ಗಿಲ್ ನೋಡಿ ಕಲಿ: ಪೃಥ್ವಿ ಶಾ ಸತತ ವೈಫಲ್ಯದ ಬಳಿಕ ಸೆಹ್ವಾಗ್ ಪ್ರತಿಕ್ರಿಯೆ
ಯುವ ಆಟಗಾರ ಪೃಥ್ವಿ ಶಾ ಈ ಬಾರಿಯ ಐಪಿಎಲ್‌ನ ಆರಂಭದಲ್ಲಿಯೇ ಹಿನ್ನಡೆ ಅನುಭವಿಸಿದ್ದಾರೆ. ಆರಂಭಿಕ ಎರಡು ಪಂದ್ಯಗಳಲ್ಲಿಯೂ ಅಗ್ಗಕ್ಕೆ ವಿಕೆಟ್ ಕಳೆದುಕೊಂಡಿರುವ ಪೃಥ್ವಿ ಶಾ ಬಗ್ಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪ್ರತಿಕ್ರಿಯಿಸಿದ್ದಾರೆ. ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿರುವ ರೀತಿಯನ್ನು ಉಲ್ಲೇಖಿಸಿರುವ ವಿರೇಂದ್ರ ಸೆಹ್ವಾಗ್ ಶುಬ್ಮನ್ ಗಿಲ್ ಅವರಿಂದ ಪೃಥ್ವಿ ಶಾ ಕಲಿಯುವುದು ಸಾಕಷ್ಟಿದೆ ಎಂದಿದ್ದಾರೆ.
ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಶಮಿ ಎಸೆತಕ್ಕೆ ಬೌಂಡರಿ ಬಾರಿಸುವ ಮೂಲಕ ಪೃಥ್ವಿ ಶಾ ಇನ್ನಿಂಗ್ಸ್ ಆರಂಭಿಸಿದರು. ಆದರೆ ಬಳಿಕ ಶಮಿ ಎಸೆದ ಶಾರ್ಟ್ ಎಸೆತವನ್ನು ಅರ್ಥೈಸುವಲ್ಲಿ ವಿಫಲವಾದ ಶಾ ವಿಕೆಟ್ ಕಳೆದುಕೊಂಡರು. ಮಿಡ್ ಆನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅಲ್ಜಾರಿ ಜೋಸೆಫ್ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವಿಚಾರದಲ್ಲಿ ಶುಬ್ಮನ್ ಗಿಲ್ ಅವರಲ್ಲಿರುವ ಅಸ್ತ್ರವನ್ನು ಶಾ ಉಪಯೋಸಿಸಿಉಕೊಳ್ಳಬೇಕು ಎಂದಿದ್ದಾರೆ.

"ಪೃಥ್ವಿ ಶಾ ಈ ರೀತಿಯ ಹೊಡೆತಗಳನ್ನು ಬಾರಿಸಿ ಹಲವು ಬಾರಿ ವಿಕೆಟ್ ಕಳೆದುಕೊಂಡಿದ್ದಾರೆ. ಆದರೆ ಅವರು ತಮ್ಮ ತಪ್ಪುಗಳನ್ನು ಕಲಿತುಕೊಳ್ಳಬೇಕಲ್ವ? ಅವರೊಂದಿಗೆ ಅಂಡರ್ 19 ತಂಡದಲ್ಲಿ ಆಡಿದ ಶುಬ್ಮನ್ ಗಿಲ್ ಅವರನ್ನು ನೋಡಿ. ಆತ ಭಾರತದ ಟೆಸ್ಟ್, ಏಕದಿಮ ಹಾಗೂ ಟಿ20 ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆದರೆ ಶಾ ಇನ್ನು ಕೂಡ ಐಪಿಎಲ್‌ನಲ್ಲಿ ಪರದಾಡುತ್ತಿದ್ದಾರೆ" ಎಂದಿದ್ದಾರೆ ಪೃಥ್ವಿ ಶಾ.
"ಐಪಿಎಲ್‌ನಂಥಾ ವೇದಿಯಲಕ್ಲಿ ಆತ ಸಾಕಷ್ಟು ರನ್‌ಗಳನ್ನು ಗಳಿಸಬೇಕು. ಋತುರಾಜ್ ಗಾಯಕ್ವಾಡ್ ಐಪಿಎಲ್ ಆವೃತ್ತಿಯೊಂದರಲ್ಲಿ 600ಕ್ಕೂ ಅಧಿಕ ರನ್‌ಗಳಿಸಿದ್ದಾರೆ. ಶುಬ್ಮನ್ ಗಿಲ್ ಕೂಡ ದೊಡ್ಡ ಮೊತ್ತದ ರನ್ ಬಾರಿಸಿದ್ದಾರೆ. ಅದೇ ರೀತಿಯಾಗಿ ಶಾ ಕೂಡ ಐಪಿಎಲ್‌ನಲ್ಲಿ ಸ್ಥಿರವಾದ ಪ್ರದರ್ಶನ ನೀಡುತ್ತಾ ರನ್‌ಗಳಿಸಬೇಕು" ಎಂದಿದ್ದಾರೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್.
ಪೃಥ್ವಿ ಶಾ ಈ ಬಾರಿಯ ಆವೃತ್ತಿಯಲ್ಲಿ ಮೊದಲ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಿದ್ದರು. ಆ ಪಂದ್ಯದಲ್ಲಿ ಪೃಥ್ವಿ ಶಾ ಕೇವಲ 12 ರನ್‌ಗಳಿಸಿ ಮಾರ್ಕ್ ವುಡ್ ಎಸೆತದಲ್ಲಿ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿದರು. ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ 50 ರನ್‌ಗಳ ಭಾರಿ ಅಂತರದ ಸೋಲು ಅನುಭವಿಸಿ ನಿರಾಸೆಗೆ ಒಳಗಾಗಿತ್ತು. ಇನ್ನು ಮಂಗಳವಾರ ನಡೆದ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿಯೂ ಡೆಲ್ಲಿ ಕ್ಯಾಪಿಟಲ್ಸ್ ಸೋಲು ಕಂಡಿದೆ.
ಇನ್ನು ಪೃಥ್ವಿ ಶಾ ಐಪಿಎಲ್‌ನಲ್ಲಿ ಒಟ್ಟು 65 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದು 1607 ರನ್‌ಗಳನ್ನು ಗಳಿಸಿದ್ದಾರೆ. 24.72ರ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿರುವ ಅವರು 147.3ರ ಸ್ಟ್ರೈಕ್‌ರೇಟ್ ಹೊಂದಿದ್ದಾರೆ. 12 ಅರ್ಧ ಶತಕಗಳನ್ನು ಪೃಥ್ವಿ ಶಾ ಬಾರಿಸಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 99 ರನ್‌ಗಳಿಸಿದ್ದು ಐಪಿಎಲ್‌ನಲ್ಲಿ ಅವರ ಅತಿ ಹೆಚ್ಚಿನ ಸ್ಕೋರ್ ಆಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಸ್ಕ್ವಾಡ್ ಹೀಗಿದೆ : ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಯಶ್ ಧುಲ್, ಫಿಲ್ ಸಾಲ್ಟ್, ಸರ್ಫರಾಜ್ ಖಾನ್, ಮನೀಶ್ ಪಾಂಡೆ, ರಿಲೀ ರೋಸೌವ್, ರಿಪಾಲ್ ಪಟೇಲ್, ರೋವ್ಮನ್ ಪೊವೆಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ಅಕ್ಸರ್ ಪಟೇಲ್, ಅಮನ್ ಖಾನ್, ವಿಕ್ಕಿ ಒಸ್ತ್ವಾಲ್, ಕುಲದೀಪ್ ಯಾದವ್, ಪ್ರವೀಣ್ ದುಬೆ, ಅನ್ರಿಚ್ ನಾರ್ಟ್ಜೆ, ಚೇತನ್ ಸಕರಿಯಾ, ಕಮಲೇಶ್ ನಾಗರಕೋಟಿ, ಖಲೀಲ್ ಅಹ್ಮದ್, ಲುಂಗಿ ಎನ್‌ಗಿಡಿ, ಮುಸ್ತಾಫಿಜುರ್ ರೆಹಮಾನ್, ಇಶಾಂತ್ ಶರ್ಮಾ, ಮುಖೇಶ್ ಕುಮಾರ್, ಅಭಿಷೇಕ್ ಪೊರೆಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications