಗೂ ಅಧಿಕ ಮೊತ್ತಕ್ಕೆ ಹರಾಜಾಗಿ 10ಕ್ಕೂ ಕಡಿಮೆ ಪಂದ್ಯಗಳನ್ನು ಆಡಿರುವ ಐವರು ಆಟಗಾರರ ಪಟ್ಟಿ ಇಲ್ಲಿದೆ. ಮುಂದೆ ಓದಿ..

ಸಿಎಸ್‌ಕೆ ಆಲ್‌ರೌಂಡರ್ ಬೆನ್ ಸ್ಟೋಕ್ಸ್

ಬೆನ್ ಸ್ಟೋಕ್ಸ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಚೆನ್ನೈ ಸೂಪರ್ ಕಿಂಗ್ಸ್ ತಂಡ 16.25 ಕೋಟಿ ಹರಾಜಿನಲ್ಲಿ ಖರೀದಿಸಿತ್ತು. ಆದರೆ ಬೆನ್ ಸ್ಟೋಕ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರವೇ ಆಡಿದ್ದಾರೆ. ಇದರಲ್ಲಿ ಸ್ಟೋಕ್ಸ್ 15 ರನ್‌ಗಳನ್ನು ಗಳಿಸಿದ್ದು ಒಂದು ಓವರ್ ಬೌಲಿಂಗ್ ದಾಳಿ ನಡೆಸಿದ್ದರು.

ಆರ್‌ಸಿಬಿ ಆಲ್‌ರೌಂಡರ್ ವನಿಂದು ಹಸರಂಗ ಆಡಿದ್ದು 8 ಪಂದ್ಯ

ಶ್ರೀಲಂಕಾದ ಆಲ್‌ರೌಂಡರ್ ವನಿಂದು ಹಸರಂಗ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10.75 ಕೋಟಿ ನೀಡಿ ಖರಿಸಿಸಿತ್ತು. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಹಸರಂಗ ಆಡಿದ್ದು ಕೇವಲ 8 ಪಂದ್ಯಗಳನ್ನು ಮಾತ್ರ. ಈ 8 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಮಾತ್ರವೇ ಪಡೆದಿದ್ದಾರೆ ಹಸರಂಗ.

ವೇಗಿ ಲೂಕಿ ಫರ್ಗ್ಯೂಸನ್

ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಲೂಕಿ ಫರ್ಗ್ಯೂಸನ್ ಅವರನ್ನು 10 ಕೋಟಿ ನೀಡಿ ಟ್ರೇಡ್ ವಿಂಡೋ ಮೂಲಕ ತಂಡಕ್ಕೆ ಸೇರ್ಪಡೆಗೊಳಿಸಿತ್ತು. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಫರ್ಗ್ಯೂಸನ್ ಆಡಿದ್ದು ಕೇವಲ ಮೂರು ಪಂದ್ಯಗಳನ್ನು ಮಾತ್ರ. ಈ ಮೂರು ಪಂದ್ಯಗಳಲ್ಲಿ ಅವರು ಕೇವಲ ಒಂದು ವಿಕೆಟ್ ಮಾತ್ರವೇ ಪಡೆದುಕೊಂಡಿದ್ದರು. ಹೀಗಾಗಿ ಉಳಿದ ಪಂದ್ಯಗಳಲ್ಲಿ ಲೂಕಿ ಬೆಂಚ್ ಬಿಸಿ ಮಾಡಿದ್ದಾರೆ.

ಸ್ಪೋಟಕ ಆಟಗಾರ ಲಿಯಾಮ್ ಲಿವಿಂಗ್ಸ್ಟನ್

ಇಂಗ್ಲೆಂಡ್‌ನ ಲಿಯಾಮ್ ಲಿವಿಂಗ್‌ಸ್ಟನ್ ಕೂಡ 10 ಕೋಟಿಗೂ ಅಧಿಕ ಮೊತ್ತದ ಕಾಂಟ್ರಾಕ್ಟ್ ಹೊಂದಿದ್ದು ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ತಡವಾಗಿ ಸೇರಿಕೊಂಡಿದ್ದ ಅವರು 9 ಪಂದ್ಯಗಳಲ್ಲಿ ಮಾತ್ರವೇ ಕಣಕ್ಕಿಳಿದಿದ್ದಾರೆ. ಆದರೆ ಆಡಿರುವ ಇಷ್ಟು ಪಂದ್ಯಗಳಲ್ಲಿಯೂ ಅವರ ಪ್ರದರ್ಶಣ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ.

ಎಲ್‌ಎಸ್‌ಜಿ ವೇಗಿ ಆವೇಶ್ ಖಾನ್

ಕಳೆದ ವರ್ಷ ಆವೇಶ್ ಖಾನ್ 10 ಕೋಟಿ ಮೊತ್ತದ ಒಪ್ಪಂದ ಪಡೆದು ಎಲ್ಲರನ್ನೂ ಹುಬ್ಬೇರುವಂತೆ ಮಾಡಿದ್ದರು. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಬೌಲಿಂಗ್‌ನಲ್ಲಿ ತಂಡಕ್ಕೆ ಯಾವುದೇ ರೀತಿಯಲ್ಲಿಯೂ ಕೊಡುಗೆ ನೀಡಲು ವಿಫಲವಾದರು. ಹಾಗಾಗಿ ಈ ಬಾರಿಯ ಐಪಿಎಲ್‌ನಲ್ಲಿ ಆವೇಶ್ ಖಾನ್ ಕೇವಲ 9 ಪಂದ್ಯಗಳಲ್ಲಿ ಮಾತ್ರವೇ ಆಡಿದ್ದಾರೆ.

Story first published: Monday, May 29, 2023, 15:04 [IST]
Other articles published on May 29, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+