IPL 2023: 6ನೇ ಐಪಿಎಲ್ ಶತಕ ಸಿಡಿಸಿದ ವಿರಾಟ್: ಕ್ರಿಸ್ ಗೇಲ್ ದಾಖಲೆ ಸರಿಗಟ್ಟಿದ ಆರ್‌ಸಿಬಿ ದಿಗ್ಗಜ
ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ ಅಮೋಘ ಗೆಲುವು ಸಾಧಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ನಾಯಕ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ನೀಡಿದ ಶತಕದ ಜೊತೆಯಾಟದಿಂದಾಗಿ ಆರ್‌ಸಿಬಿ ಈ ಪಂದ್ಯವನ್ನು 8 ವಿಕೆಟ್‌ಗಳ ಅಂತರದಿಂದ ಗೆದ್ದಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ತಮ್ಮ 6ನೇ ಶತಕ ಸಿಡಿಸಿದ್ದಾರೆ.
ಈ ಮೂಲಕ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು ಕ್ರಿಸ್ ಗೇಲ್ ಸಾಧನೆಯನ್ನು ಸರಿಗಟ್ಟಿದ್ದಾರೆ. ಕ್ರಿಸ್‌ಗೇಲ್ ಕೂಡ ಐಪಿಎಲ್‌ನಲ್ಲಿ 6 ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಗೇಲ್ 142 ಪಂದ್ಯಗಳಲ್ಲಿ 6 ಶತಕ ಸಿಡಿಸಿದ್ದರೆ ಕೊಹ್ಲಿ 237ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ 2016ರಲ್ಲಿ ಒಂದೇ ಐಪಿಎಲ್ ಆವೃತ್ತಿಯಲ್ಲಿ 4 ಶತಕ ಸಿಡಿಸಿದ್ದರು. ಅಲ್ಲದೆ 7 ಅರ್ಧ ಶತಕ ಕೂಡ ದಾಖಲಾಗಿತ್ತು. ಈ ಆವೃತ್ತಿಯಲ್ಲಿ ಸಾರ್ವಕಾಲಿಕ ಶ್ರೇಷ್ಠ 973 ರನ್ ಬಾರಿಸಿ ದಾಖಳೆ ಬರದಿದ್ದರು ಕೊಹ್ಲಿ. ಅದಾದಬಳಿಕ ಕೊಹ್ಲಿಯ ಮುಂದಿನ ಐಪಿಎಲ್ ಶತಕ ಬಂದಿದ್ದು 2019ರ ಆವೃತ್ತಿಯಲ್ಲಿ. ತಮ್ಮ ಮತ್ತೊಂದು ಐಪಿಎಲ್ ಶತಕಕ್ಕಾಗಿ ಕೊಹ್ಲಿ ನಾಲ್ಕು ವರ್ಷ ಕಾದಿದ್ದಾರೆ.
ಬೃಹತ್ ಗುರಿ ನೀಡಿದ ಸನ್‌ರೈಸರ್ಸ್
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಬೃಹತ್ ಗುರಿಯನ್ನು ಆರ್‌ಸಿಬಿ ಮುಂದಿಟ್ಟಿತು. ಹೆನ್ರಿಕ್ ಕ್ಲಾಸೆನ್ ಅವರ ಅಮೋಘ ಶತಕದ ನೆರವಿನಿಂದಾಗಿ ನಿಗದಿತ 20 ಓವರ್‌ಗಳಲ್ಲಿ ಎಸ್‌ಆರ್‌ಹೆಚ್ ತಂಡ 5 ವಿಕೆಟ್ ಕಳೆದುಕೊಂಡು 186 ರನ್‌ಗಳಿಸಿತು. ಈ ಪಂದ್ಯದಲ್ಲಿ ಎಸ್‌ಆರ್‌ಹೆಚ್ ಪರ ಏಕಾಂಗಿಯಾಗಿ ಹೋರಾಡಿದ ಕ್ಲಾಸೆನ್ 51ಎಸೆತಗಳಲ್ಲಿ 104 ರನ್‌ಗಳಿಸಿದರು.
172 ರನ್‌ಗಳ ಜೊತೆಯಾಟ
ಈ ನಿರ್ಣಾಯಕ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಜೋಡಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿಯನ್ನು ಕಟ್ಟಿ ಹಾಕಲು ಸನ್‌ರೈಸರ್ಸ್ ಬೌಲರ್‌ಗಳಿಗೆ ಕೊನೆಯ ಹಂತದವರೆಗೂ ಸಾಧ್ಯವಾಗಲೇ ಇಲ್ಲ. ಆಕ್ರಮಣಕಾರಿಯಾಗಿ ಆಡಿದ ಈ ಜೋಡಿ 17.5 ಓವರ್‌ಗಳಲ್ಲಿ 172 ರನ್‌ಗಳ ಜೊತೆಯಾಟ ನೀಡಿದರು. ಈ ಮೂಲಕ ಆರ್‌ಸಿಬಿ ಬಹುತೇಕ ಗೆಲುವಿನ ಸನಿಹಕ್ಕೆ ತಲುಪಿತು. ಫಾಫ್ 47 ಎಸೆತಗಳಲ್ಲಿ 71 ರನ್‌ಗಳ ಕೊಡುಗೆ ನೀಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕದ ಗಡಿದಾಟಲು 62 ಎಸೆತಗಳನ್ನು ಬಳಸಿಕೊಂಡರು. ಆದರೆ ಶತಕ ಸಿಡಿಸಿದ ಬಳಿಕ ವಿರಾಟ್ ಮತ್ತೊಂದು ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್ ಕಳೆದುಕೊಂಡಿದ್ದಾರೆ. ಈ ಊಲಕ ವಿರಾಟ್ ಕೊಹ್ಲಿ 63 ಎಸೆತಗಳನ್ನು ಎದುರಿಸಿದ್ದು 100 ರನ್‌ಗೆ ಔಟಾದರು. ಈ ಸ್ಪೋಟಕ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್ ಒಳಗೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications