IPL 2023: ಮಕ್ಕಳ ಮೈದಾನದಲ್ಲಿ ಮಗುವಿನಂತಾದ ವಿರಾಟ್ ಕೊಹ್ಲಿ
ಐಪಿಎಲ್ 2023ರಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಮಿಂಚಿದ್ದರು. ಪಂದ್ಯದ ಬಳಿಕ ಅವರು ಮಕ್ಕಳಂತೆ ಖುಷಿಪಟ್ಟಿರುವ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಮಕ್ಕಳ ಒಳಾಂಗಣ ಆಟದ ಮೈದಾನದಲ್ಲಿ ಮಗುವಿನಂತೆ ಆಡುತ್ತಾ ಫೋಸ್ ನೀಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಕ್ಕಳ ಒಳಾಂಗಣ ಆಟದ ಮೈದಾನದಲ್ಲಿ ಮಗುವಿನಂತೆ ಆಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದು, ಮನಸ್ಸು ಮಗುವಿನಂತಾಗಿದೆ (ದಿಲ್ ತೊ ಬಚ್ಚಾ ಹೈ ಜಿ) ಎಂದು ಶೀರ್ಷಿಕೆ ನೀಡಿದ್ದಾರೆ. ಕೊಹ್ಲಿ ಮೈದಾನದಲ್ಲಿ ಎಷ್ಟೇ ಆಕ್ರಮಣಕಾಗಿ, ಕೋಪಿಷ್ಟ ಎನಿಸಿದರು ಮೈದಾನದ ಹೊರಗೆ ಅವರು ತುಂಬಾನೆ ಮೃದು ಸ್ವಭಾವದ ವ್ಯಕ್ತಿ.

ಪತ್ನಿ ಅನುಷ್ಕಾ ಶರ್ಮಾ, ಮಗಳು ವಾಮಿಕಾ ಕೊಹ್ಲಿಯ ಮುದ್ದಾದ ಪ್ರಪಂಚ, ಅದರಲ್ಲೂ ಮಗಳ ಜೊತೆ ಕೊಹ್ಲಿ ಮಗುವಿನಂತೆಯೇ ಆಗುತ್ತಾರೆ. "ತನ್ನ ಮೊಬೈಲ್ ಗ್ಯಾಲರಿಯಲ್ಲಿ ವಾಮಿಕಾ ಅವರ ಫೋಟೊಗಳೆ ತುಂಬಿದ್ದಾವೆ ಎಂದು ಸ್ವತಃ ಕೊಹ್ಲಿಯೇ ಹೇಳಿಕೊಂಡಿದ್ದರು. ಅವರು ಸಮಯ ಸಿಕ್ಕಾಗಲೆಲ್ಲಾ ಪತ್ನಿ ಅನುಷ್ಕಾ ಮತ್ತು ಮಗಳು ವಾಮಿಕಾ ಜೊತೆ ಕಾಲ ಕಳೆಯುತ್ತಾರೆ.
ಯಶಸ್ಸಿನ ಗುಟ್ಟು ಹಂಚಿಕೊಂಡ ವಿರಾಟ್ ಕೊಹ್ಲಿ
2023ರ ಐಪಿಎಲ್‌ನಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಎದುರಾಳಿಗಳ ತಂಡದ ಪ್ರಮುಖ ವೇಗದ ಬೌಲರ್ ಗಳ ವಿರುದ್ಧವೇ ಅವರು ಅಬ್ಬರಿಸಿದ್ದಾರೆ. ಜೋಫ್ರಾ ಆರ್ಚರ್, ಅನ್ರಿಚ್ ನೊಕಿಯಾ, ಮಾರ್ಕ್ ವುಡ್‌ರಂತಹ ಅಂತಾರಾಷ್ಟ್ರೀಯ ವೇಗಿಗಳ ವಿರುದ್ಧ ಕೊಹ್ಲಿ ಮಿಂಚಿದ್ದಾರೆ. ಈಗಾಗಲೇ 4 ಪಂದ್ಯಗಳಿಂದ ಮೂರು ಅರ್ಧಶತಕಗಳನ್ನು ಒಳಗೊಂಡಂತೆ 147.58 ಸ್ಟ್ರೈಕ್ ರೇಟ್‌ನಲ್ಲಿ 214 ರನ್ ಗಳಿಸಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಯಶಸ್ಸಿನ ಗುಟ್ಟನ್ನು ಹಂಚಿಕೊಂಡಿದ್ದಾರೆ, ಬೌಲರ್‌ಗಳ ಅತ್ಯುತ್ತಮ ಎಸೆತಗಳಲ್ಲಿ ಬೌಂಡರಿಗಳನ್ನು ಹೊಡೆಯುವ ಮೂಲಕ ಎದುರಾಳಿಗಳ ಮೇಲೆ ಹೇಗೆ ಒತ್ತಡ ಹೇರುತ್ತಾರೆ ಎನ್ನುವುದರ ಬಗ್ಗೆ ವಿವರಿಸಿದರು. ಸತತ ಎರಡು ಸೋಲಿನ ನಂತರ ಆರ್‌ಸಿಬಿ ಮತ್ತೆ ಗೆಲುವು ಸಾಧಿಸಿರುವುದಕ್ಕೆ ಅವರು ಸಂತೋಷಪಟ್ಟರು.
"ಅತ್ಯುತ್ತಮವಾಗಿ ಆಡುವಾಗ, ಬೌಲರ್ ಗಳು ಅತ್ಯುತ್ತಮವಾಗಿ ಬೌಲಿಂಗ್ ಮಾಡುವಾಗ ಉತ್ತಮ ಹೊಡೆತಗಳನ್ನು ಆಡುವ ಮೂಲಕ ಒತ್ತಡ ಹಾಕುತ್ತೇನೆ. ಅವರು ಮತ್ತೆ ಏನಾದರೂ ಮಾಡಲು ಪ್ರಯತ್ನಿಸಿದಾಗ ನಾನು ಅದರ ಲಾಭ ಪಡೆಯುತ್ತೇನೆ. ಎದುರಾಳಿ ತಂಡದ ಪ್ರಮುಖ ಬೌಲರ್ ವಿರುದ್ಧವೇ ಉತ್ತಮವಾಗಿ ರನ್ ಗಳಿಸಿದರೆ, ಉಳಿದ ಬೌಲರ್ ಗಳ ಮೇಲೆ ಒತ್ತಡ ಬೀಳುತ್ತದೆ" ಎಂದು ಹೇಳಿದರು.

ಮತ್ತೊಂದು ದಾಖಲೆಯ ಸನಿಹದಲ್ಲಿ ಕೊಹ್ಲಿ
2016ರ ಐಪಿಎಲ್ ಆವೃತ್ತಿಯಲ್ಲಿ ನೀಡಿದ ಪ್ರದರ್ಶನವನ್ನು ಮತ್ತೆ ಪುನರಾವರ್ತಿಸುವ ವಿಶ್ವಾಸದಲ್ಲಿದ್ದಾರೆ ಕೊಹ್ಲಿ, 2016ರಲ್ಲಿ ಅವರು 16 ಪಂದ್ಯಗಳಲ್ಲಿ ಏಳು ಅರ್ಧಶತಕ ಮತ್ತು ನಾಲ್ಕು ಅರ್ಧಶತಕ ಸೇರಿದಂತೆ 973 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದರು. ಈ ಬಾರಿ ಅವರು ಆಡುತ್ತಿರುವ ರೀತಿ ನೋಡಿದರೆ ಮತ್ತೆ ಆರೆಂಜ್ ಕ್ಯಾಪ್ ಗೆಲ್ಲುತ್ತಾರೆ ಎಂದು ಹಲವರು ಭವಿಷ್ಯ ನುಡಿದಿದ್ದಾರೆ.
ಐಪಿಎಲ್ 2023ರಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಮಾಡುವ ಸನಿಹದಲ್ಲಿದ್ದಾರೆ. ಐಪಿಎಲ್‌ನಲ್ಲಿ 7,000 ರನ್‌ಗಳನ್ನು ಪೂರೈಸಲು ಅವರಿಗೆ ಇನ್ನು ಕೇವಲ 162 ರನ್‌ಗಳ ಅಗತ್ಯವಿದೆ. ಈ ಆವೃತ್ತಿಯಲ್ಲಿ ಅವರು ಈ ದಾಖಲೆ ಮಾಡುವುದು ಖಚಿತವಾಗಿದೆ. ಈ ಮೂಲಕ ಅವರು ಐಪಿಎಲ್‌ನಲ್ಲಿ 7000 ರನ್ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications