Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಇಂಪ್ಯಾಕ್ಟ್ ಪ್ಲೇಯರ್ ನಿಯಮ ಎಂದರೇನು? ತಂಡಗಳ ಇದ್ದನ್ನ ಹೇಗೆ ಬಳಸಿಕೊಳ್ಳಬಹುದು?

ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ಸಿಗಲಿದೆ. ಮೊದಲನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.

2023ರ ಐಪಿಎಲ್‌ನಲ್ಲಿ ಹಲವು ಹೊಸ ನಿಯಮಗಳು ಜಾರಿಯಾಗಲಿವೆ. ಅದರಲ್ಲಿ ಮುಖ್ಯವಾಗಿರುವುದು, ಇಂಪ್ಯಾಕ್ಟ್ ಪ್ಲೇಯರ್ ಎನ್ನುವ ಹೊಸ ನಿಯಮ. ದೇಶೀಯ ಕ್ರಿಕೆಟ್ ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಈ ನಿಯಮವನ್ನು ಜಾರಿ ಮಾಡಿದ್ದ ಬಿಸಿಸಿಐ, ಅಲ್ಲಿ ಯಶಸ್ವಿಯಾದ ಬಳಿಕ ಐಪಿಎಲ್‌ನಲ್ಲಿ ಪರಿಚಯಿಸಲು ಮುಂದಾಗಿದೆ.

IPL 2023: What Is Impact Player Rule How It Helps Team To Perfrom Well Explained

ಏನಿದು ಇಂಪ್ಯಾಕ್ಟ್ ಪ್ಲೇಯರ್ ನಿಯಮ? ಇದರಿಂದ ತಂಡಗಳಿಗೆ ಹೇಗೆ ಅನುಕೂಲ, ಹೊಸ ನಿಯಮದಿಂದ ಆಗುವ ಅನುಕೂಲ, ಅನಾನುಕೂಲಗಳ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆಯುತ್ತಿದೆ. ಎಲ್ಲಾ ಹತ್ತು ತಂಡಗಳು ಈ ಹೊಸ ನಿಯಮವನ್ನು ಪರಿಗಣಿಸಿಯೇ ಮಿನಿ ಹರಾಜಿನಲ್ಲಿ ಹಲವು ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿವೆ.

ಪ್ಲೇಯಿಂಗ್ 11 ಅಲ್ಲ ಪ್ಲೇಯಿಂಗ್ 12!

ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಳಿಕ ಇದು ಪ್ಲೇಯಿಂಗ್ 11 ಬದಲಾಗಿ ಪ್ಲೇಯಿಂಗ್ 12 ಎನ್ನುವಂತಾಗಲಿದೆ. ಆಟದ ಮಧ್ಯದಲ್ಲಿ ಒಬ್ಬ ಆಟಗಾರನ ಬದಲಾಗಿ ಇನ್ನೊಬ್ಬ ಆಟಗಾರನನ್ನು ಕಣಕ್ಕಿಳಿಸಲು ಅನುಮತಿ ನೀಡುತ್ತದೆ. ಈ ಮೊದಲು ಕೂಡ ಆಟಗಾರ ಗಾಯಗೊಂಡರೆ, ಆತನ ಬದಲಾಗಿ ಇನ್ನೊಬ್ಬ ಆಟಗಾರನಿಗೆ ಆಡಲು ಅನುಮತಿ ನೀಡಲಾಗುತ್ತಿತ್ತು. ಆದರೆ, ಬದಲೀ ಆಟಗಾರನಿಗೆ ಬೌಲಿಂಗ್ ಮಾಡಲು ಅಥವಾ ಬ್ಯಾಟಿಂಗ್ ಮಾಡಲು ಅನುಮತಿ ಸಿಗುತ್ತಿರುಲಿಲ್ಲ.

IPL 2023: What Is Impact Player Rule How It Helps Team To Perfrom Well Explained

ಆದರೆ, ಹೊಸ ನಿಯಮದ ಪ್ರಕಾರ ಇಂಪ್ಯಾಕ್ಟ್ ಪ್ಲೇಯರ್ ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡಲು ಅನುಮತಿ ನೀಡಲಾಗಿದೆ. ಇದು ಆಟದಲ್ಲಿ ಮತ್ತಷ್ಟು ರೋಚಕತೆ ತರುತ್ತದೆ ಎಂದು ನಂಬಲಾಗಿದೆ. ಟಾಸ್‌ನ ನಂತರ ಪ್ಲೇಯಿಂಗ್ 11 ಹೆಸರಿಸುವಾಗ ಐದು ಇಂಪ್ಯಾಕ್ಟ್ ಆಟಗಾರರ ಹೆಸರನ್ನು ನೀಡಬೇಕಾಗುತ್ತದೆ. ಪಂದ್ಯದ ಆರಂಭದ 14 ಓವರ್ ಗಳಿಗೆ ಮೊದಲು ಆಡುವ ಬಳಗದಲ್ಲಿ ಒಬ್ಬ ಆಟಗಾರನ ಬದಲಾಗಿ ಇಂಪ್ಯಾಕ್ಟ್ ಆಟಗಾರರ ಪಟ್ಟಿಯಲ್ಲಿ ಒಬ್ಬನ ಜೊತೆ ಬದಲಾಯಿಸಬಹುದು.

ಅಂಪೈರ್ ಗೆ ಮೊದಲಬೇ ಮಾಹಿತಿ ನೀಡಬೇಕು

ತಂಡದ ನಾಯಕ ಮೊದಲು ಹೋಗಿ ಅಂಪೈರ್ ಗೆ ಈ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಅಂಪೈರ್ ಸೂಚನೆ ನೀಡಿದ ಬಳಕೆ ಇಂಪ್ಯಾಕ್ಟ್ ಪ್ಲೇಯರ್ ಮೈದಾನಕ್ಕೆ ಬರುತ್ತಾನೆ. ಉದಾಹರಣೆಗೆ: ಮೊದಲು ಬೌಲಿಂಗ್ ಮಾಡುತ್ತಿರುವ ತಂಡದಲ್ಲಿ ಒಬ್ಬ ಬೌಲರ್ 4 ಓವರ್ ಬೌಲ್ ಮಾಡಿದ ನಂತರ, 14ನೇ ಓವರ್ ಬಳಿಕ ಇನ್ನೊಬ್ಬ ಬೌಲರ್ ಬದಲಿಯಾಗಿ ಒಳಗೆ ಬರಬಹುದು ಆತನಿಗೂ 4 ಓವರ್ ಬೌಲಿಂಗ್ ಮಾಡಲು ಅವಕಾಶ ಇರುತ್ತದೆ. ಬ್ಯಾಟಿಂಗ್ ಮಾಡುವ ತಂಡ ಕೂಡ ಮತ್ತೊಬ್ಬ ಬ್ಯಾಟರ್ ಗೆ ಬದಲಾವಣೆ ಮಾಡಬಹುದು.

IPL 2023: What Is Impact Player Rule How It Helps Team To Perfrom Well Explained

ಆದರೆ ಈ ನಿಯಮಕ್ಕೆ ಕೆಲವು ಷರತ್ತುಗಳು ಕೂಡ ಇವೆ. ಮೊದಲನೆಯದಾಗಿ ಇದು ಭಾರತದ ಆಟಗಾರರಿಗೆ ಮಾತ್ರ ಅನ್ವಯಿಸುತ್ತದೆ. ವಿದೇಶಿ ಆಟಗಾರರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಬೇಕಾದರೆ, ಪ್ಲೇಯಿಂಗ್ 11ನಲ್ಲಿ ಮೂವರು ವಿದೇಶಿ ಆಟಗಾರರು ಮಾತ್ರ ಇರಬೇಕು, ನಂತರ ನಾಲ್ಕನೇ ವಿದೇಶಿ ಆಟಗಾರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬರಬಹುದು. ವಿದೇಶಿ ಆಟಗಾರನಿಗೆ ಬದಲಾಗಿ ಭಾರತೀಯ ಆಟಗಾರ ಇಂಪ್ಯಾಕ್ಟ್ ಪ್ಲೇಯರ್ ಆಗಬಹುದು. ಒಮ್ಮೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಆಟಗಾರನನ್ನು ಮತ್ತೆ ಬದಲಿಸಲು ಯಾವುದೇ ಅವಕಾಶ ಇಲ್ಲ.

ಹೊಸ ನಿಯಮದ ಬಗ್ಗೆ ಎಲ್ಲಾ ತಂಡಗಳು ಈಗಾಗಲೆ ಭಾರಿ ಕುತೂಹಲಗೊಂಡಿವೆ. ಇದರೊಂದಿಗೆ ಎಲ್ಲಾ ತಂಡಗಳಿಗೂ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿದೆ. ಈ ನಿಯಮದ ಜೊತೆಗೆ ವೈಡ್ ಮತ್ತು ನೋಬಾಲ್ ತೀರ್ಪುಗಳ ಪರಿಶೀಲನೆಗೆ ಕೂಡ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇತ್ತೀಚೆಗೆ ಮುಕ್ತಾಯವಾದ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಈ ನಿಯಮ ಜಾರಿಯಾಗಿತ್ತು.

Story first published: Thursday, March 30, 2023, 13:14 [IST]
Other articles published on Mar 30, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+