ಐಪಿಎಲ್ ಇತಿಹಾಸದಲ್ಲಿ 20ನೇ ಓವರ್‌ನಲ್ಲಿ ಅತ್ಯಂತ ಹೆಚ್ಚು ರನ್‌ಗಳಿಸಿದ ಆಟಗಾರ ಯಾರು?

ಇಂಡಿಯನ್ ಪ್ರೀಮಿಯರ್ ಲೀಗ್ ಕಳೆದ 15 ಆವೃತ್ತಿಗಳಲ್ಲಿ ಕ್ರಿಕೆಟ್ ಲೋಕದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಕ್ರೀಡಾ ಲೋಕದಲ್ಲಿಯೇ ವಿಶೇಷ ಮಾನ್ಯತೆ ಹೊಂದಿರುವ ಐಪಿಎಲ್ ಕ್ರಿಕೆಟ್‌ನ ಅತ್ಯಂತ ಶ್ರೀಮಂತ ಲೀಗ್ ಎಂಬ ಹೆಗ್ಗಳಿಕೆ ಕೂಡ ಹೊಂದಿದೆ. ಈ ಪ್ರತಿಷ್ಠಿತ ಐಪಿಎಲ್‌ನಲ್ಲಿ ಸಾಕಷ್ಟು ದಾಖಲೆಗಳು ಸೃಷ್ಟಿಯಾಗಿದ್ದು ಮತ್ತಷ್ಟು ದಾಖಲೆಗಳಿಗಾಗಿ ಅಬಿಮಾನಿಗಳು ಎದುರು ನೋಡುತ್ತಿದ್ದಾರೆ.
ಕಳೆದ 15 ಆವೃತ್ತಿಗಳ ಐಪಿಎಲ್ ಟೂರ್ನಿಯಲ್ಲಿ ಅನೇಕ ಅಪರೂಪದ ದಾಖಲೆಗಳ ಬಗ್ಗೆ ಕ್ರಿಕೆಟ್ ಪ್ರೇಮಿಗಳಾಗಿ ನಿಮಗೆ ಮಾಹಿತಿಯಿರುತ್ತದೆ. ಆದರೆ 20ನೇ ಓವರ್‌ನಲ್ಲಿ ಅತ್ಯಂತ ಹೆಚ್ಚು ರನ್ ಪೇರಿಸಿದ ಕ್ರಿಕೆಟಿಗ ಯಾರು? ಆ ದಾಖಲೆ ಯಾರ ಹೆಸರಿನಲ್ಲಿದೆ ಎಂಬುದು ನಿಮಗೆ ತಿಳಿದಿದೆಯಾ? ಈ ಬಗೆಗಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ ಮುಂದೆ ಓದಿ..
ಟಿ20 ಮಾದರಿಯಲ್ಲಿ 20 ಓವರ್ ಬಹಳ ಮಹತ್ವ ಪಡೆದುಕೊಂಡಿರುತ್ತದೆ. ಈ ಕಡೇಯ ಒಂದು ಓವರ್‌ನಲ್ಲಿ ಅದೆಷ್ಟೋ ಪಂದ್ಯಗಳ ಫಲಿತಾಂಶ ಬುಡಮೇಲಾಗಿರುವ ಉದಾಹರಣೆಗಳು ಇದೆ. ಹೀಗಾಗಿ 20 ಓವರ್‌ನಲ್ಲಿ ಅತ್ಯಂತ ಹೆಚ್ಚು ರನ್‌ಗಳಿಸಿದ ದಾಖಲೆಯನ್ನು ಯಾರು ಹೊಂದಿದ್ದಾರೆ ಎಂಬುದು ಸಹಜವಾಗಿಯೇ ಕುತೂಹಲ ಕೆರಳಿಸುತ್ತದೆ.
ಅಂದಹಾಗೆ ಐಪಿಎಲ್ ಇತಿಹಾಸದಲ್ಲಿ 20 ಓವರ್‌ನಲ್ಲಿ ಅತ್ಯಂತ ಹೆಚ್ಚು ರನ್‌ಗಳಿಸಿದ ಕ್ರಿಕೆಟಿಗ ಎಂಬ ದಾಖಲೆ ಹೊಂದಿರುವ ಆಟಗಾರ ಬೇರೆ ಯಾರೂ ಅಲ್ಲ. ವಿಶ್ವ ಶ್ರೇಷ್ಠ ಫಿನಿಷರ್ ಎಂದು ಖ್ಯಾತವಾಗಿರುವ ಎಂಎಸ್ ಧೋನಿ. 20ನೇ ಓವರ್‌ನಲ್ಲಿ ಅವರು ಈವರೆಗೆ 655 ರನ್‌ಗಳನ್ನು ಗಳಿಸಿದ್ದಾರೆ. ಈ ಅಂತಿಮ ಓವರ್‌ನಲ್ಲಿ ಅವರ ಸ್ಟ್ರೈಕ್‌ರೇಟ್ ಬರೊಬ್ಬರಿ 243 ಎಂಬುದು ಮತ್ತೊಂದ ಗಮನಾರ್ಹ ಅಂಶ.
ಎಂಎಸ್ ಧೋನಿ ಐಪಿಎಲ್‌ನಲ್ಲಿ 86 ಸಂದರ್ಭಗಳಲ್ಲಿ 20ನೇ ಓವರ್‌ನಲ್ಲಿ ಬೌಲರ್‌ಗಳನ್ನು ಎದುರಿಸಿದ್ದಾರೆ. ಈಪೈಕಿ ಅವರು ಕಢವಲ 24 ಬಾರಿ ಮಾತ್ರವೇ ವಿಕೆಟ್ ಕಳೆದುಕೊಂಡಿದ್ದಾರೆ. ಇದು ಕೂಡ ಅದ್ಭುತ ದಾಖಲೆ. ಯಾಕೆಂದರೆ ಬಹುತೇಕ ಆಟಗಾರರು ಈ ಒತ್ತಡದ ಸಂದರ್ಭದಲ್ಲಿ ಸಿಕ್ಸರ್ ಸಿಡಿಸಲು ಮುಂದಾಗಿ ಹೆಚ್ಚು ವಿಕೆಟ್ ಕಳೆದುಕೊಳ್ಳುವುದು ಸಾಮಾನ್ಯ. ಆದರೆ ಇಲ್ಲಿಯೂ ಧೋನಿ ತಾನು ಯಾಕೆ ವಿಶ್ವ ಶ್ರೇಷ್ಠ ಫಿನಿಷರ್ ಎಂದು ಸಾಬೀತುಪಡಿಸಿದ್ದಾರೆ.
20ನೇ ಓವರ್‌ನಲ್ಲಿ ಎಂಎಸ್ ಧೋನಿ 52 ಸಿಕ್ಸರ್ ಬಾರಿಸಿದ್ದು, 57 ಸಿಂಗಲ್ ಹಾಗೂ 44 ಬಾರಿ ಎರಡು ರನ್‌ಗಳನ್ನು ಗಳಿಸಿದ್ದಾರೆ. ಇನ್ನು 48 ಬಾರಿ ಅವರು ಬೌಂಡರಿ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಮಾಹಿ 20ನೇ ಓವರ್ ಆಡುವಾಗ ಅವರ ಸ್ಟ್ರೈಕ್‌ರೇಟ್ ಬರೊಬ್ಬರಿ 243ರಷ್ಟಿದೆ.
ಇನ್ನು ಎಂಎಸ್ ಧೋನಿಯ ಬಳಿಕ ಈ ದಾಖಲೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಟಗಾರ ಮುಂಬೈ ಇಂಡಿಯನ್ಸ್ ತಂಡದ ಆಜಿ ಆಟಗಾರ ಕಿರಾನ್ ಪೊಲಾರ್ಡ್. ಪೊಲಾರ್ಡ್ ಐಪಿಎಲ್‌ನಲ್ಲಿ 20ನೇ ಓವರ್‌ನಲ್ಲಿ 405 ರನ್‌ಗಳನ್ನು ಗಳಿಸಿದ್ದು 214 ಸ್ಟ್ರೈಕ್‌ರೇಟ್ ಹೊಂದಿದ್ದಾರೆ.
ಎಂಎಸ್ ಧೋನಿಯ ಅಂತಿಮ ಆವೃತ್ತಿಯಾಗಿದೆಯಾ ಐಪಿಎಲ್ 2023?: ಇನ್ನು ಈ ಬಾರಿಯ ಐಪಿಎಲ್ ಟೂರ್ನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರ ಕೊನೆಯ ಐಪಿಎಲ್ ಆವೃತ್ತಿ ಆಗಲಿದೆಯಾ ಎಂಬುದು ಪ್ರಶ್ನೆಯಾಗಿದೆ. ಈ ಹಿಂದೆ ಸಿಎಸ್‌ಕೆ ತಂಡದ ತವರು ಮೈದಾನವಾಗಿರುವ ಚೆಪಾಕ್‌ನಲ್ಲಿ ಆಡಿದ ಬಳಿಕ ನಿವೃತ್ತಿ ಹೇಳುವ ಸೂಚನೆ ನೀಡಿದ್ದ ಎಂಎಸ್ ಧೋನಿ ಈ ಬಾರಿ ತವರಿನ ಅಂಗಳದಲ್ಲಿ ಆಡುವ ಅವಕಾಶ ದೊರೆತಿರುವ ಹಿನ್ನೆಲೆಯಲ್ಲಿ ಮಾಹಿ ಟೂರ್ನಿ ಅಂತ್ಯವಾಗುತ್ತಿದ್ದಂತೆಯೇ ನಿವೃತ್ತಿ ಹೇಳುವ ಸಾಧ್ಯತೆಗಳು ಇದೆ ಎನ್ನಲಾಗಿದೆ. ಆದರೆ ಸಿಎಸ್‌ಕೆ ಫ್ರಾಂಚೈಸಿಯಾಗಲಿ ಅಂತಾ ಸ್ವತಃ ಧೋನಿಯಾಗಲಿ ಈ ಬಗ್ಗೆ ಯಾವುದೇ ಸುಳಿವು ನೀಡಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್ ಸಂಪೂರ್ಣ ಸ್ಕ್ವಾಡ್: ಮಹೇಂದ್ರ ಸಿಂಗ್ ಧೋನಿ (ನಾಯಕ ಮತ್ತು ವಿಕೆಟ್ ಕೀಪರ್), ಮೊಯಿನ್ ಅಲಿ, ಭಗತ್ ವರ್ಮಾ, ದೀಪಕ್ ಚಾಹರ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ತುಷಾರ್ ದೇಶಪಾಂಡೆ, ಶಿವಂ ದುಬೆ, ಋತುರಾಜ್ ಗಾಯಕ್ವಾಡ್, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜಾ, ಸಿಸಂಡ ಮಗಲ, ಅಜಯ್ ಮಂಡಲ್, ಮುಖೇಶ್ ಚೌಧರಿ, ಮಥೀಶ ಪತಿರಾಣ, ಡ್ವೈನ್ ಪ್ರಿಟೋರಿಯಸ್, ಅಜಿಂಕ್ಯ ರಹಾನೆ, ಶೇಕ್ ರಶೀದ್, ಅಂಬಾಟಿ ರಾಯುಡು, ಮಿಚೆಲ್ ಸ್ಯಾಂಟ್ನರ್, ಸುಭ್ರಾಂಶು ಸೇನಾಪತಿ, ಸಿಮರ್ಜೀತ್ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಬೆನ್ ಸ್ಟೋಕ್ಸ್, ಮಹೇಶ್ ತೀಕ್ಷಣ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications