IPL 2023: ಧೋನಿ ಬ್ಯಾನ್ ಆಗುವ ಬಗ್ಗೆ CSK ತಂಡಕ್ಕೆ ಎಚ್ಚರಿಕೆ ನೀಡಿದ ವೀರೇಂದ್ರ ಸೆಹ್ವಾಗ್!
ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿದೆ. ಆರ್‌ಸಿಬಿ ವಿರುದ್ಧ ಗೆಲುವು ಸಾಧಿಸಿದ ಬಳಿಕ ಎಂಎಸ್ ಧೋನಿ ನೇತೃತ್ವದ ಸಿಎಸ್‌ಕೆ ಎರಡು ಸೋಲು ಹಾಗೂ ಮೂರು ಗೆಲುವುಗಳಿಂದಾಗಿ 6 ಅಂಕಗಳನ್ನು ಪಡೆದುಕೊಂಡಿದ್ದು 3ನೇ ಸ್ಥಾನದಲ್ಲಿದೆ. ಆರ್‌ಸಿಬಿ ವಿರುದ್ಧದ ರೋಚಕ ಗೆಲುವು ಸಿಎಸ್‌ಕೆ ತಂಡಕ್ಕೆ ಮತ್ತಷ್ಟು ಆತ್ಮವಿಶ್ವಾಸ ನೀಡಿರುವುದರಲ್ಲಿ ಅನುಮಾನವಿಲ್ಲ. ಆದರೆ ಈ ಸಂದರ್ಭದಲ್ಲಿ ಆರ್‌ಸಿಬಿ ತಂಡದ ಬೌಲರ್‌ಗಳಿಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕಠಿಣ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್‌ಗಳು ಅತಿಯಾಗಿ ವೈಡ್ ಹಾಗೂ ನೋಬಾಲ್‌ಗಳನ್ನು ಎಸೆಯುತ್ತಿರುವುದನ್ನು ಉಲ್ಲೇಖಿಸಿರುವ ವೀರೇಂದ್ರ ಸೆಹ್ವಾಗ್ ಬೌಲರ್‌ಗಳನ್ನು ಟೀಕಿಸಿದ್ದಾರೆ. ಹೀಗೆ ಅತಿಯಾಗಿ ವೈಡ್ ನೋ-ಬಾಲ್ ಎಸೆಯುವುದರಿಂದಾಗಿ ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣಕ್ಕೆ ನಾಯಕ ಎಂಎಸ್ ಧೋನಿ ನಿಶೇಧಕ್ಕೂ ಒಳಗಾಗಬಹುದು ಎಂದು ಎಚ್ಚರಿಸಿದ್ದಾರೆ ಸೆಹ್ವಾಗ್.

ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ವಿಭಾಗ ಸಾಕಷ್ಟು ಹೆಚ್ಚುವರಿ ರನ್‌ಗಳನ್ನು ಬಿಟ್ಟುಕೊಡುತ್ತಿದೆ. ಸೋಮವಾರ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿಯೂ ಇದು ಮುಂದುವರಿದಿತ್ತು. ಸಿಎಸ್‌ಕೆ ಬೌಲಿಂಗ್ ವಿಭಾಗ ಆರ್‌ಸಿಬಿ ವಿರುದ್ಧ ಪಂದ್ಯದಲ್ಲಿ 11 ಎಕ್ಸ್ಟ್ರಾ ರನ್‌ಗಳನ್ನು ಬಿಟ್ಟುಕೊಟ್ಟಿತ್ತು. ಇದರಲ್ಲಿ 6 ವೈಡ್‌ಗಳ ರೂಪದಲ್ಲಿ ಬಂದಿತ್ತು.
ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಗೆಲುವು ಸಾಧಿಸಿದ ಬಳಿಕ ವೀರೇಂದ್ರ ಸೆಹ್ವಾಗ್ ಹೇಳಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಉಲ್ಲೇಖಿಸಿ ವರದಿ ಮಾಡಿದೆ. ಈ ಹೇಳಿಕೆಯಲ್ಲಿ ಸೆಹ್ವಾಗ್ ಚೆನ್ನೈ ಬೌಲರ್‌ಗಳು ಅತಿಯಾದ ವೈಡ್‌ಗಳನ್ನು ಎಸೆಯುತ್ತಿರುವುದು ಧೋನಿಗೂ ಅಸಮಾಧಾನ ತರಿಸಿದೆ ಎಂದಿದ್ದಾರೆ. ಹೀಗೆ ಮತ್ತೆ ಮತ್ತೆ ನಿಧಾನ ಗತಿಯ ಬೌಲಿಂಗ್ ನಡೆಸಿದರೆ ಸಿಎಸ್‌ಕೆ ನಾಯಕ ಧೋನಿ ನಿಶೇಧಕ್ಕೆ ಗುರಿಯಾಗಬಹುದು ಎಂದಿದ್ದಾರೆ.
"ಮೊಣಕಾಲಿನ ನೋವಿನ ಮಧ್ಯೆಯೂ ಧೋಣಿ ಈ ಪಂದ್ಯದಲ್ಲಿ ಆಡಿದ್ದರು. ಮುಂದೆ ಅವರು ಕೆಲವೇ ಪಂದ್ಯಗಳಲ್ಲಿ ಮಾಯತ್ರ ಆಡುವುದನ್ನು ಕಾಣಬಹುದು. ಅವರು ತಮ್ಮನ್ನು ತಾವು ಉತ್ತೇಜಿಸುತ್ತಿದ್ದರು ಆದರೆ ಅವರ ಬೌಲರ್‌ಗಳು ಮಾತ್ರ ವೈಡ್ ಹಾಗೂ ನೋಬಾಲ್‌ಗಳನ್ನು ಮಾಡುತ್ತಿದ್ದಾರೆ. ಹೀಗಾದಲ್ಲಿ ಧೋನಿ ವಿಶ್ರಾಂತಿ ಪಡೆಯುವುದು ಅನಿವಾರ್ಯವಾಗಬಹುದು" ಎಂದಿದ್ದಾರೆ ಸೆಹ್ವಾಗ್.
ಇನ್ನು ಇದೇ ಸಂದರ್ಭದಲ್ಲಿ ಸೆಹ್ವಾಗ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ದುರ್ಬಲವಾಗಿದೆ ಎಂದು ಹೇಳಿದ್ದಾರೆ. "ನಾನು ಟೂರ್ನಿಯ ಆರಂಭದ ದಿನದಿಂದಲೂ ಸಿಎಸ್‌ಕೆ ತಂಡದ ಬೌಲಿಂಗ್ ದುರ್ಬಲವಾಗಿದೆ ಎಂದು ಹೇಳುತ್ತಿದ್ದೇನೆ. ಅವರು ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಪ್ರಗತಿ ಸಾಧಿಸಬೇಕಿದೆ. ತಮ್ಮಲ್ಲಿರುವ ಸಂಪನ್ಮೂಲಗಳನ್ನು ಅವರು ಸಾಧ್ಯವಾದಷ್ಟು ಬಳಸಿಕೊಳ್ಳಬೇಕು"
"ಬೌಲರ್‌ಗಳು ಸಾಕಷ್ಟು ನಿಖರವಾಗಿರಬೇಕು. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 30-35 ಡಾಟ್ ಬಾಲ್‌ಗಳನ್ನು ಎಸೆದರು. ಅಂದರೆ 6 ಓವರ್‌ಗಳಲ್ಲಿ ಅವರು ರನ್ ನೀಡಲೇ ಇಲ್ಲ. ಹಾಗಿದ್ದರು ಕೂಡ ಅವರು 218 ರನ್‌ಗಳನ್ನು ಬಿಟ್ಟುಕೊಟ್ಟರು, ಯಾಕೆಂದರೆ ಸಾಕಷ್ಟು ಪ್ರಮಾಣದಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳು ಬಂದವು" ಎಂದಿದ್ದಾರೆ ಸೆಹ್ವಾಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications