IPL 2023: ನೆಚ್ಚಿನ ಕ್ರಿಕೆಟಿಗ, ಹಾಡು, ಮಗಳು-ಪತ್ನಿಯ ಜೊತೆಗಿನ ಒಡನಾಟದ ಬಗ್ಗೆ ಕೊಹ್ಲಿ ಮನದಾಳದ ಮಾತು

ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿ ಆರಂಭಕ್ಕೆ ಇನ್ನೆರಡು ದಿನ ಮಾತ್ರ ಬಾಕಿ ಇದೆ. ಪಂದ್ಯಾವಳಿಯ ಅಗ್ರ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೋಟೋ ಶೂಟ್ ಮಾಡಿಸಿದ್ದು, ಆಟಗಾರರು ಮೊದಲ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಉತ್ತಮ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಮೇಲೆ ಈ ಬಾರಿ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಫೋಟೋ ಶೂಟ್ ಸಮಯದಲ್ಲಿ ಮಾತನಾಡಿರುವ ವಿರಾಟ್ ಕೊಹ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ಮತ್ತು ಅವರ ಮಗಳು ವಾಮಿಕಾ ಅವರೊಂದಿಗಿನ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಅವರ ನೆಚ್ಚಿನ ಪ್ಲೇ ಲಿಸ್ಟ್, ಸಂಗೀತಗಾರ, ಕ್ರಿಕೆಟಿಗರು, ಹೊಸ ಟ್ಯಾಟೂ ಇತ್ಯಾದಿ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಮತ್ತು ಮಗಳು ವಾಮಿಕಾ ಜೊತೆ ಸಮಯ ಕಳೆಯುವುದು ತುಂಬಾ ಇಷ್ಟು ಎಂದು ಹೇಳಿದ್ದಾರೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ತಾರೆಗಳಲ್ಲಿ ಒಬ್ಬರಾಗಿದ್ದರೂ, ಕುಟುಂಬಕ್ಕಾಗಿ ಸಮಯ ಕೊಡುತ್ತಾರೆ, ಅವರೊಂದಿಗೆ ಕಳೆಯುವ ಕ್ಷಣಗಳನ್ನು ಗೌರವಿಸುತ್ತಾರೆ.
"ನನ್ನ ಮೊಬೈಲ್ ಗ್ಯಾಲರಿಯಲ್ಲಿ ಸಂಪೂರ್ಣವಾಗಿ ವಾಮಿಕಾ ಚಿತ್ರಗಳೇ ತುಂಬಿದೆ. ವಾಮಿಕಾಳ ಸಾಕಷ್ಟು ಫೋಟೊಗಳನ್ನು ಕ್ಲಿಕ್ ಮಾಡುತ್ತೇನೆ. ವಾಮಿಕಾ ಮತ್ತು ಅನುಷ್ಕಾಳನ್ನು ನೋಡಿದಾಗೆಲ್ಲಾ ಅದು ನನಗೆ ಸ್ವಾಭಾವಿಕವಾಗಿದೆ. ಸ್ವಲ್ಪ ಸಮಯ ತೆಗೆದುಕೊಳ್ಳಿ ಅಥವಾ ಮುದ್ದಾದ ಕೆಲಸಗಳನ್ನು ಅಥವಾ ಯಾವುದನ್ನಾದರೂ ಮಾಡಿ. ನಾನು ಎಲ್ಲಾ ಕ್ಷಣಗಳನ್ನು ಸೆರೆಹಿಡಿಯಲು ಇಷ್ಟಪಡುತ್ತೇನೆ" ಎಂದು ಕೊಹ್ಲಿ ಹೇಳಿದ್ದಾರೆ.

ಕೊಹ್ಲಿಯ ನೆಚ್ಚಿನ ಸಂಗೀತಗಾರ ಯಾರು?
ಕುಟುಂಬದ ಹೊರತಾಗಿ ವಿರಾಟ್ ಕೊಹ್ಲಿ ತನ್ನ ನೆಚ್ಚಿನ ಹಾಡುಗಳು, ಸಂಗೀತಗಾರನ ಬಗ್ಗೆ ಮಾತನಾಡಿದ್ದಾರೆ. ಅಗ್ರ ಕ್ರೀಡಾಪಟುಗಳು ಯಾವ ರೀತಿಯ ಸಂಗೀತವನ್ನು ಕೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಆಸಕ್ತಿದಾಯಕವಾಗಿರುತ್ತದೆ. ಅದು ಅವರ ವ್ಯಕ್ತಿತ್ವದ ಪರಿಚಯ ಮಾಡಿಕೊಡುತ್ತದೆ. ವಿರಾಟ್ ಕೊಹ್ಲಿ ಸದ್ಯ ಅರ್ಜಿತ್ ಸಿಂಗ್ ಅವರ ಹಾಡುಗಳನ್ನು ಹೆಚ್ಚಾಗಿ ಕೇಳುವುದಾಗಿ ಹೇಳಿದ್ದಾರೆ. ಅವರ ಹಾಡುಗಳು ಮನಸ್ಸಿಗೆ ಮುದ ನೀಡುತ್ತದೆ ಎಂದಿದ್ದಾರೆ.

ಕೊಹ್ಲಿ ಇಷ್ಟಪಡುವ ಕ್ರಿಕೆಟಿಗರು ಯಾರು?
ವಿರಾಟ್ ಕೊಹ್ಲಿ ನೆಚ್ಚಿನ ಕ್ರಿಕೆಟಿಗರು ಯಾರು ಎನ್ನುವ ಕುತೂಹಲ ಇದ್ದೇ ಇರುತ್ತದೆ, ಇದಕ್ಕೆ ಅವರು ಸಾಕಷ್ಟು ಬಾರಿ ಉತ್ತರವನ್ನು ನೀಡಿದ್ದಾರೆ. ತಾನು ವಿವ್ ರಿಚರ್ಡ್ಸ್ ಅವರ ದೊಡ್ಡ ಅಭಿಮಾನಿ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ಆರಾಧಿಸುತ್ತೇನೆ ಎಂದು ಹೇಳಿದ್ದಾರೆ. ಸಚಿನ್ ತೆಂಡೂಲ್ಕರ್ ವಿಶ್ವದ ಶ್ರೇಷ್ಠ ಕ್ರಿಕೆಟಿಗ, ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
"ನಾನು ಯಾವಾಗಲೂ ಇಬ್ಬರ ಹೆಸರನ್ನು ಹೇಳುತ್ತೇನೆ, ಸಚಿನ್ ತೆಂಡೂಲ್ಕರ್ ಮತ್ತು ಸರ್ ವಿವ್ ರಿಚರ್ಡ್ಸ್ ಕ್ರಿಕೆಟ್‌ನ ಶ್ರೇಷ್ಠ ಆಟಗಾರರು. ಇವರಿಬ್ಬರು ಬ್ಯಾಟಿಂಗ್‌ನಲ್ಲಿ ಕ್ರಾಂತಿ ಮಾಡಿದ್ದು, ಕ್ರಿಕೆಟ್‌ನ ಗತಿಯನ್ನೇ ಸಂಪೂರ್ಣವಾಗಿ ಬದಲಿಸಿದ್ದಾರೆ. ಹಾಗಾಗಿ ಅವರಿಬ್ಬರು ಶ್ರೇಷ್ಠರು ಎಂದು ನಾನು ಭಾವಿಸುತ್ತೇನೆ." ಎಂದು ಕೊಹ್ಲಿ ಹೇಳಿದ್ದಾರೆ.
ವಿರಾಟ್ ಹೊಸ ಟ್ಯಾಟೂವನ್ನು ಬಹಿರಂಗಪಡಿಸಿದರು. ಅವರು ಚಿಕ್ಕವರಿದ್ದಾಗ ಆಡುತ್ತಿದ್ದ ಟ್ರಂಪ್ ಕಾರ್ಡ್‌ಗಳ ಬಗ್ಗೆಯೂ ಮಾತನಾಡಿದ್ದಾರೆ. ಮೂರು ವರ್ಷಗಳ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆರ್ ಸಿಬಿ ತನ್ನ ಮೊದಲನೇ ಪಂದ್ಯವನ್ನು ಆಡಲಿದೆ. ಅಭಿಮಾನಿಗಳು ವಿರಾಟ್ ಮತ್ತು ತಂಡದ ಆಟಗಾರರನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications