For Quick Alerts
ALLOW NOTIFICATIONS  
For Daily Alerts
 

ಗೆಳೆಯನ ಸ್ಕ್ರಾಪ್‌ಬುಕ್‌ನಲ್ಲಿ ದೊಡ್ಡವನಾದ ಮೇಲೆ ಏನಾಗ್ತೀನಿ ಎಂದು 20 ವರ್ಷಗಳ ಹಿಂದೆ ಹೀಗೆ ಬರೆದಿದ್ರು ಕೊಹ್ಲಿ!

IPL 2023: Virat Kohli dreamt to become Team India member in childhood and he wrote it in scrapbook

ವಿರಾಟ್ ಕೊಹ್ಲಿ.. ಮಾಡರ್ನ್ ಕ್ರಿಕೆಟ್ ಜಗತ್ತಿನ ಲೆಜೆಂಡ್. ವಿರಾಟ್ ಕೊಹ್ಲಿ ಎಂದ ಹೆಸರು ಕಿವಿಗೆ ಬಿದ್ದ ಕೂಡಲೇ ಎಲ್ಲರ ತಲೆಗೂ ಬರುವುದೇ ಶತಕ ವೀರ, ರನ್ ಮಷಿನ್, ಅಗ್ರೆಸ್ಸಿವ್ ಪ್ಲೇಯರ್ ಎಂಬುದು.

ಹೌದು, ವಿರಾಟ್ ಕೊಹ್ಲಿ ರೀತಿಯ ರೆಕಾರ್ಡ್ ಹಾಗೂ ಸಾಧನೆಗಳನ್ನು ಮಾಡಿರುವ ಸದ್ಯದ ತಲೆಮಾರಿನಲ್ಲಿ ಯಾರೂ ಸಹ ಇಲ್ಲ. ಸಚಿನ್ ನಿರ್ಮಿಸಿರುವ ಶತಕಗಳ ದಾಖಲೆಯನ್ನು ಯಾರಿಂದಲೂ ಸಹ ಮುರಿಯಲಾಗುವುದಿಲ್ಲ ಎಂದಿದ್ದ ಕ್ರಿಕೆಟ್ ಪ್ರೇಮಿಗಳು ವಿರಾಟ್ ಕೊಹ್ಲಿ ಆಗಮಿಸಿ ಶತಕಗಳ ಮೇಲೆ ಶತಕಗಳನ್ನು ಕಡಿಮೆ ಅವಧಿಯಲ್ಲಿ ಬಾರಿಸಿದ ನಂತರ ಸಚಿನ್ ರೆಕಾರ್ಡ್ ಈಸ್ ಇನ್ ಡೇಂಜರ್ ಎನ್ನಲು ಆರಂಭಿಸಿದರು.

ಅಷ್ಟರ ಮಟ್ಟಿಗೆ ಅಬ್ಬರಿಸಿರುವ ವಿರಾಟ್ ಕೊಹ್ಲಿ ಸದ್ಯ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಭರ್ಜರಿ ಬ್ಯಾಟಿಂಗ್ ನಡೆಸಿ ಅಬ್ಬರಿಸುತ್ತಿದ್ದು, ಇಲ್ಲೂ ಸಹ ತಮ್ಮ ದಾಖಲೆಗಳ ನಾಗಾಲೋಟವನ್ನು ಮುನ್ನಡೆಸಿದ್ದಾರೆ.

ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾದಾಗಿನಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವೇ ಸತತವಾಗಿ ಆಡುತ್ತಾ ಬಂದಿರುವ ವಿರಾಟ್ ಕೊಹ್ಲಿ ಬಗ್ಗೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಂಬಾಳೆ ಫಿಲ್ಮ್ಸ್ ಜತೆಗೂಡಿ ವಿಶೇಷ ವಿಡಿಯೊವನ್ನು ಚಿತ್ರೀಕರಿಸಿದೆ.

ಹೌದು, ವಿರಾಟ್ ಕೊಹ್ಲಿ ದೆಹಲಿಯಲ್ಲಿ ಕಳೆದ ಬಾಲ್ಯದ ಜೀವನದ ಬಗ್ಗೆ ಹಾಗೂ ಆತ ಕೋಚಿಂಗ್ ಸೆಂಟರ್ ಸೇರಿ ಮೇಲೆ ಬೆಳೆದದ್ದು ಹೇಗೆ ಎಂಬುದನ್ನು ಆತನ ಕೋಚ್ ಹಾಗೂ ಸಹಪಾಠಿಗಳೇ ಮಾತನಾಡಿರುವ ವಿಡಿಯೊವನ್ನು ಚಿತ್ರೀಕರಿಸಲಾಗಿದ್ದು, ಈ ವಿಡಿಯೊದಲ್ಲಿ ಕೊಹ್ಲಿ ಎಷ್ಟು ತುಂಟ ಹುಡುಗ, ಎಷ್ಟೆಲ್ಲಾ ಕೀಟಲೆ ಮಾಡುತ್ತಿದ್ದ, ಕ್ರಿಕೆಟ್ ಆಡಲು ಎಷ್ಟು ಹಾತೊರೆಯುತ್ತಿದ್ದ ಎಂಬುದನ್ನು ತಿಳಿಸಲಾಗಿದೆ.

ವಿರಾಟ್ ಕೊಹ್ಲಿ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ನಡೆಸುತ್ತಿದ್ದ ಕ್ರಿಕೆಟ್ ಕೋಚಿಂಗ್ ಸೆಂಟರ್‌ಗೆ ಸೇರ್ಪಡೆಗೊಂಡ ನಂತರ ಅಲ್ಲಿ ಹಲವು ಗಳೆಯರನ್ನು ಹೊಂದಿದ್ದರು. ಈ ಪೈಕಿ ವಿರಾಟ್ ಕೊಹ್ಲಿಗೆ ಶಾಲ್ ಸೊಂದಿ ಎಂಬ ಕೊಹ್ಲಿಯ ಬಾಲ್ಯದ ಸ್ನೇಹಿತ ಈ ವಿಡಿಯೊದಲ್ಲಿ ಮಾತನಾಡಿದ್ದು, ತನ್ನ ಬಳಿ ಇರುವ ಬಾಲ್ಯದ ಸ್ಕ್ರಾಪ್‌ಬುಕ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಆಸೆ ಹಾಗೂ ಅನಿಸಿಕೆಗಳನ್ನು ಬರೆದುಕೊಂಡಿದ್ದನ್ನು ಬಹಿರಂಗಪಡಿಸಿದ್ದಾರೆ.

ಈ ಸ್ಕ್ರಾಪ್‌ಬುಕ್‌ನಲ್ಲಿ ವಿರಾಟ್ ಕೊಹ್ಲಿ ತಮಗೆ ಇಷ್ಟವಾದ ಬಣ್ಣ, ಇಷ್ಟವಾದ ಸ್ನೇಹಿತ ಯಾರು ಎಂಬುದನ್ನು ಬರೆದಿದ್ದು, ದೊಡ್ಡವನಾದ ಬಳಿಕ ಏನಾಗಬೇಕು ಎಂಬುದನ್ನೂ ಸಹ ಬರೆದಿದ್ದರು. ಸಾಮಾನ್ಯವಾಗಿ ಬಾಲ್ಯದಲ್ಲಿ ಯಾವುದಾದರೊಂದು ವೃತ್ತಿಯನ್ನು ಇಂತಹ ಸ್ಕ್ರಾಪ್‌ಬುಕ್‌ಗಳಲ್ಲಿ ಬರೆಯುವುದು ಸಹಜ.

ಆದರೆ ವಿರಾಟ್ ಕೊಹ್ಲಿ 2002ರಲ್ಲಿಯೇ ತಾನು ಏನಾಗಲಿದ್ದೇನೆ ಎಂಬುದನ್ನು ನಿಖರವಾಗಿ ಬರೆದುಬಿಟ್ಟಿದ್ದರು. ಹೌದು, ನಾನು ಭಾರತ ತಂಡದ ಆಟಗಾರನಾಗುತ್ತೇನೆ ಎಂದು ವಿರಾಟ್ ಕೊಹ್ಲಿ ಆ ಸ್ಕ್ರಾಪ್‌ಬುಕ್‌ನಲ್ಲಿ ಬರೆದಿದ್ದಾರೆ. ಪುಟ್ಟ ಕೊಹ್ಲಿ ತಮ್ಮ ಹಸ್ತಾಕ್ಷರದಲ್ಲಿ ಭಾರತ ತಂಡದ ಕ್ರಿಕೆಟಿಗನಾಗಲಿದ್ದೇನೆ ಎಂದು ಬರೆದಿರುವುದನ್ನು ಕಾಣಬಹುದಾಗಿದೆ.

kohli

ಇನ್ನು ತನ್ನ ನೆಚ್ಚಿನ ಬಣ್ಣ ಕಪ್ಪು ಎಂದು ಬರೆದಿರುವ ವಿರಾಟ್ ಕೊಹ್ಲಿ ತನ್ನ ನೆಚ್ಚಿನ ಸ್ನೇಹಿತ ಪಿಯೂಷ್ ಎಂದೂ ಸಹ ಉಲ್ಲೇಖಿಸಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಬರೆದಿದ್ದ ಈ ಸಾಲುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೊಹ್ಲಿ ಎಂತಹ ಛಲಗಾರ ಎಂಬುದನ್ನು ಈ ವಿಷಯದ ಮೂಲಕ ಅರಿಯಬಹುದಾಗಿದೆ ಎಂದು ಕಾಮೆಂಟ್ ಮಾಡಿ ಹೊಗಳುತ್ತಿದ್ದಾರೆ.

Story first published: Friday, May 5, 2023, 20:14 [IST]
Other articles published on May 5, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+