For Quick Alerts
ALLOW NOTIFICATIONS  
For Daily Alerts
 

IPL 2023: ಈ ಮೂರು ಕಾರಣಗಳಿಂದಾಗಿ ಆರ್‌ಸಿಬಿ ಈ ಬಾರಿ ಕಪ್‌ ಗೆಲ್ಲುವ ನೆಚ್ಚಿನ ತಂಡವಾಗಿದೆ

IPL 2023: Three Reasons Why RCB Is One Of The Favorites To Win IPL 2023

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್‌ನ ಜನಪ್ರಿಯ ತಂಡಗಳಲ್ಲಿ ಒಂದಾಗಿದೆ. ದೊಡ್ಡ ಆಟಗಾರರನ್ನು ಹೊಂದಿದ್ದರೂ, ಅವರು ಕಪ್ ಗೆಲ್ಲುವಲ್ಲಿ ವಿಫಲವಾಗಿದ್ದಾರೆ. ದೊಡ್ಡ ಆಟಗಾರರು ಇದ್ದರೂ ತಂಡವಾಗಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು.

ಆದರೂ, ಕಳೆದ ಮೂರು ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್‌ಗೆ ತಲುಪುವಲ್ಲಿ ಸಫಲವಾಗಿದೆ. ನಾಲ್ಕು ವರ್ಷಗಳ ಬಳಿಕ ಐಪಿಎಲ್‌ ಸಾಂಪ್ರದಾಯಿಕ ಆವೃತ್ತಿಗೆ ಮರಳಿದೆ. ತವರಿನಲ್ಲಿ ಪಂದ್ಯವನ್ನಾಡಲು ಸಜ್ಜಾಗಿದೆ, ಇದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

2023ರ ಮಿನಿ ಹರಾಜಿನಲ್ಲಿ ಪ್ರಮುಖ ಆಟಗಾರರು ತಂಡಕ್ಕೆ ಆಯ್ಕೆಯಾಗಿದ್ದಾರೆ. ವಿಲ್‌ ಜ್ಯಾಕ್ಸ್ ತಂಡಕ್ಕೆ ಆಯ್ಕೆಯಾಗಿದ್ದರೂ ಕೊನೆ ಗಳಿಗೆಯಲ್ಲಿ ಗಾಯದ ಸಮಸ್ಯೆಯಿಂದ ಅವರು ಐಪಿಎಲ್‌ನಿಂದ ಹೊರಬಿದ್ದರು. ಅವರ ಬದಲಾಗಿ ನ್ಯೂಜಿಲೆಂಡ್ ತಂಡದ ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವೆಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಫಾಫ್ ಡು ಪ್ಲೆಸಿಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದು ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರನೇ ಸ್ಥಾನ ಪಡೆದುಕೊಂಡಿತ್ತು. ಕಳೆದ ಬಾರಿ ಆಡಿದ ತಂಡವನ್ನೇ ಈ ಬಾರಿ ಉಳಿಸಿಕೊಂಡಿರುವುದು ತಂಡಕ್ಕೆ ವರದಾನವಾಗಿದೆ. ಈ ಬಾರಿ ಆರ್ ಸಿಬಿ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಅದಕ್ಕೆ ಮೂರು ಕಾರಣಗಳನ್ನು ನೀಡಲಾಗಿದೆ.

IPL 2023: Three Reasons Why RCB Is One Of The Favorites To Win IPL 2023

ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ

ಕಳೆದ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿ ಇರಲಿಲ್ಲ. 16 ಪಂದ್ಯಗಳಲ್ಲಿ 22ರ ಸರಾಸರಿಯಲ್ಲಿ 341 ರನ್ ಗಳಿಸಿದ್ದರು. ಕಳಪೆ ಹೊಡೆತ, ದುರದೃಷ್ಟಕರವಾಗಿ ಔಟ್ ಆಗಿದ್ದು, ನಂತರ ಆರಂಭಿಕರಾಗಿ ಕಣಕ್ಕಿಳಿದ ಕೊಹ್ಲಿ ಕೆಲವು ಉತ್ತಮ ರನ್ ಗಳಿಸುವಲ್ಲಿ ಯಶಸ್ವಿಯಾದರು. ಕೊಹ್ಲಿ ರನ್ ಗಳಿಸದಿದ್ದರೂ ಫಾಫ್ ಡು ಪ್ಲೆಸಿಸ್ ಮತ್ತು ದಿನೇಶ್ ಕಾರ್ತಿಕ್ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಬ್ಯಾಟಿಂಗ್ ಮಾಡಿದರು.

ಈ ಬಾರಿ ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ ಇದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಏಷ್ಯಾಕಪ್‌ನಲ್ಲಿ ಟಿ20 ಮಾದರಿಯಲ್ಲಿ ಶತಕ ಬಾರಿಸಿದ ಬಳಿಕ ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. 2023ರಲ್ಲಿ ಅವರು ಟಿ20 ಪಂದ್ಯಗಳಲ್ಲಿ ಆಡದಿದ್ದರೂ, ಐಪಿಎಲ್‌ನಲ್ಲಿ ಫಾರ್ಮ್ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.

IPL 2023: Three Reasons Why RCB Is One Of The Favorites To Win IPL 2023

ಬೌಲಿಂಗ್ ದಾಳಿ ಕೂಡ ಉತ್ತಮವಾಗಿದೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈವರೆಗೆ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದರೂ ಬೌಲಿಂಗ್ ವಿಭಾಗವೇ ದೊಡ್ಡ ಸಮಸ್ಯೆಯಾಗಿತ್ತು. ಆದರೆ 2022ರ ಐಪಿಎಲ್ ಮೆಗಾಹರಾಜಿನಲ್ಲಿ ಕೆಲವು ಉತ್ತಮ ಬೌಲರ್ ಗಳು ತಂಡಕ್ಕೆ ಸೇರ್ಪಡೆಯಾದರು.

ಯುಜ್ವೇಂದ್ರ ಚಹಾಲ್‌ರನ್ನು ಕೈಬಿಟ್ಟ ಬಳಿಕ ವನಿಂದು ಹಸರಂಗ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತು. ಕಳೆದ ಆವೃತ್ತಿಯಲ್ಲಿ ಹಸರಂಗ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದರು. ದೆಹಲಿ ತಂಡದಿಂದ ಫ್ರಾಂಚೈಸಿಗೆ ಮರಳಿದ ನಂತರ ಹರ್ಷಲ್ ಪಟೇಲ್ ಕೂಡ ಉತ್ತಮ ಬೌಲರ್ ಆಗಿದ್ದಾರೆ. ಜೋಶ್ ಹ್ಯಾಜಲ್‌ವುಡ್ ಮತ್ತು ಮೊಹಮ್ಮದ್ ಸಿರಾಜ್ ತಂಡದ ಪ್ರಮುಖ ವೇಗದ ಶಕ್ತಿಯಾಗಿದ್ದಾರೆ. ಮ್ಯಾಕ್ಸ್‌ವೆಲ್ ಕೂಡ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದು ತಂಡಕ್ಕೆ ಶಕ್ತಿಯಾಗಿದ್ದಾರೆ.

IPL 2023: Three Reasons Why RCB Is One Of The Favorites To Win IPL 2023

ಕಳೆದ ಆವೃತ್ತಿಯ ತಂಡವೇ ಕಣಕ್ಕೆ

ಪ್ರಮುಖವಾಗಿ ಆರ್ ಸಿಬಿ ಕಳೆದ ಆವೃತ್ತಿಯಲ್ಲಿ ಆಡಿದ ತಂಡವೇ ಈ ಬಾರಿಯೂ ಬಹುತೇಕ ಕಣಕ್ಕಿಳಿಯಲಿದೆ. ಮಿನಿ ಹರಾಜಿಗೆ ಮುನ್ನ ಯಾವುದೇ ಪ್ರಮುಖ ಆಟಗಾರರನ್ನು ಬಿಡುಗಡೆ ಮಾಡಿಲ್ಲ.

ಮ್ಯಾಕ್ಸ್‌ವೆಲ್ ಕೂಡ ಫಿಟ್ ಆಗಿದ್ದು, ಮೊದಲ ಪಂದ್ಯದಲ್ಲೇ ಕಣಕ್ಕಿಳಿಯುವ ಸಾಧ್ಯತೆ ಇರುವುದರಿಂದ ತಂಡಕ್ಕೆ ಅನುಕೂಲಕರವಾಗಿದೆ. ಮೈಕೆಲ್ ಬ್ರೇಸ್‌ವೆಲ್ ಕೂಡ ಬ್ಯಾಟಿಂಗ್ ಜೊತೆ ಬೌಲಿಂಗ್‌ನಲ್ಲಿ ಕೂಡ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ.

Story first published: Sunday, March 19, 2023, 22:02 [IST]
Other articles published on Mar 19, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+